ಬೆಂಗಳೂರು : Cholesterol Control Tips: ಕೊಲೆಸ್ಟ್ರಾಲ್ ಹೆಚ್ಚಾದರೆ ಅನೇಕ ಆರಿಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೊಲೆಸ್ಟ್ರಾಲ್  ನಿಯಂತ್ರಣಕ್ಕೆ ತಾರದಿದ್ದರೆ ಹೃದಯಾಘಾತ, ಬಿಪಿ ಮುಂತಾದ ಸಮಸ್ಯೆಗಳು  ಎದುರಾಗಬಹುದು. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ  ಮನೆಮದ್ದುಗಳ ಮೂಲಕ ಅದನ್ನು ನಿಯಂತ್ರಿಸಬಹುದು. ಹೌದು ಟೊಮೆಟೊದಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸಬಹುದು ಎನ್ನಲಾಗುತ್ತದೆ.  


COMMERCIAL BREAK
SCROLL TO CONTINUE READING

ಟೊಮೆಟೊ ಜ್ಯೂಸ್ :
ಟೊಮೆಟೊ ಜ್ಯೂಸ್ ಸೇವನೆ ಮೂಲಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣಕ್ಕೆ ತರಬಹುದು ಎನ್ನಲಾಗಿದೆ. ಇದಕ್ಕಾಗಿ ನೀವು ಪ್ರತಿದಿನ ಅದರ ರಸವನ್ನು ಕುಡಿಯಬೇಕು. ಆದರೆ ಸಮಸ್ಯೆ ಗಂಭೀರವಾಗಿದ್ದರೆ ಮಾತ್ರ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.  


ಇದನ್ನೂ ಓದಿ : Weight loss: ತೂಕ ಇಳಿಸಿಕೊಳ್ಳಲು ಮಲಗುವ ಮುನ್ನ ಈ ಕೆಲಸ ಮಾಡಿ


ಗ್ರೀನ್ ಟೀ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಣ :  
ಗ್ರೀನ್ ಟೀ ತೂಕವನ್ನು ಕಡಿಮೆ  ಮಾಡುವುದು ಮಾತ್ರವಲ್ಲ, ಕೊಲೆಸ್ಟ್ರಾಲ್ ಅನ್ನು ಕೂಡಾ ನಿಯಂತ್ರಣಕ್ಕೆ ತರುತ್ತದೆ. ಹಾಗಾಗಿ ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೆ ಪ್ರತಿದಿನ ಗ್ರೀನ್ ಟೀ ಸೇವಿಸಿದರೆ ಒಳ್ಳೆಯದು. ಆಗ ಮಾತ್ರ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. 


ಓಟ್ ಮಿಲ್ಕ್ ಕೂಡಾ ಸಹಕಾರಿ : 
ಓಟ್ ಮಿಲ್ಕ್ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ವಾಸ್ತವವಾಗಿ, ಇದು ಬೀಟಾ-ಗ್ಲುಕನ್ ಎಂಬ ವಸ್ತುವನ್ನು ಹೊಂದಿರುತ್ತದೆ. ಇದು ಬಾಯಿಲ್ ಸಾಲ್ಟ್ ನೊಂದಿಗೆ ಸೇರಿ ಜೆಲ್ ತರಹದ ಪದರವನ್ನು ರೂಪಿಸುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್ ಗಳಿವೆ. ಒಳ್ಳೆಯದು ಮತ್ತು ಕೆಟ್ಟದು. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ  ಹೃದಯಾಘಾತದ ಅಪಾಯ ಕೂಡಾ ಹೆಚ್ಚಾಗುತ್ತದೆ. ಆದ್ದರಿಂದ ಜೀವನಶೈಲಿಯನ್ನು ಕೂಡಾ ತಕ್ಕ ಮಟ್ಟಿಗೆ ಸುಧಾರಿಸಿಕೊಳ್ಳುವುದು ಒಳ್ಳೆಯದು. ಪ್ರತಿ ದಿನ ವ್ಯಾಯಾಮವನ್ನು  ಮಾಡಬೇಕಾಗುತ್ತದೆ. 


ಇದನ್ನೂ ಓದಿ :  Health Tips: ದೇಹದ ಆ ಭಾಗಕ್ಕೆ ಈ ಎಣ್ಣೆಯನ್ನು ಸವರಿದರೆ ಹಲವು ಅದ್ಭುತ ಲಾಭಗಳು ಸಿಗುತ್ತವೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.