Chaturmas 2022 Significance: ಸನಾತನ ಧರ್ಮದಲ್ಲಿ ಚಾತುರ್ಮಾಸಕ್ಕೆ ವಿಶೇಷ ಮಹತ್ವವಿದೆ. ಈ 4 ತಿಂಗಳುಗಳಲ್ಲಿ ಶ್ರೀವಿಷ್ಣುವು ಕ್ಷೀರ ಸಾಗರದಲ್ಲಿ ವಿಶ್ರಾಂತಿ ಪಡೆಯುತ್ತಾನೆ ಮತ್ತು ಶಿವ ಬ್ರಹ್ಮಾಂಡದ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಾನೆ ಎನ್ನಲಾಗುತ್ತದೆ. ಶ್ರಾವಣ, ಭಾದ್ರಪದ, ಅಶ್ವಿನ್ ಮತ್ತು ಕಾರ್ತಿಕ ಮಾಸಗಳಲ್ಲಿ ಅನೇಕ ಪ್ರಮುಖ ಉಪವಾಸ-ಉತ್ಸವಗಳು ಸಹ ನಡೆಯುತ್ತವೆ. ಶಿವನ ಆಶೀರ್ವಾದ ಪಡೆಯಲು ಈ ಸಮಯ ಉತ್ತಮವಾಗಿರುತ್ತೆ. ಈ ವರ್ಷದ ಚಾತುರ್ಮಾಸ್ ಜುಲೈ 10, 2022 ರಿಂದ ಆರಂಭಗೊಂಡಿದ್ದು, ಇದು 2022 ರ ನವೆಂಬರ್ 4 ರಂದು ಪ್ರಭೋದಿನಿ ಅಥವಾ ದೇವಉಠನಿ ಏಕಾದಶಿಯ ದಿನದಂದು ಮುಕ್ತಾಯವಾಗುತ್ತದೆ.


COMMERCIAL BREAK
SCROLL TO CONTINUE READING

ಚಾತುರ್ಮಾಸದಲ್ಲಿ ಸಂತರು ಸಂಚಾರ ಕೈಗೊಳ್ಳುವುದಿಲ್ಲ
ನಾತನ ಧರ್ಮದಲ್ಲಿ, ಚಾತುರ್ಮಾಸವನ್ನು ಪೂಜಾ ಕೈಂಕರ್ಯಗಳಿಗೆ ತುಂಬಾ ಮುಖ್ಯವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ಸಮಯದಲ್ಲಿ ಹಿಂದೂ, ಜೈನ, ಬೌದ್ಧ ಇತ್ಯಾದಿ ಧರ್ಮಗಳ ಸಂತರು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ನೆಲೆಸಿ ದೇವರನ್ನು ಪೂಜಿಸುತ್ತಾರೆ. ಚಾತುರ್ಮಾಸ್ ಸಮಯದಲ್ಲಿ, ಸಾಮಾನ್ಯಯಾಗಿ ಭಕ್ತಾದಿಗಳು ಅನೇಕ ಕಠಿಣ ನಿಯಮಗಳನ್ನು ಅನುಸರಿಸುತ್ತಾರೆ ಮತ್ತು ಪೂಜೆ ಪುನಸ್ಕಾರಗಳಲ್ಲಿ ತಮ್ಮ ಗರಿಷ್ಠ ಸಮಯವನ್ನು ಕಳೆಯುತ್ತಾರೆ. ಈ ಸಮಯದಲ್ಲಿ ಶುಭ ಅಥವಾ ಮಂಗಳ ಕಾರ್ಯಗಳನ್ನು ನೆರವೇರಿಸಲಾಗುವುದಿಲ್ಲ. 


ಚಾತುರ್ಮಾಸವನ್ನು ಈ ದೇವ ದೇವತೆಗಳಿಗೆ ಸಮರ್ಪಿಸಲಾಗಿದೆ
ಚಾತುರ್ಮಾಸದಲ್ಲಿ ಬರುವ ಪ್ರತಿಯೊಂದು ಮಾಸ ಒಂದಲ್ಲ ಒಂದು ದೇವ-ದೇವತೆಗೆ ಸಮರ್ಪಿತವಾಗಿದೆ. ಉದಾಹರಣೆಗೆ, ಶ್ರಾವಣ ಮಾಸದಲ್ಲಿ ದೇವಾಧಿದೇವ ಮಹಾದೇವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಶಿವ ಭಕ್ತರು ಶ್ರವಾಣ ಸೋಮವಾರದಂದು ಉಪವಾಸ ಕೈಗೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಜೀವನದ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ ಮತ್ತು ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಧಾರ್ಮಿಕ ನಂಬಿಕೆ.


ಇದನ್ನೂ ಓದಿ-Shani Gochar 2022: ಮುಂದಿನ 48 ಗಂಟೆಗಳಲ್ಲಿ ಬದಲಾಗಲಿದೆ ಈ 3 ರಾಶಿಗಳ ಜನರ ಭಾಗ್ಯ, ಈ ಗ್ರಹದ ಗೋಚರ ಹಣದ ಹೊಳೆಯೇ ಹರಿಸಲಿದೆ


ಚಾತುರ್ಮಾಸದ ಭಾದ್ರಪದ ಮಾಸದಲ್ಲಿ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಶ್ರೀಕೃಷ್ಣನು ಈ ದಿನ ಜನಿಸಿದ ಎಂಬುದು ಧರ್ಮಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ. ಸಂತಾನ ಪ್ರಾಪ್ತಿ, ಮಕ್ಕಳ ಪ್ರಗತಿ, ಪ್ರೀತಿ ಮತ್ತು ಸಂತೋಷಕ್ಕಾಗಿ ಈ ಮಾಸದಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಅಶ್ವಿನ ಮಾಸದಲ್ಲಿ ಪೂರ್ವಜರನ್ನು ಪೂಜಿಸಲಾಗುತ್ತದೆ ಮತ್ತು ನವರಾತ್ರಿಯಲ್ಲಿ ದೇವಿ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ. ಇದಾದ ನಂತರ ಕಾರ್ತಿಕ ಮಾಸದಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ತುಳಸಿ ವಿವಾಹ ನಡೆಯುತ್ತದೆ. ಈ ಮಾಸ ದೀಪ ಮತ್ತು ದಾನಗಳಿಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.


ಇದನ್ನೂ ಓದಿ-Rama Tulsi ಹಾಗೂ ಶ್ಯಾಮ ತುಳಸಿಯ ನಡುವಿನ ಅಂತರ ನಿಮಗೆ ತಿಳಿದಿದೆಯಾ? ಯಾವ ತುಳಸಿ ಮನೆಯಲ್ಲಿ ನೆಟ್ಟರೆ ಶುಭ


ಚಾತುರ್ಮಾಸದಲ್ಲಿ ಈ ತಪ್ಪುಗಳನ್ನು ಮಾಡಬೇಡಿ
ಚಾತುರ್ಮಾಸದಲ್ಲಿ ಮಾಂಸಾಹಾರ ಮತ್ತು ಮದ್ಯವನ್ನು ಸೇವಿಸಬೇಡಿ. ಈ ತಿಂಗಳಲ್ಲಿ ಯಾರಿಗೂ ಕೆಟ್ಟದ್ದನ್ನು ಮಾಡಬೇಡಿ ಅಥವಾ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ತರಬೇಡಿ. ಚಾತುರ್ಮಾಸದಲ್ಲಿ ಆದಷ್ಟು ಹೆಚ್ಚು ದೇವ-ದೇವತೆಗಳನ್ನು ಪೂಜಿಸಿ ಮತ್ತು ಸಂತರ ಸೇವೆ ಮಾಡಿ. ಅಪ್ಪಿತಪ್ಪಿಯೂ ಯಾರನ್ನೂ ಅವಮಾನಿಸಬೇಡಿ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ