ನವದೆಹಲಿ: ವರ್ಷದ 2ನೇ ಮತ್ತು ಕೊನೆಯ ಚಂದ್ರಗ್ರಹಣವು ನವೆಂಬರ್ 8ರಂದು ಸಂಭವಿಸಲಿದೆ. ಈ ಬಾರಿ ಈ ಗ್ರಹಣ ಮೇಷ ರಾಶಿಯ ಮೇಲೆ ಬೀಳುತ್ತಿದೆ. ಇದು ಕೆಲವು ರಾಶಿಗಳ ಮೇಲೆ ಉತ್ತಮ ಪರಿಣಾಮ ಬೀರಲಿದ್ದು, ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಎಚ್ಚರಿಕೆ ಅಗತ್ಯ. ಗ್ರಹಣವು ಮಧ್ಯಾಹ್ನ 2:39ಕ್ಕೆ ಪ್ರಾರಂಭವಾಗಿ ಸಾಯಂಕಾಲ 4:29ಕ್ಕೆ ಕೊನೆಗೊಳ್ಳುತ್ತದೆ. ಸಂಜೆ 6.19ಕ್ಕೆ ಗ್ರಹಣ ಸಂಪೂರ್ಣ ಮುಗಿಯಲಿದೆ. ಚಂದ್ರಗ್ರಹಣದಲ್ಲಿ ಸೂತಕವು ಬೆಳಗ್ಗೆ 5:39ರಿಂದ ಪ್ರಾರಂಭವಾಗುತ್ತದೆ. ಚಂದ್ರಗ್ರಹಣದಿಂದ ಯಾವ ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮವಾಗಲಿದೆ ತಿಳಿಯಿರಿ.


COMMERCIAL BREAK
SCROLL TO CONTINUE READING

ಮೇಷ ರಾಶಿ: ಚಂದ್ರಗ್ರಹಣವು ಮೇಷ ರಾಶಿಯ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣದಿಂದ ಈ ರಾಶಿಯ ಜನರು ಹಣವನ್ನು ಕಳೆದುಕೊಳ್ಳಬಹುದು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರಿಂದ ಮಾನಸಿಕ ಒತ್ತಡವನ್ನೂ ಎದುರಿಸಬೇಕಾಗಬಹುದು.


ಇದನ್ನೂ ಓದಿ: Shani Margi 2022 : ಜನವರಿಯವರೆಗೆ ಎಚ್ಚರದಿಂದರಬೇಕು ಈ ರಾಶಿಯವರು, ನಿಮಗಿದೆ ಶನಿದೇವ ಕಾಟ! 


ವೃಷಭ ರಾಶಿ: ಚಂದ್ರಗ್ರಹಣವು ವೃಷಭ ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಣದ ನಷ್ಟದಿಂದಾಗಿ ಆರ್ಥಿಕ ಸ್ಥಿತಿ ಹದಗೆಡಬಹುದು. ಇದು ಈ ರಾಶಿಯವರಿಗೆ ದೊಡ್ಡ ಆತಂಕ ಉಂಟುಮಾಡುತ್ತದೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.


ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಚಂದ್ರಗ್ರಹಣವು ಪ್ರತಿಕೂಲ ಪರಿಣಾಮ ಬೀರುತ್ತದೆ. ಕುಟುಂಬ ಮತ್ತು ವೈವಾಹಿಕ ಜೀವನದಲ್ಲಿ ಕಹಿ ಇರಬಹುದು. ಆದ್ದರಿಂದ, ಅನಗತ್ಯ ವಾದಗಳನ್ನು ತಪ್ಪಿಸಿ. ಉದ್ಯೋಗ ಮಾಡುವವರಿಗೆ ಇದು ಒಳ್ಳೆಯ ಸಮಯವಲ್ಲ. ನೀವು ಒತ್ತಡ ಎದುರಿಸಬೇಕಾಗುತ್ತದೆ. ಅನಗತ್ಯ ಖರ್ಚು ಹೆಚ್ಚಾಗಲಿದೆ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ, ಅಪಘಾತದ ಸಂಭವವಿದೆ.


ಇದನ್ನೂ ಓದಿ: Chankya Niti : ನಿಮ್ಮ ಈ 3 ರಹಸ್ಯಗಳು ಯಾರೊಂದಿಗೂ, ಯಾವತ್ತೂ ಹಂಚಿಕೊಳ್ಳಬೇಡಿ!


ತುಲಾ ರಾಶಿ: ಚಂದ್ರಗ್ರಹಣವು ತುಲಾ ರಾಶಿಯವರ ಮೇಲೂ ಅಶುಭ ಪರಿಣಾಮವನ್ನು ಬೀರುತ್ತದೆ. ಉದ್ಯೋಗದಲ್ಲಿ ಸಮಸ್ಯೆಗಳಿರಬಹುದು. ಅದೇ ರೀತಿ ಕುಟುಂಬ ಜೀವನವು ಕಷ್ಟಕರವಾಗಿರುತ್ತದೆ. ಹಣದ ಕೊರತೆಯಿಂದಾಗಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಉದ್ಯಮಿಗಳು ಸಹ ವಿಶೇಷ ಗಮನ ಹರಿಸಬೇಕು. ಸಂಗಾತಿಯೊಂದಿಗೆ ವಿವಾದ ಉಂಟಾಗಬಹುದು.


ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿ ಜೀವನದಲ್ಲಿ ಹೊಸ ಸವಾಲುಗಳಿಂದ ಮಾನಸಿಕ ಒತ್ತಡ ಉಂಟಾಗಬಹುದು. ಈ ರಾಶಿಯ ಜನರಿಗೆ ಚಂದ್ರ ಗ್ರಹಣವು ತುಂಬಾ ಕೆಟ್ಟದು ಎಂದು ಸಾಬೀತುಪಡಿಸಬಹುದು. ಹಣದ ನಷ್ಟ ಉಂಟಾಗಲಿದ್ದು, ಇದರಿಂದ ಹಲವು ಕೆಲಸಗಳು ಸ್ಥಗಿತಗೊಳ್ಳಲಿವೆ. ನೀವು ದೈಹಿಕ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.