Chandra Grahan 8 November 2022: ವರ್ಷದ ಕೊನೆಯ ಗ್ರಹಣ ಮತ್ತು ಎರಡನೇ ಖಂಡಗ್ರಾಸ್ ಚಂದ್ರಗ್ರಹಣವು 8ನೇ ನವೆಂಬರ್ 2022 ರಂದು ಕಾರ್ತಿಕ ಪೂರ್ಣಿಮೆಯಂದು ಸಂಭವಿಸಲಿದೆ. ಈ ಚಂದ್ರಗ್ರಹಣವು ಜನರ ಮನಸ್ಸಿನಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ ಏಕೆಂದರೆ ಈ ಎರಡನೇ ಗ್ರಹಣವು 25 ಅಕ್ಟೋಬರ್ 2022 ರಂದು ಸಂಭವಿಸಿದ ಸೂರ್ಯಗ್ರಹಣದ 15 ದಿನಗಳಲ್ಲಿ ಸಂಭವಿಸುತ್ತಿದೆ. ಜ್ಯೋತಿಷಿಗಳ ಪ್ರಕಾರ, 15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳು ಸಂಭವಿಸುವುದು ಕೆಲವು ದೊಡ್ಡ ಅಶುಭಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗ ದೇಶ ಮತ್ತು ಸಮಾಜ ದೊಡ್ಡ ಸಂಕಷ್ಟ ಎದುರಿಸಲಿದೆ ಎಂಬ ಆತಂಕ ಜನರ ಮನದಲ್ಲಿ ಮೂಡಿದೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಮತ್ತು ನಕ್ಷತ್ರಗಳ ನಡೆಯಂತೆ ಗ್ರಹಣದ ಪರಿಣಾಮವು ಎಲ್ಲಾ ರಾಶಿಗಳ ಜಾತಕದವರ ಮೇಲೆ ಕಂಡುಬರುತ್ತದೆ, ಅದು ಸೂರ್ಯಗ್ರಹಣವಾಗಿರಬಹುದು ಅಥವಾ ಚಂದ್ರಗ್ರಹಣವಾಗಿರಬಹುದು. ಗ್ರಹಣದ ನಂತರದ ಒಂದು ತಿಂಗಳವರೆಗಿನ ಅವಧಿಯು ಬಹಳ ಮುಖ್ಯವಾಗಿದೆ. ಮುಂಬರುವ ಸಮಯದಲ್ಲಿ ಗ್ರಹಣದ ಪ್ರಭಾವದಿಂದ ಯಾವ ರಾಶಿಯವರಿಗೆ ಲಾಭ ಮತ್ತು ಯಾವ ರಾಶಿಯವರಿಗೆ ನಷ್ಟವಾಗುತ್ತದೆ ತಿಳಿದುಕೊಳ್ಳೋಣ. 


ವರದಿಗಳ ಪ್ರಕಾರ, 2022 ರ ನವೆಂಬರ್ 8 ರಂದು ಸಂಭವಿಸಲಿರುವ ವರ್ಷದ ಕೊನೆಯ ಗ್ರಹಣವು 4 ರಾಶಿಗಲಾಗಿರುವ ಮಿಥುನ, ಕರ್ಕ, ವೃಶ್ಚಿಕ ಮತ್ತು ಕುಂಭ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಇದೇ ವೇಳೆ, 4  ರಾಶಿಗಲಾಗಿರುವ ಮೇಷ, ವೃಷಭ, ಕನ್ಯಾ ಮತ್ತು ಮಕರ ರಾಶಿಯವರಿಗೆ ಅದು ನಷ್ಟವನ್ನು ತರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೇ ಉಳಿದ ನಾಲ್ಕು ರಾಶಿಗಳ ಜನರ ಪಾಲಿಗೆ ಗ್ರಹಣ ಸಾಧಾರಣವಾಗಿರಲಿದೆ.


ಚಂದ್ರಗ್ರಹಣ ಸಮಯ 
ವರ್ಷದ ಕೊನೆಯ ಗ್ರಹಣವು ಕಾರ್ತಿಕ ಪೂರ್ಣಿಮಾ, 8 ನವೆಂಬರ್ 2022 ರಂದು ಸಂಭವಿಸಲಿದೆ. ಚಂದ್ರಗ್ರಹಣದ ಆರಂಭ ಅಂದರೆ ಸ್ಪರ್ಶಕಾಲವು ಸಂಜೆ 5:35 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಗ್ರಹಣದ ಮಧ್ಯಭಾಗವು 6:19 ಕ್ಕೆ ಮತ್ತು ಮೋಕ್ಷವು ರಾತ್ರಿ 7:26 ಕ್ಕೆ ಇರಲಿದೆ. ಈ ಗ್ರಹಣದ ಸೂತಕ ಅವಧಿಯು ಗ್ರಹಣಕ್ಕೆ 12 ಗಂಟೆಗಳ ಮೊದಲು ಬೆಳಗ್ಗೆ 5.53 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಾರನೆಯ ದಿನ ಬೆಳಗ್ಗೆ 7 ರವರೆಗೆ ಮುಂದುವರೆಯಲಿದೆ.


ಇದನ್ನೂ ಓದಿ-Labh Panchami 2022: ವ್ಯಾಪಾರ ವೃದ್ಧಿ, ತಿಜೋರಿಯಲ್ಲಿ ಹಣದ ಹರಿವು ಹೆಚ್ಚಾಗಲು ಇಂದು ಶುಭ ಮುಹೂರ್ತದಲ್ಲಿ ಈ ಕೆಲಸ ಮಾಡಿ


ಚಂದ್ರಗ್ರಹಣ ಎಲ್ಲಿ ಗೋಚರಿಸಲಿದೆ?
ವರ್ಷದ ಕೊನೆಯ ಚಂದ್ರಗ್ರಹಣವು ಭಾರತ ಸೇರಿದಂತೆ ದಕ್ಷಿಣ/ಪೂರ್ವ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸಲಿದೆ.


ಇದನ್ನೂ ಓದಿ-Palmistry: 40 ವರ್ಷಗಳ ನಂತರ ಈ ಜನರ ಭವಿಷ್ಯ ಇದ್ದಕ್ಕಿದ್ದಂತೆ ಬದಲಾಗುತ್ತೆ, ಸಾಕಷ್ಟು ಪ್ರಗತಿ ಸಾಧಿಸ್ತಾರೆ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ).


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ