ಬೆಂಗಳೂರು: ನಮ್ಮೆಲ್ಲರ ಮನೆಗಳಲ್ಲಿ ಗೋಧಿ ಹಿಟ್ಟಿನಿಂದ ರೊಟ್ಟಿಗಳನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಗೋಧಿ ಹಿಟ್ಟಿನ ರೊಟ್ಟಿಯನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಅಪಾಯವಿದೆ, ಆದರೆ ಇಂದು ಈ ಲೇಖನದಲ್ಲಿ ನಾವು ನಿಮಗೆ ಒಂದು ವಿಶಿಷ್ಟ ರೊಟ್ಟಿಯಪಾಕವಿಧಾನವನ್ನು ನಿಮಗೆ ತಿಳಿಸುತ್ತಿದ್ದೇವೆ, ಈ ವಿಶೇಷ ರೊಟ್ಟಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ವಿಶೇಷ ರೊಟ್ಟಿಯನ್ನು ತೆಂಗಿನ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಇದು ಫೈಬರ್‌ನ ಉತ್ತಮ ಮೂಲವಾಗಿದೆ. ನೀವು ಅದರ ರೊಟ್ಟಿಯನ್ನು ಅನ್ನು ನಿಯಮಿತವಾಗಿ ಸೇವಿಸಿದರೆ, ಅದು ತೂಕ ಇಳಿಕೆಗೂ ಕೂಡ ಸಹಾಯ ಮಾಡುತ್ತದೆ. ಈ ಲೇಖನದಲ್ಲಿ ತೆಂಗಿನ ಹಿಟ್ಟಿನಿಂದ ರೊಟ್ಟಿ ಮಾಡುವ ಪಾಕವಿಧಾನ ಮತ್ತು ಅದರ ಪ್ರಯೋಜನಗಳ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ (Lifestyle News In Kannada)


COMMERCIAL BREAK
SCROLL TO CONTINUE READING

ತೆಂಗಿನ ಹಿಟ್ಟಿನಿಂದ ರೊಟ್ಟಿ ಮಾಡುವುದು ಹೇಗೆ?
ತೆಂಗಿನ ರೊಟ್ಟಿ ಮಾಡಲು, ಗೋಧಿ ಹಿಟ್ಟಿಗೆ ಶೇ. 25 ರಷ್ಟು ತೆಂಗಿನ ಹಿಟ್ಟನ್ನು ಬೇರೆಸಬೇಕು. ಸಿಹಿಯಾಗಲು ನೀವು ಅದರಲ್ಲಿ ಬೆಲ್ಲವನ್ನು ಕೂಡ ಬೆರೆಸಬಹುದು.


ತೆಂಗಿನಕಾಯಿ ರೊಟ್ಟಿ ಪ್ರಯೋಜನಗಳು
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು

ತೆಂಗಿನಕಾಯಿ ಫೈಬರ್ ಅನ್ನು ಹೊಂದಿರುತ್ತದೆ. ಅಲ್ಲದೆ, ಕ್ಯಾಲೊರಿಗಳ ಪ್ರಮಾಣವು ಕಡಿಮೆಯಾಗಿರುತ್ತದೆ, ಅದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ಮಧುಮೇಹದಿಂದ ಬಳಲುತ್ತಿದ್ದರೆ, ಖಂಡಿತವಾಗಿಯೂ ನಿಮ್ಮ ಆಹಾರದಲ್ಲಿ ತೆಂಗಿನಕಾಯಿ ರೊಟ್ಟಿಯನ್ನು ಸೇರಿಸಿ.


ತೂಕ ಇಳಿಕೆ 
ತೆಂಗಿನಕಾಯಿಯು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವ ಅನುಭವ ನೀಡುತ್ತದೆ. ಈ ಕಾರಣದಿಂದಾಗಿ, ನಿಮಗೆ  ಮತ್ತೆ ಮತ್ತೆ ಹಸಿವಿನ ಅನುಭವ ಉಂಟಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ತೂಕವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ನೀವು ಜೀರ್ಣಕಾರಿ ಸಮಸ್ಯೆಗಳನ್ನು ಹೋಗಲಾಡಿಸಲು ಬಯಸಿದರೆ, ಖಂಡಿತವಾಗಿಯೂ ಇದನ್ನು ಸೇವಿಸಿ.


ಇದನ್ನೂ ಓದಿ-Weight Loss Tips: ಚಳಿಗಾಲದಲ್ಲಿ ಹೆಚ್ಚಾಗುವ ತೂಕಕ್ಕೆ ಕಡಿವಾಣ ಹಾಕಲು ಇಲ್ಲಿವೆ 5 ಬೆಸ್ಟ್ ಆಹಾರಗಳು!


ದೇಹಕ್ಕೆ ಶಕ್ತಿ ಸಿಗುತ್ತದೆ
ತೆಂಗಿನಕಾಯಿ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ, ಇದು ನಿಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ನೀವು ಹೃದ್ರೋಗವನ್ನು ತಪ್ಪಿಸಲು ಬಯಸಿದರೆ, ಖಂಡಿತವಾಗಿಯೂ ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿ.


ಇದನ್ನೂ ಓದಿ-Hair Fall Tips: ರಾತ್ರಿ ಮಲಗುವ ಮುನ್ನ ಈ ಒಂದು ಕೆಲಸ ಮಾಡಿ, ಕೂದಲುದುರುವುದು ಪರ್ಮನೆಂಟ್ ಆಗಿ ಸ್ಟಾಪ್ ಆಗುತ್ತೆ!


ಸ್ನಾಯುಗಳನ್ನು ಬೆಳೆಯುತ್ತವೆ
ತೆಂಗಿನಕಾಯಿಯಲ್ಲಿರುವ ಪ್ರೋಟೀನ್ ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ. ನೀವು ಸ್ನಾಯುಗಳ ಬಲವನ್ನು ಉತ್ತೇಜಿಸಲು ಬಯಸಿದರೆ, ತೆಂಗಿನ ಹಿಟ್ಟಿನ ರೊಟ್ಟಿಯನ್ನು ಖಂಡಿತವಾಗಿ ಸೇವಿಸಿ. ಇದು ಮೂಳೆಗಳ ಬಲವನ್ನು ಉತ್ತೇಜಿಸುತ್ತದೆ.


ಇದನ್ನೂ ನೋಡಿ-