Adultery Month Of The Year: ಒಂದು ನಿಶ್ಚಿತ ವಯಸ್ಸಿನ ನಂತರ, ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ತನ್ನನ್ನು ಪ್ರೀತಿಸುವ ವ್ಯಕ್ತಿ ಇರಬೇಕು ಎಂದು ಬಯಸುತ್ತಾನೆ ಮತ್ತು ಅದೇ ವ್ಯಕ್ತಿಯ ಜೀವನದ ದೊಡ್ಡ ಆಸೆಯಾಗಿಬಿಡುತ್ತದೆ. ಆದರೆ ಪ್ರೀತಿಯ ವಿಷಯದಲ್ಲಿ ಕೆಲವರು ತುಂಬಾ ಅದೃಷ್ಟವಂತರಾಗಿರುತ್ತಾರೆ, ಏಕೆಂದರೆ ಅವರ ಆಸೆ ಈಡೇರುತ್ತದೆ, ಆದರೆ ಎಲ್ಲರೂ ಅದೃಷ್ಟವಂತರಾಗಿರುವುದಿಲ್ಲ. ಜಗತ್ತಿನಲ್ಲಿ ಪ್ರೀತಿಯಲ್ಲಿ ಬಿದ್ದು ಮೋಸ ಹೋಗುವ ಅನೇಕ ಜನರಿದ್ದಾರೆ. ಕಾರಣ ಎಂದರೆ, ಸಂಬಂಧದಲ್ಲಿ ಮೋಸ ಹೋಗುವ ಅವಕಾಶ ಇದ್ದೆ ಇರುತ್ತದೆ. ಏಕೆಂದರೆ ಸಂಬಂಧದ ಪ್ರಾಮುಖ್ಯತೆಯು ಸಮಯದೊಂದಿಗೆ ಬದಲಾಗುತ್ತಾ ಹೋಗುತ್ತದೆ. ಈ ಕುರಿತು IllicitEncounters.com ಸಮೀಕ್ಷೆಯೊಂದನ್ನು ನಡೆಸಿದೆ, ಸಮೀಕ್ಷೆಯ ಪ್ರಕಾರ ಮಹಿಳೆಯರು ತಮ್ಮ ಸಂಗಾತಿಗೆ ವರ್ಷದ ನಿರ್ದಿಷ್ಟ ತಿಂಗಳಲ್ಲಿ ಹೆಚ್ಚು ಮೋಸ ಮಾಡುತ್ತಾರೆ ಎಂದು ಹೇಳಲಾಗಿದೆ

COMMERCIAL BREAK
SCROLL TO CONTINUE READING

ಪ್ರೇಮಿಗಳೇ ಈ ತಿಂಗಳಲ್ಲಿ ಜಾಗರೂಕರಾಗಿರಿ
'ಸೆಕ್ಸ್ ಟೆಂಬರ್' ಹೆಸರಿನ ಪ್ರಸಿದ್ಧ ವೆಬ್‌ಸೈಟ್ ನಲ್ಲಿ ಈ ಕುತೂಹಲಕಾರಿ ಸಮೀಕ್ಷೆ ಪ್ರಕಟಗೊಂಡಿದೆ. ಇದರಲ್ಲಿ ಪ್ರೇಮಿ-ಗೆಳತಿ ತಮ್ಮ ಸಂಗಾತಿಗೆ ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮೋಸ ಮಾಡುತ್ತಾರೆ ಎನ್ನಲಾಗಿದೆ. ಬೇರೆ ಯಾವುದೇ ತಿಂಗಳಿಗಿಂತ ಸೆಪ್ಟೆಂಬರ್‌ನಲ್ಲಿ ಶೇ. 22 ರಷ್ಟು ಹೆಚ್ಚು ಬ್ರೇಕಪ್ ಪ್ರಕರಣಗಳಿವೆ ಎಂದು ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯ ಪ್ರಕಾರ, ಶೇ.32 ರಷ್ಟು ಮಹಿಳೆಯರು ಮತ್ತು ಶೇ.34 ರಷ್ಟು ಪುರುಷರು ತಮ್ಮ ಪ್ರೀತಿಪಾತ್ರರನ್ನು ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮೋಸ ಮಾಡುತ್ತಾರೆ ಎಂದು ಹೇಳಲಾಗಿದೆ.


ಇದನ್ನೂ ಓದಿ-Relationship Tips: ಪತಿ ಮಾಡೋ ಈ ತಪ್ಪುಗಳೇ ಪತ್ನಿಯರ ಕೋಪಕ್ಕೆ ಕಾರಣ!


ಮೋಸ ಮಾಡುವ ಕಾರಣ ಏನು?
ಸಂಗಾತಿಗಳನ್ನು ವಂಚಿಸುವ ಕುರಿತು ಈ ಅಧ್ಯಯನವನ್ನು ನಡೆಸಲಾಗಿದೆ. ಸ್ವಭಾವತಃ ದಾಂಪತ್ಯ ದ್ರೋಹ ಬಗೆಯುವ ಜನರು  ಒಂದೇ ಸಂಗಾತಿಯೊಂದಿಗೆ ಇರಲು ಬೇಸರಗೊಳ್ಳುತ್ತಾರೆ ಮತ್ತು ಸಂಗಾತಿಯ ಕಡೆಗೆ ಅವರ ಆಕರ್ಷಣೆಯು ಕಾಲಾನಂತರದಲ್ಲಿ ಕಡಿಮೆಯಾಗಲು ಪ್ರಾರಂಭಿಸುತ್ತದೆ ಎಂದು ಇದರಲ್ಲಿ ಕಂಡುಬಂದಿದೆ. ಇದಲ್ಲದೇ ವರ್ಕ್ ಫ್ರಮ್ ಹೋಂ ಕೂಡ ಬ್ರೇಕಪ್ ಗೆ ಕಾರಣ ಎನ್ನಲಾಗುತ್ತಿದೆ.


ಇದನ್ನೂ ಓದಿ-Astro Tips: ಮಕ್ಕಳಲ್ಲಿ ಹಲ್ಲುಗಳ ಬರುವಿಕೆಯೂ ಕೂಡ ಶುಭ-ಅಶುಭ ಸಂಕೇತಗಳನ್ನು ನೀಡುತ್ತವೆ


2000 ಜನರ ಮೇಲೆ ಸಮೀಕ್ಷೆ ನಡೆಸಲಾಗಿದೆ
ಶೇ.21 ರಷ್ಟು ಪುರುಷರು ಮತ್ತು ಶೇ.19 ರಷ್ಟು ಮಹಿಳೆಯರು ಕಚೇರಿಯಲ್ಲಿ ಅನೈತಿಕ ಸಂಬಂಧ ಹೊಂದಿರುವುದು ಈ ಸಂಶೋಧನೆಯಿಂದ ಬಹಿರಂಗಪಟ್ಟಿದೆ. ಕೆಲಸದ ಸ್ಥಳದಲ್ಲಿ ಹೊಸ ಪಾರ್ಟ್ನರ್ ಹುಡುಕುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಸೆಪ್ಟೆಂಬರ್ ನಂತರ, ಜನವರಿ ಗರಿಷ್ಠ ಸಂಖ್ಯೆಯ ವಂಚನೆ ಪ್ರಕರಣಗಳು ವರದಿಯಾಗುವ ತಿಂಗಳು ಎಂದು ಹೇಳಲಾಗಿದೆ. ಶೇ.24ರಷ್ಟು ಪುರುಷರು ಮತ್ತು ಶೇ.22 ರಷ್ಟು ಮಹಿಳೆಯರು ವರ್ಷದ ಆರಂಭಿಕ ವಾರಗಳಲ್ಲಿ ತಮ್ಮ ಸಂಗಾತಿಗಳಿಗೆ ಮೋಸ ಮಾಡುತ್ತಾರೆ ಎನ್ನಲಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.