ನವದೆಹಲಿ: ನಿಮ್ಮ ಕೊಲೆಸ್ಟ್ರಾಲ್(Cholesterol) ಮಟ್ಟವು ಅಧಿಕವಾಗಿದ್ದರೆ ಮೊದಲು ನೀವು ಆಹಾರದಲ್ಲಿ ಕೆಲ ಪ್ರಮುಖ ಬದಲಾವಣೆ ಮಾಡಬೇಕು. ಅಧಿಕ ಕೊಲೆಸ್ಟ್ರಾಲ್ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೇಗೆ ಕಡಿಮೆ ಮಾಡುವುದು ಅಥವಾ ನಿರ್ವಹಿಸುವುದು ಎಂಬುದರ ಬಗ್ಗೆ ಅನೇಕರಿಗೆ ತಿಳಿದಿರುವುದಿಲ್ಲ. ಅದೇ ರೀತಿ ಕೊಲೆಸ್ಟ್ರಾಲ್ ಹೆಚ್ಚಿರುವಾಗ ಸೇವಿಸುವ ಕೆಲವು ಆಹಾರ ನಿಮಗೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ.


COMMERCIAL BREAK
SCROLL TO CONTINUE READING

ಔಷಧಿ ಮತ್ತು ವ್ಯಾಯಾಮದ ಜೊತೆಗೆ ನೀವು ಆಹಾರದ(Low Cholesterol Foods) ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯವಾಗಿದೆ. ಆಹಾರ ಸೇವಿಸುವ ಮತ್ತು ಕುಡಿಯುವ ಕೆಲವು ದೈನಂದಿನ ಅಭ್ಯಾಸಗಳು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು.


ಈ ವಿಷಯಗಳ ಬಗ್ಗೆ ಕಾಳಜಿ ವಹಿಸಿರಿ


1. ಕೊಬ್ಬಿನ ಮಾಂಸ ಸೇವಿಸುವುದನ್ನು ತಪ್ಪಿಸಿ


ಮಾಂಸವನ್ನು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ. ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬನ್ನು(Unsaturated Fats) ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವು ಪರಿಣಾಮ ಬೀರುತ್ತದೆ.


ಇದನ್ನೂ ಓದಿ: Diabetes: ಮಧುಮೇಹ ರೋಗಿಗಳಿಗೆ ಸಂಜೀವಿನಿ ಇದ್ದಂತೆ ಈ ಜ್ಯೂಸ್


2. ಕಡಿಮೆ ಸಿಹಿ ಪದಾರ್ಥಗಳನ್ನು ಸೇವಿಸಿ


ಸಿಹಿ ಮತ್ತು ಸಕ್ಕರೆಯ ಪದಾರ್ಥಗಳನ್ನು ಸೇವಿಸುವುದರಿಂದ ದೇಹದಲ್ಲಿನ ಒಳ್ಳೆಯ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಸಕ್ಕರೆ ಸೇರಿಸಿದ ವಸ್ತುಗಳ ಬದಲಿಗೆ ಸಿಹಿ ಹಣ್ಣುಗಳನ್ನು ಸೇವಿಸುವುದು ಉತ್ತಮ.


3. ಫೈಬರ್ ಸಮೃದ್ಧವಾಗಿರುವ ಆಹಾರ ಸೇವಿಸಿ


ಆಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬನ್ನು ಕಡಿಮೆ ಮಾಡಿ ಮತ್ತು ಫೈಬರ್ ಸಮೃದ್ಧವಾಗಿರುವ ಆಹಾರ(Cholesterol Lowering Foods)ವನ್ನು ಸೇವಿಸಿ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ತೂಕವು ಪದೇ ಪದೇ ಹೆಚ್ಚಾಗುತ್ತಿದ್ದರೆ ಮತ್ತು ಕಡಿಮೆಯಾಗುತ್ತಿದ್ದರೆ ಅದು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.


4. ದೈನಂದಿನ ಆಹಾರದ ಜೊತೆಗೆ ಇವುಗಳನ್ನೂ ಸೇವಿಸಿರಿ


 ಓಟ್ಸ್, ಬಾರ್ಲಿ, ಸೇಬು, ಬೀನ್ಸ್, ಅಗಸೆ ಬೀಜಗಳು ಮತ್ತು ಚಿಯಾ ಬೀಜ(Chia Seeds)ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಸಾಕಷ್ಟು ಪ್ರಮಾಣದ ಕರಗುವ ಫೈಬರ್ ಅನ್ನು ತೆಗೆದುಕೊಳ್ಳಿ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ದುಬಾರಿ ಪ್ರಾಡಕ್ಟ್ ಗಳ ಬದಲಿಗೆ ಈ ಎರಡು ಎಲೆಗಳನ್ನು ಬಳಸಿದರೆ ಸಾಕು ಬಿಳಿ ಕೂದಲು ಕಪ್ಪಾಗುತ್ತದೆ


5. ಆರೋಗ್ಯಕರ ಕೊಬ್ಬು ಹೊಂದಿರಿ


ಆಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬನ್ನು ತೆಗೆದುಕೊಳ್ಳಬೇಡಿ. ನಿಮ್ಮ ದೈನಂದಿನ ಆಹಾರದಲ್ಲಿ ಇತರ ಆರೋಗ್ಯಕರ ಕೊಬ್ಬನ್ನು ಸೇರಿಸಿ. ಆಹಾರದಲ್ಲಿ ಬೀಜಗಳು, ಆವಕಾಡೊಗಳು ಮತ್ತು ಬೀಜಗಳನ್ನು ಸೇರಿಸಿ.


6. ತಪ್ಪದೇ ತರಕಾರಿ ಸೇವಿಸಿರಿ


ಆಹಾರದಲ್ಲಿ ಸಾಕಷ್ಟು ತರಕಾರಿ(Green Vegetables)ಗಳನ್ನು ಸೇವಿಸದಿರುವುದು ಸಹ ನಿಮಗೆ ಹಾನಿ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಬ್ರೊಕೊಲಿ ಮತ್ತು ಹೂಕೋಸುಗಳಂತಹ ಕ್ರೂಸಿಫೆರಸ್ ತರಕಾರಿಗಳನ್ನು ಸೇರಿಸಿ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.