ಡಿಯೋಡ್ರೆಂಟ್ ಬೇಕಿಲ್ಲ.. ಬೆವರಿನಿಂದ ಕಂಕುಳು ಕೆಟ್ಟ ವಾಸನೆ ಬಂದರೆ ಈ ಸಿಂಪಲ್ ಮನೆಮದ್ದು ಬಳಸಿ ಸಾಕು!
Underarm Smell Home Remedies: ಅಂಡರ್ ಆರ್ಮ್ ನಿಂದ ಬರುವ ಕೆಟ್ಟ ವಾಸನೆಗೆ ಕಾರಣ ಬೆವರು ಎಂದೇ ಹಲವರು ಭಾವಿಸಿರುತ್ತಾರೆ. ಅದರಲ್ಲೂ ಬೇಸಿಗೆಯಲ್ಲಂತೂ ಈ ದುರ್ವಾಸನೆ ಸಿಕ್ಕಾಪಟ್ಟೆ ಮುಜುಗರಕ್ಕೆ ಕಾರಣವಾಗಬಹುದು.
Underarm Smell Home Remedies: ಅಂಡರ್ ಆರ್ಮ್ ನಿಂದ ಬರುವ ಕೆಟ್ಟ ವಾಸನೆಗೆ ಕಾರಣ ಬೆವರು ಎಂದೇ ಹಲವರು ಭಾವಿಸಿರುತ್ತಾರೆ. ಅದರಲ್ಲೂ ಬೇಸಿಗೆಯಲ್ಲಂತೂ ಈ ದುರ್ವಾಸನೆ ಸಿಕ್ಕಾಪಟ್ಟೆ ಮುಜುಗರಕ್ಕೆ ಕಾರಣವಾಗಬಹುದು. ಆದರೆ ಅಂಡರ್ ಆರ್ಮ್ ನಿಂದ ಬರುತ್ತಿರುವ ದುರ್ವಾಸನೆ ಬೆವರಿನಿಂದಲ್ಲ, ಬದಲಾಗಿ ಬ್ಯಾಕ್ಟೀರಿಯಾದಿಂದ. ಬೆವರು ಬ್ಯಾಕ್ಟೀರಿಯಾದೊಂದಿಗೆ ಬೆರೆತಾಗ ಈ ವಾಸನೆ ಹೆಚ್ಚಾಗುತ್ತದೆ. ಇದರ ಹೊರತಾಗಿ ಕೆಲವು ಆರೋಗ್ಯ ಪರಿಸ್ಥಿತಿಗಳಿಂದಾಗಿ, ಔಷಧಿಗಳ ಕಾರಣದಿಂದಾಗಿ, ದಿನನಿತ್ಯದ ಬಟ್ಟೆಗಳನ್ನು ಬದಲಾಯಿಸದಿರುವುದು, ಸ್ನಾನ ಮಾಡದಿರುವುದು ಅಥವಾ ಹಾರ್ಮೋನ್ ಬದಲಾವಣೆಯಿಂದ ಕಂಕುಳಲ್ಲಿ ಕೆಟ್ಟ ವಾಸನೆ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಂಕುಳಿನ ವಾಸನೆಯನ್ನು ತೊಡೆದುಹಾಕಲು ಜನರು ಡಿಯೋಡ್ರಂಟ್ ಮೊರೆ ಹೋಗುತ್ತಾರೆ. ಕಂಕುಳಲ್ಲಿ ಬರುವ ದುರ್ವಾಸನೆ ಹೋಗಲಾಡಿಸಲು ಸಹಾಯಕವಾಗುವ ಮನೆಮದ್ದುಗಳು ಯಾವುವು ಎಂಬುದನ್ನು ತಿಳಿಯೋಣ.
ಅಂಡರ್ ಆರ್ಮ್ ವಾಸನೆ ತೊಲಗಿಸಲು ಮನೆಮದ್ದುಗಳು:
ಆಲೂಗಡ್ಡೆ -
ಅಂಡರ್ ಆರ್ಮ್ ವಾಸನೆಯನ್ನು ಹೋಗಲಾಡಿಸುವಲ್ಲಿ ಆಲೂಗಡ್ಡೆ ಅದ್ಭುತ ಪರಿಣಾಮವನ್ನು ಹೊಂದಿದೆ. ಈ ಮನೆಮದ್ದು ತಯಾರಿಸಲು ಮೊದಲು ಆಲೂಗಡ್ಡೆಯ ಸಿಪ್ಪೆ ತೆಗೆದು ತುರಿಯಿರಿ. ಈಗ ಈ ತುರಿದ ಆಲೂಗಡ್ಡೆಯನ್ನು ಹಿಂಡಿ, ಅದರ ರಸವನ್ನು ಹೊರತೆಗೆಯಿರಿ. ಈ ರಸದಲ್ಲಿ ಹತ್ತಿಯನ್ನು ಅದ್ದಿ ಕಂಕುಳಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ನಂತರ ತೊಳೆಯಿರಿ. ಇದಲ್ಲದೇ ಆಲೂಗೆಡ್ಡೆಯ ಚೂರುಗಳನ್ನು ಕಂಕುಳಿಗೆ ಉಜ್ಜುವುದರಿಂದಲೂ ದುರ್ವಾಸನೆ ತೊಲಗಿಸಬಹುದು.
ಇದನ್ನೂ ಓದಿ: ಬೆಳ್ಳಗಾದ ಕೂದಲು ಮರಳಿ ಕಪ್ಪಗಾಗಲು ನಿಂಬೆ ಹಣ್ಣನ್ನು ಇದರೊಟ್ಟಿಗೆ ಕುದಿಸಿ ಕುಡಿಯಿರಿ ಸಾಕು!
ಅಲೋ ವೆರಾ ಜೆಲ್ -
ಅಲೋವೆರಾ ಜೆಲ್ ಅನ್ನು ಕಂಕುಳಿನ ವಾಸನೆಯನ್ನು ತೆಗೆದುಹಾಕಲು ಸಹ ಬಳಸಬಹುದು. ತಾಜಾ ಅಲೋವೆರಾ ಎಲೆಯ ತಿರುಳನ್ನು ಹೊರತೆಗೆಯಿರಿ ಅಥವಾ ಮಾರುಕಟ್ಟೆಯಿಂದ ಖರೀದಿಸಿದ ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಅದನ್ನು ಕಂಕುಳಿಗೆ ಹಚ್ಚಿಕೊಳ್ಳಿ. 20 ರಿಂದ 25 ನಿಮಿಷಗಳ ಕಾಲ ಬಿಟ್ಟು, ನಂತರ ತೊಳೆಯಿರಿ. ದಿನಕ್ಕೆರಡು ಬಾರಿ ಬಳಸುವುದರಿಂದ ಕೆಟ್ಟ ವಾಸನೆ ದೂರವಾಗುತ್ತದೆ.
ತೆಂಗಿನ ಎಣ್ಣೆ -
ಕಂಕುಳನ್ನು ಸ್ವಚ್ಛಗೊಳಿಸಲು ಮತ್ತು ದುರ್ವಾಸನೆ ಹೋಗಲಾಡಿಸಲು ತೆಂಗಿನ ಎಣ್ಣೆಯನ್ನು ಕಂಕುಳಲ್ಲಿ 15 ರಿಂದ 20 ನಿಮಿಷಗಳ ಕಾಲ ಹಚ್ಚಿ ತೊಳೆಯಬಹುದು. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಅಂಡರ್ ಆರ್ಮ್ ನಲ್ಲಿರುವ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಪರಿಣಾಮಕಾರಿ.
ಅಡಿಗೆ ಸೋಡಾ -
ಅಡಿಗೆ ಸೋಡಾವನ್ನು ಅಂಡರ್ ಆರ್ಮ್ ಗೆ ಹಚ್ಚುವುದರಿಂದಲೂ ದುರ್ವಾಸನೆ ತೊಲಗಿಸಬಹುದು. 2 ಚಮಚ ಅಡಿಗೆ ಸೋಡಾವನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ, ಪೇಸ್ಟ್ ತಯಾರಿಸಿ. ಅದನ್ನು ಅಂಡರ್ ಆರ್ಮ್ಸ್ ಮೇಲೆ ನಿಧಾನವಾಗಿ ಅನ್ವಯಿಸಿ. ನಂತರ ಅದನ್ನು 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ತೊಳೆಯಿರಿ.
ಟೊಮೆಟೋ ರಸ -
ಟೊಮೆಟೊ ರಸವು ಅಂಡರ್ ಆರ್ಮ್ ವಾಸನೆಯನ್ನು ತೆಗೆದುಹಾಕುವಲ್ಲಿ ಉತ್ತಮ ಪರಿಣಾಮವನ್ನು ಬೀರುತ್ತದೆ. ಟೊಮೆಟೊ ರಸವನ್ನು ತೆಗೆದುಕೊಂಡು ಅದರಲ್ಲಿ 2 ರಿಂದ 3 ಹನಿ ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ರಸವನ್ನು ಹತ್ತಿಯ ಸಹಾಯದಿಂದ ಕಂಕುಳಲ್ಲಿ ಹಚ್ಚಿ 10 ನಿಮಿಷಗಳ ನಂತರ ತೊಳೆಯಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.