Chanakya Niti : ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ ಮತ್ತು ತಂತ್ರಜ್ಞ. ಅವರು ನೀತಿಶಾಸ್ತ್ರವನ್ನು ರಚಿಸಿದರು, ಅದರಲ್ಲಿ ಅವರು ಸಂಪತ್ತು, ಆಸ್ತಿ, ಮಹಿಳೆಯರು, ಸ್ನೇಹಿತರು, ವೃತ್ತಿ ಮತ್ತು ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಆಳವಾಗಿ ಉಲ್ಲೇಖಿಸಿದ್ದಾರೆ. ಚಾಣಕ್ಯ ಅವರು ಯಾವಾಗಲೂ ತಮ್ಮ ನೀತಿಗಳಿಂದ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಆಚಾರ್ಯ ಚಾಣಕ್ಯನ ನೀತಿಗಳನ್ನು ಅನುಸರಿಸುವ ವ್ಯಕ್ತಿಯು ತನ್ನ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾನೆ ಎಂದು ನಂಬಲಾಗಿದೆ. ಇಂದು ನಾವು ಚಾಣಕ್ಯ ಅವರ ನೀತಿಯ ಬಗ್ಗೆ ತಿಳಿಯೋಣ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Astrology Tips: ಕಾಗೆಗಳಿಗೆ ಆಹಾರ ನೀಡುವುದರಿಂದ ಈ ಗ್ರಹ ದೋಷ ದೂರವಾಗುತ್ತೆ


1. ತಾಳ್ಮೆ ಹೊಂದಿರುವ ಮಹಿಳೆಯರು:


ಆಚಾರ್ಯ ಚಾಣಕ್ಯ ಹೇಳುವಂತೆ ತಾಳ್ಮೆ ಹೊಂದಿರುವ ಮಹಿಳೆಯರು ಪತಿ ಮತ್ತು ಅತ್ತೆಗೆ ಅದೃಷ್ಟವಂತರು. ಏಕೆಂದರೆ ಅವಳು ಕಷ್ಟದ ಸಮಯದಲ್ಲಿ ತನ್ನ ಗಂಡನ ಪರವಾಗಿರುತ್ತಾಳೆ. ಆತನ ಕೈ ಬಿಡುವುದಿಲ್ಲ ಮತ್ತು ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಾಳೆ. ಏಕೆಂದರೆ ತಾಳ್ಮೆ ಇರುವ ವ್ಯಕ್ತಿ ಯಾವುದೇ ಪರಿಸ್ಥಿತಿಯಿಂದ ಸುಲಭವಾಗಿ ಹೊರಬರಬಹುದು. ಚಾಣಕ್ಯನ ಪ್ರಕಾರ, ಈ ಗುಣವಿರುವ ಮಹಿಳೆಯನ್ನು ಮದುವೆಯಾಗುವುದು ವ್ಯಕ್ತಿಯ ಭವಿಷ್ಯವನ್ನು ಬದಲಾಯಿಸುತ್ತದೆ.


2. ಧರ್ಮದ ಮಾರ್ಗ ಸತ್ಯದ ಮಾರ್ಗವಾಗಿದೆ:


ಆಚಾರ್ಯ ಚಾಣಕ್ಯ ಅವರು ಧರ್ಮನಿಷ್ಠೆಯುಳ್ಳ ಮಹಿಳೆಯು ತನ್ನ ಅತ್ತೆ ಮತ್ತು ಗಂಡನ ಅದೃಷ್ಟವನ್ನು ಬೆಳಗಿಸುವವಳು ಎಂದು ಹೇಳಿದ್ದಾರೆ. ಏಕೆಂದರೆ ಧಾರ್ಮಿಕ ವ್ಯಕ್ತಿ ಎಂದಿಗೂ ತಪ್ಪು ದಾರಿಯಲ್ಲಿ ನಡೆಯಲಾರ. ಇದರೊಂದಿಗೆ, ಧಾರ್ಮಿಕ ವ್ಯಕ್ತಿಯು ತನ್ನ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ನೀಡುತ್ತಾನೆ. 


3. ಶಾಂತ ಸ್ವಭಾವವನ್ನು ಹೊಂದಿರುವುದು ಬಹಳ ಮುಖ್ಯ:


ಶಾಂತ ಮತ್ತು ವಿನಮ್ರ ಸ್ವಭಾವದಿಂದ ಇರುವುದು ಒಳ್ಳೆಯ ನಡತೆ. ಆದ್ದರಿಂದ, ಶಾಂತ ಸ್ವಭಾವದ ಮತ್ತು ಮಾತಿನ ಮೇಲೆ ಕೋಪಗೊಳ್ಳದ ಮಹಿಳೆಯನ್ನು ಮದುವೆಯಾಗುವುದು ವ್ಯಕ್ತಿಯ ಭವಿಷ್ಯವನ್ನು ಬದಲಾಯಿಸುತ್ತದೆ. ಯಾಕೆಂದರೆ ಮನೆಯವರು ಏನಾದರು ಹೇಳಿದರೂ ಮನಸಿನಲ್ಲಿ ಏನನ್ನೂ ಇಟ್ಟುಕೊಳ್ಳದೆ ಸ್ವಲ್ಪ ಸಮಯದ ನಂತರ ಮರೆತು ಬಿಡುತ್ತಾಳೆ. 


ಇದನ್ನೂ ಓದಿ: Kaal Sarp Dosh: ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ಹೆದರಬೇಡಿ, ಊಹೆಗೂ ಮೀರಿ ಲಾಭ ನಿಮ್ಮದಾಗುತ್ತದೆ


4. ಸಿಹಿಯಾಗಿ ಮಾತನಾಡುವ ಮಹಿಳೆ:


ಚಾಣಕ್ಯನ ಪ್ರಕಾರ, ಮೃದು ಮತ್ತು ಮಧುರವಾಗಿ ಮಾತನಾಡುವ ಮಹಿಳೆ ಯಾವಾಗಲೂ ಮನೆಯಲ್ಲಿ ಆಹ್ಲಾದಕರ ವಾತಾವರಣವನ್ನು ನಿರ್ವಹಿಸುತ್ತಾಳೆ. ಇದರೊಂದಿಗೆ ಮನೆಯಲ್ಲಿ ಸದಸ್ಯರ ನಡುವೆ ಜಗಳವಾದರೆ ಒಂದಷ್ಟು ನಗುವಿನ ಮಾತುಗಳನ್ನಾಡುವ ಮೂಲಕ ವಾತಾವರಣವನ್ನೇ ಬದಲಾಯಿಸುತ್ತಾಳೆ. ಈ ಗುಣವಿರುವ ಹೆಣ್ಣನ್ನು ಮದುವೆಯಾಗುವುದರಿಂದ ವ್ಯಕ್ತಿಯ ಅದೃಷ್ಟವೂ ಹೊಳೆಯುತ್ತದೆ.


(Disclaimer: ಇಲ್ಲಿ ನೀಡಲಾದ ಮಾಹಿತಿಯು ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.