ನವದೆಹಲಿ: ದೈಹಿಕ ಶ್ರಮವಿಲ್ಲದಿರುವಿಕೆ, ನಿಯಮಿತ ವ್ಯಾಯಾಮ ಮಾಡದಿರುವುದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ(High Cholesterol) ಏರುಪೇರಾಗಲು ಕಾರಣ. ಇಂದು ನಮ್ಮ ಸುತ್ತಮುತ್ತಲ ಜನರಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬರಿಗೆ ಅಧಿಕ ಕೊಲೆಸ್ಟ್ರಾಲ್ ಮಟ್ಟದ ತೊಂದರೆ ಇದೆ. ಕೊಲೆಸ್ಟ್ರಾಲ್ ಅನ್ನು ಸಾಮಾನ್ಯವಾಗಿ ಋಣಾತ್ಮಕವಾಗಿ ನೋಡಲಾಗುತ್ತದೆ. ಆದರೆ ಆರೋಗ್ಯಕರ ಕೋಶಗಳನ್ನು ತಯಾರಿಸಲು ಕೊಲೆಸ್ಟ್ರಾಲ್(Cholesterol) ತುಂಬಾ ಉಪಯುಕ್ತವಾಗಿದೆ. ಇದರ ಮಟ್ಟವು ಅಗತ್ಯವನ್ನು ಮೀರಿದರೆ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದಕ್ಕೆ ಇಂದಿನ ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿ ಇದರ ಹಿಂದಿನ ಮುಖ್ಯ ಕಾರಣವೆಂದು ಹೇಳಬಹುದು.


COMMERCIAL BREAK
SCROLL TO CONTINUE READING

ಅಧಿಕ ಕೊಲೆಸ್ಟ್ರಾಲ್ ತಪ್ಪಿಸಲು 5 ಆರೋಗ್ಯಕರ ಆಹಾರಗಳು


ಕೊಲೆಸ್ಟ್ರಾಲ್ ನಿಮ್ಮ ರಕ್ತದಲ್ಲಿ ಕಂಡುಬರುವ ಮೇಣದಂಥ ವಸ್ತುವಾಗಿದ್ದು, ಅದು ಅನಾರೋಗ್ಯಕರ ಆಹಾರಗಳಿಂದ ಹೆಚ್ಚಾಗುತ್ತದೆ ಮತ್ತು ರಕ್ತನಾಳಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಕೊಲೆಸ್ಟ್ರಾಲ್(Cholesterol Level) ಅಪಧಮನಿಗಳಲ್ಲಿ ರಕ್ತದ ಹರಿವಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಅಪಾಯಕಾರಿ ಕಾಯಿಲೆಗಳು ಬರಬಹುದು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ದೈನಂದಿನ ಜೀನಶೈಲಿಯಲ್ಲಿ ಈ 5 ಆಹಾರಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು.  


ಇದನ್ನೂ ಓದಿ: High BP : ನಿಮಗೆ ಹೈ BP ಇದೆಯಾ? ಹಾಗಿದ್ರೆ, ಈ 6 ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ!


1. ಟೊಮೇಟೊ ಜ್ಯೂಸ್ (Tomato Juice)


ಲೈಕೋಪೀನ್ ಎಂಬ ಪೋಷಕಾಂಶಗಳು ಟೊಮೇಟೊಗಳಲ್ಲಿ ಕಂಡುಬರುತ್ತವೆ. ಇದು ನಿಮ್ಮ ದೇಹದಲ್ಲಿ ಲಿಪಿಡ್ ಮಟ್ಟವನ್ನು ಸುಧಾರಿಸುತ್ತದೆ. ಟೊಮೇಟೊ ಜ್ಯೂಸ್ ನಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಫೈಬರ್ ಮತ್ತು ನಿಯಾಸಿನ್ ಇರುವುದರಿಂದ ಪ್ರತಿನಿತ್ಯ ಒಂದು ಲೋಟ ಕುಡಿಯುವುದು ಉತ್ತಮ.


2. ಬೆರ್ರಿ ಹಣ್ಣಿ ಮಿಲ್ಕ್ ಶೇಕ್ (Berry Smoothie)


 ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್ ಬೆರ್ರಿ ಹಣ್ಣಿನ ಮಿಲ್ಕ್ ಶೇಕ್ ನಲ್ಲಿ ಕಂಡುಬರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಪಾನೀಯಗಳು ಆರೋಗ್ಯಕರ ಮತ್ತು ಸೇವಿಸಲು ಕೂಡ ರುಚಿಯಾಗಿರುತ್ತದೆ.


3. ಓಟ್ಸ್ ಶೇಕ್ (Oats Drink)


ಓಟ್ಸ್ ಆರೋಗ್ಯಕರ ಆಹಾರವಾಗಿದ್ದು, ಇದರಲ್ಲಿ ಬೀಟಾ ಗ್ಲುಕನ್‌ಗಳು ಕಂಡುಬರುತ್ತವೆ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಪ್ರತಿದಿನ ಓಟ್ಸ್ ಪಾನೀಯ(Oats Drink)ಗಳನ್ನು ಕುಡಿಯಿರಿ.


4. ಹಸಿರು ಚಹಾ (Green Tea)


ಹಸಿರು ಚಹಾದಲ್ಲಿ ಕ್ಯಾಟೆಚಿನ್ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಕಂಡುಬರುತ್ತವೆ. ಇದು ಅನಾರೋಗ್ಯಕರ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.


5. ಸೋಯಾ ಹಾಲು (Soy Milk)


ಸೋಯಾ ಹಾಲಿನ ಮೂಲಕ ನೀವು ಅನಗತ್ಯ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು ಮತ್ತು ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಕನಿಷ್ಠ 25 ಗ್ರಾಂ ಸೋಯಾ ಹಾಲನ್ನು ಸೇವಿಸುವುದು ಉತ್ತಮ.


ಇದನ್ನೂ ಓದಿ: ಒಣದ್ರಾಕ್ಷಿ ನೀರನ್ನ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಆರೋಗ್ಯಕ್ಕಿದೆ ಈ  4 ಪ್ರಯೋಜನಗಳು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.