ಕೂದಲುದುರುವಿಕೆ ಸಮಸ್ಯೆಗೆ ಕಾಫಿಯಿಂದ ಸಿಗುತ್ತೆ ಸುಲಭ ಪರಿಹಾರ
Hair Fall Treatment: ಕಾಫಿ ಅತ್ಯುತ್ತಮ ರಿಫ್ರೆಶರ್ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಕಾಫಿ ಕೂದಲಿನ ಹಲವು ಸಮಸ್ಯೆಗಳಿಗೆ ಆತ್ಯುತ್ತಮ ಪರಿಹಾರ ಎಂಬುದು ನಿಮಗೆ ತಿಳಿದಿದೆಯೇ?
Coffee For Hair Problems: ಸುಂದರವಾದ ಮತ್ತು ಆರೋಗ್ಯಕರ ಕೂದಲನ್ನು ಎಲ್ಲರೂ ಬಯಸುತ್ತಾರೆ. ಆದರೆ ಇದಕ್ಕಾಗಿ ದುಬಾರಿ ದುಬಾರಿ ಉತ್ಪನ್ನಗಳನ್ನು ಬಳಸುವ ಬದಲಿಗೆ ಪ್ರತಿ ಮನೆಯಲ್ಲೂ ಸುಲಭವಾಗಿ ಲಭ್ಯವಿರುವ ಕಾಫಿ ಪುಡಿ ತುಂಬಾ ಪ್ರಯೋಜನಕಾರಿ. ಕಾಫಿ ಬಳಕೆಯಿಂದ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ?
ಬದಲಾದ ಜೀವನಶೈಲಿ, ಕಳಪೆ ಆಹಾರಪದ್ಧತಿ ತಲೆಹೊಟ್ಟು, ಪೋಷಣೆಯ ಕೊರತೆ ಹೀಗೆ ಕೂದಲು ಉದುರುವಿಕೆಗೆ ಹಲವು ಕಾರಣ (Causes of hair fall)ಗಳಿರಬಹುದು. ಕೂದಲಿನ ಈ ರೀತಿಯ ಸಮಸ್ಯೆಗಳಿಂದ ರಕ್ಷಣೆ ಪಡೆಯಲು ಮಾರುಕಟ್ಟೆಯಲ್ಲಿ ಹಲವು ಬಗೆಯ ತೈಲಗಳು, ಶಾಂಪೂಗಳು ಲಭ್ಯವಿವೆ. ಆದಾಗ್ಯೂ, ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕಾಫಿಪುಡಿಯನ್ನು ಬಳಸಿ ಕೂದಲನ್ನು ಬುಡದಿಂದಲೂ ಗಟ್ಟಿಯಾಗಿಸಬಹುದು.
ವಾಸ್ತವವಾಗಿ, ಕಾಫಿಯಲ್ಲಿ ಕೆಫೀನ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದು ಕೂದಲನ್ನು ಬುಡದಿಂದಲೂ ಗಟ್ಟಿಯಾಗಿಸಲು ಸಹಕಾರಿ ಆಗಿದೆ. ಮಾತ್ರವಲ್ಲ, ಕೂದಲನ್ನು ಬೆಳೆಯಲು ಪ್ರಚೋದಿಸುತ್ತದೆ. ಅಷ್ಟೇ ಅಲ್ಲ, ಕಾಫಿಪುಡಿಯನ್ನು ಮುಖಕ್ಕೆ ಹಚ್ಚುವುದರಿಂದ ಇದು ಚರ್ಮದ ಕೆಲವು ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲದು.
ಇದನ್ನೂ ಓದಿ- ಮೊಟ್ಟೆಗೆ ಇದನ್ನು ಬೆರೆಸಿ ಹಚ್ಚಿ: ಬಿಳಿಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುವುದಲ್ಲದೆ, ದಷ್ಟಪುಷ್ಟವಾಗಿ ಬೆಳೆಯುತ್ತೆ!
ಕೂದಲಿಗೆ ಕಾಫಿಪುಡಿ ಬಳಕೆಯಿಂದ ಆಗುವ ಪ್ರಯೋಜನಗಳೇನು ಎಂದು ನೋಡುವುದಾದರೆ...
ಕೂದಲು ಬಲಗೊಳ್ಳುತ್ತದೆ:
ಒಂದು ಬಟ್ಟಲಿನಲ್ಲಿ ಸ್ವಲ್ಪ ಕಾಫಿ ಪುಡಿ (Coffee Powder)ಯನ್ನು ತೆಗೆದುಕೊಂಡು ಅದರಲ್ಲಿ ಕಂಡೀಷನರ್ ಮತ್ತು ಕೊಬ್ಬರಿ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕೂದಲಿಗೆ ಹಚ್ಚಿ, 30 ನಿಮಿಷಗಳ ಬಳಿಕ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಕೂದಲು ಬಲಗೊಳ್ಳುತ್ತದೆ.
ಕೂದಲು ಉದುರುವಿಕೆ:
ಎರಡು ಟೇಬಲ್ ಸ್ಪೂನ್ ಗ್ರೌಂಡ್ ಕಾಫಿಯಲ್ಲಿ ಒಂದು ಚಮಚ ಅಲೋವೆರಾ ಜೆಲ್ (Aloe vera gel)ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಈ ಮಿಶ್ರಣವನ್ನು ಕೂದಲಿಗೆ ಅನ್ವಯಿಸಿ 15 ನಿಮಿಷಗಳ ಬಳಿಕ ವಾಶ್ ಮಾಡಿ. ಈ ರೀತಿ ಮಾಡುವುದರಿಂದ ಕೂದಲುದುರುವ ಸಮಸ್ಯೆಯಿಂದ ಪರಿಹಾರ (Solution for hair loss) ಪಡೆಯಬಹುದು.
ಇದನ್ನೂ ಓದಿ- Weight Loss: ನಿಮಗೆ ವ್ಯಾಯಾಮ ಮಾಡದೆ ತೂಕ ಇಳಿಸಬೇಕೇ? ಈ ಸಲಹೆಗಳನ್ನು ಅನುಸರಿಸಿ!!
ಹೊಳೆಯುವ ಕೂದಲು:
ನೀರು ಮತ್ತು ಕಾಫಿ ಪುಡಿಯನ್ನು ಸಮಾನ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಒಂದು ಸ್ಪ್ರೇ ಬಾಟಲಿನಲ್ಲಿ ಹಾಕಿ ಈ ನೀರನ್ನು ಕೂದಲಿಗೆ ಸಿಂಪಡಿ ಕೆಲ ಹೊತ್ತು ಕೂದಲನ್ನು ಒಣಗಲು ಬಿಡಿ. ಇದರಿಂದ ಕೂದಲು ಬಲಗೊಳ್ಳುವುದರೊಂದಿಗೆ ಫಳ-ಫಳ ಹೊಳೆಯುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.