Chandra Grahan 2023: ವರ್ಷದ ಮೊದಲ ಚಂದ್ರಗ್ರಹಣವು ಇಂದು 8:44ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮೇ 6ರಂದು 1:02ಕ್ಕೆ ಕೊನೆಗೊಳ್ಳುತ್ತದೆ. ಚಂದ್ರಗ್ರಹಣದ ವೇಳೆ ಅಪ್ಪಿತಪ್ಪಿಯೂ ಕೆಲವು ಕೆಲಸಗಳನ್ನು ಮಾಡಬಾರದು. ಇವುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಬಹುಮುಖ್ಯ.  ಚಂದ್ರಗ್ರಹಣದ ವೇಳೆ ಕೆಲವು ತಪ್ಪುಗಳನ್ನು ಮಾಡುವುದರಿಂದ ಗ್ರಹಣದ ನಕಾರಾತ್ಮಕ ಅಥವಾ ಋಣಾತ್ಮಕ ಪ್ರಭಾವ ಎದುರಿಸಬೇಕಾಗುತ್ತದೆ. ಹಾಗಾಗಿ ಚಂದ್ರಗ್ರಹಣದಲ್ಲಿ ಈ ತಪ್ಪುಗಳನ್ನು ಮಾಡಬಾರದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Chandra Grahan 2023: ಚಂದ್ರಗ್ರಹಣದ ವೇಳೆ ಈ ಕೆಲಸ ಮಾಡಿದ್ರೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ!


ಗ್ರಹಣದ ವೇಳೆ ಈ ಕೆಲಸ ಮಾಡಬಾರದು


  • ಗ್ರಹಣದ ವೇಳೆ ಪ್ರಯಾಣವನ್ನು ನಿಷೇಧಿಸಲಾಗಿದೆ. ಚಂದ್ರಗ್ರಹಣದ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣ ಮಾಡುವುದನ್ನು ತಪ್ಪಿಸಬೇಕು.

  • ಚಂದ್ರಗ್ರಹಣದ ಸೂತಕ ಕಾಲದಲ್ಲಿ ಸಾಧ್ಯವಾದಷ್ಟು ಮನೆಯೊಳಗೆ ಇರಬೇಕು. ಗರ್ಭಿಣಿಯರು ಗ್ರಹಣದ ವೇಳೆ ಮನೆಯಿಂದ ಹೊರಗೆ ಹೋಗಲೇಬಾರದು.

  • ಚಂದ್ರಗ್ರಹಣವನ್ನು ಯಾವದೇ ಕಾರಣಕ್ಕೂ ಬರಿಗಣ್ಣಿನಿಂದ ನೋಡಬಾರದು. ಉಪಕರಣಗಳ ಸಹಾಯದಿಂದ ಗ್ರಹಣ ವೀಕ್ಷಿಸಬಹುದು.

  • ಗ್ರಹಣದ ಮೊದಲು ಮತ್ತು ಗ್ರಹಣ ಮುಗಿದ ನಂತರ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಗ್ರಹಣದ ಋಣಾತ್ಮಕ ಪರಿಣಾಮ ನಿಮ್ಮ ಮೇಲೆ ಬೀರುವುದಿಲ್ಲ.

  • ಗ್ರಹಣದ ಸೂತಕ ಕಾಲದಲ್ಲಿ ಆಹಾರ ಸೇವಿಸುವುದು ಅಥವಾ ಕುಡಿಯುವುದನ್ನು ತಪ್ಪಿಸಬೇಕು. ಮನೆಯಲ್ಲಿ ಹಾಲು ಉಳಿದಿದ್ದರೆ ಕುಶ ಹುಲ್ಲು ಅಥವಾ ತುಳಸಿ ಎಲೆಗಳನ್ನು ಹಾಕಿಡಬೇಕು.

  • ಗ್ರಹಣದ ವೇಳೆ ದೇವರನ್ನು ಮುಟ್ಟಬಾರದು. ಮನೆಯಲ್ಲಿ ಪೂಜಾ ಕೋಣೆಯಿದ್ದರೆ, ಗ್ರಹಣಕ್ಕೂ ಮೊದಲು ಶುದ್ಧ ಬಟ್ಟೆಯಿಂದ ಮುಚ್ಚಬೇಕು. ದೇವಾಲಯಗಳಲ್ಲಿಯೂ ಈ ಸಮಯದಲ್ಲಿ ಬಾಗಿಲು ಮುಚ್ಚಲಾಗುತ್ತದೆ.

  • ಗ್ರಹಣಕ್ಕೂ ಮೊದಲು ಮನೆಯಲ್ಲಿ ತಯಾರಿಸಿದ ಆಹಾರ ಬಿಟ್ಟರೆ, ಗ್ರಹಣದ ಕೊನೆಯಲ್ಲಿ ತಿನ್ನಬಾರದು. ಗ್ರಹಣ ಮುಗಿದ ನಂತರ ಹೊಸ ಆಹಾರ ತಯಾರಿಸಿ ಸೇವಿಸಬೇಕು.


ಇದನ್ನೂ ಓದಿ: Lunar Eclipse 2023: ಬುದ್ಧ ಪೂರ್ಣಿಮೆಯಂದು ಚಂದ್ರಗ್ರಹಣ, ಈ ರಾಶಿಯವರಿಗೆ ಭರ್ಜರಿ ಲಾಟರಿ


ಗ್ರಹಣದ ವೇಳೆ ಗರ್ಭಿಣಿಯರು ಏನು ಮಾಡಬಾರದು..?


  • ಚಂದ್ರಗ್ರಹಣದ ವೇಳೆ ಗ್ರಹಣ ಕಾಲದಲ್ಲಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಹೋಗಬಾರದು. ಈ ವೇಳೆ ಮನೆಯಲ್ಲಿಯೇ ಇರಬೇಕು ಮತ್ತು ಮನೆಯ ಕಿಟಕಿಗಳನ್ನು ಮುಚ್ಚಬೇಕು.  

  • ಯಾವುದೇ ಕಾರಣಕ್ಕೂ ಗರ್ಭಿಣಿಯರು ಗ್ರಹಣವನ್ನು ವೀಕ್ಷಿಸಬಾರದು.

  • ಗ್ರಹಣದ ವೇಳೆ ಯಾವುದೇ ರೀತಿಯ ಆಹಾರ ಸೇವಿಸಬಾರದು. ಗ್ರಹಣ ಪ್ರಾರಂಭವಾಗುವ ಮೊದಲು ಆಹಾರ ಸೇವಿಸುವುದು ಉತ್ತಮ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.