Cold Water Side Effects: ಬೇಸಿಗೆಯಲ್ಲಿ ಕೋಲ್ಡ್ ನೀರು ಕುಡಿಯುವುದರಿಂದ ಎದುರಾಗಲಿದೆ ಹೃದಯದ ಸಮಸ್ಯೆ
Cold Water Side Effects: ಬೇಸಿಗೆಯಲ್ಲಿ ಹೊರಗಿನಿಂದ ಬಂದ ತಕ್ಷಣ ಫ್ರಿಜ್ ನೀರು ಕುಡಿಯುವ ಅಭ್ಯಾಸವಿರುತ್ತದೆ. ಕೆಲವರಿಗಂತೂ ಬಿಸಿಲು ಜಾಸ್ತಿಯಾಗುತ್ತಿದ್ದಂತೆಯೇ ಕೋಲ್ಡ್ ನೀರು ಬೇಕೇ ಬೇಕು ಎನ್ನುತ್ತಾರೆ.
ಬೆಂಗಳೂರು : Cold Water Side Effects : ಬೇಸಿಗೆಯಲ್ಲಿ ಹೊರಗಿನಿಂದ ಬಂದ ತಕ್ಷಣ ಫ್ರಿಜ್ ನೀರು ಕುಡಿಯುವ ಅಭ್ಯಾಸವಿರುತ್ತದೆ. ಕೆಲವರಿಗಂತೂ ಬಿಸಿಲು ಜಾಸ್ತಿಯಾಗುತ್ತಿದ್ದಂತೆಯೇ ಕೋಲ್ಡ್ ನೀರು ಬೇಕೇ ಬೇಕು ಎನ್ನುತ್ತಾರೆ. ಆದರೆ ಈ ರೀತಿ ಮಾಡುವ ಮೂಲಕ ನಮ್ಮ ಆರೋಗ್ಯದ ಜೊತೆ ನಾವೇ ಚೆಲ್ಲಾಟ ಆಡುತ್ತಿದ್ದೇವೆ ಎನ್ನುವುದನ್ನು ಮರೆಯಬಾರದು. ಬಿಸಿಲ ಬೇಗೆಯಲ್ಲಿ ಕೋಲ್ಡ್ ನೀರು ಕುಡಿಯುವುದು ಒಂದು ಕ್ಷಣಕ್ಕೆ ಹಿತ ಎನಿಸಬಹುದು. ಆದರೆ ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಇದು ನಮ್ಮ ಹೃದಯ ಮತ್ತು ಮೆದುಳಿನ ಮೇಲೆ ಕೂಡಾ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾದರೆ ಬೇಸಿಗೆಯಲ್ಲಿ ತಣ್ಣೀರು ಕುಡಿಯುವುದರಿಂದ ಆಗುವ ಅನಾನುಕೂಲಗಳೇನು ಎಂಬುದನ್ನು ತಿಳಿಯೋಣ.
1. ಹೃದಯ ಬಡಿತ ಕಡಿಮೆಯಾಗಬಹುದು :
ಬೇಸಿಗೆಯಲ್ಲಿ, ಕೋಲ್ಡ್ ನೀರು ಕುಡಿಯುವುದು ನಿಮ್ಮ ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸಾಮಾನ್ಯ ನೀರನ್ನು ಕುಡಿಯಲು ಪ್ರಯತ್ನಿಸಿ. ಕೋಲ್ಡ್ ನೀರು ನಿಮ್ಮ ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ. ಹೀಗಾದಾಗ ಹೃದ್ರೋಗದ ಅಪಾಯ ಕೂಡಾ ಹೆಚ್ಚುತ್ತದೆ. ಇದರೊಂದಿಗೆ ಕೋಲ್ಡ್ ನೀರು ಕುಡಿಯುವುದರಿಂದ ಮೆದುಳಿನ ಮೇಲೆ ಕೂಡಾ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : Morning Sickness: ಬೆಳಗ್ಗೆ ಎದ್ದ ತಕ್ಷಣ ದೇಹದಲ್ಲಿ ದೌರ್ಬಲ್ಯ ಕಾಡುತ್ತಿದೆಯೇ? ಇಲ್ಲಿದೆ ಸಲಹೆ
2. ಜೀರ್ಣಾಂಗ ವ್ಯವಸ್ಥೆಯ ಮೇಲೂ ಕೆಟ್ಟ ಪರಿಣಾಮ :
ಕೋಲ್ಡ್ ನೀರು ಕುಡಿದರೆ ಬಿಸಿಲ ಧಗೆಯಿಂದ ಮುಕ್ತಿ ಸಿಗುತ್ತದೆ, ದೇಹಕ್ಕೆ ಹಿತ ಅನ್ನಿಸುತ್ತದೆ ಎಂಬ ಭಾವನೆಯಿಂದ ನಾವು ಕೂಡಾ ತಣ್ಣೀರಿನ ಮೊರೆ ಹೋಗುತ್ತೇವೆ. ಆದರೆ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೂಡಾ ಕೆಟ್ಟ ಪರಿಣಾಮ ಬೀರುತ್ತದೆ. ಅಂದರೆ ನಾವು ಸೇವಿಸುವ ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ.
3. ರೋಗನಿರೋಧಕ ಶಕ್ತಿಯೂ ದುರ್ಬಲವಾಗುತ್ತದೆ :
ಕರೋನಾ ಅವಧಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಬಹಳ ಮುಖ್ಯ. ಆದರೆ ತಣ್ಣೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ, ಬೇಸಿಗೆಯಲ್ಲಿಯೂ ಸಾಮಾನ್ಯ ನೀರನ್ನು ಕುಡಿಯಲು ಪ್ರಯತ್ನಿಸಿ. ಹೀಗೆ ಮಾಡಿದಾಗ ಕೆಲವು ಕಾಯಿಲೆಗಳನ್ನು ಕೂಡಾ ದೂರವಿರಿಸಬಹುದು.
ಇದನ್ನೂ ಓದಿ : Weight Loss Fruit: ಈ ಹಣ್ಣನ್ನು ಸೇವಿಸುವುದರಿಂದ ಮಾಯವಾಗುತ್ತೆ ಬೆಲ್ಲಿ ಫ್ಯಾಟ್
4. ತಲೆನೋವು ಬರಬಹುದು :
ಇದರೊಂದಿಗೆ, ನೀವು ತಣ್ಣೀರು ಕುಡಿದ ತಕ್ಷಣ, ಅದು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾದಾಗ ತಲೆ ನೋವೂ ಕಾಣಿಸಿಕೊಳ್ಳುತ್ತದೆ. ಕೆಲವರು ಬೇಸಿಗೆಯಲ್ಲಿ ಹೆಚ್ಚು ತಲೆ ನೋವಿನ್ಸಮಸ್ಯೆಯನ್ನು ಹೇಳಿಕೊಳ್ಳುತ್ತಾ ಇರುತ್ತಾರೆ. ಆ ಸಮಸ್ಯೆಗೆ ಕೋಲ್ಡ್ ವಾಟರ್ ಕೂಡಾ ಕಾರಣವಾಗಿರಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.