Budh Gochar Job Success : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ವ್ಯಕ್ತಿಯ ಜಾತಕದ ಮೇಲೆ ತನ್ನದೇ ಆದ ಪರಿಣಾಮವನ್ನು ಬೀರುತ್ತದೆ. ಬುಧ ಗ್ರಹವನ್ನು ಬುದ್ಧಿವಂತಿಕೆ ಮತ್ತು ಮಾತಿನ ದೇವರು ಎಂದು ಕರೆಯಲಾಗುತ್ತದೆ. ಯಾರ ಜಾತಕದಲ್ಲಿ ಬುಧ ಗ್ರಹವು  ಉಚ್ಚ ಸ್ಥಾನದಲ್ಲಿರುತ್ತದೆಯೋ ಅವರು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ.  ಮಾತ್ರವಲ್ಲ, ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ.  ಇನ್ನು ಬುಧ ಅಶುಭ ಪರಿಣಾಮಗಳನ್ನು ನೀಡಲು ಆರಂಭಿಸಿದರೆ, ವ್ಯಕ್ತಿಯ ಪ್ರಗತಿಯು ನಿಲ್ಲುತ್ತದೆ. ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದ ನಂತರ ತನ್ನ ರಾಶಿಯನ್ನು ಬದಲಾಯಿಸುತ್ತದೆ. 


COMMERCIAL BREAK
SCROLL TO CONTINUE READING

ಇತ್ತೀಚೆಗೆ ಆಗಸ್ಟ್ 21 ರಂದು ಬುಧನು ಸಿಂಹ ರಾಶಿಯನ್ನು ತೊರೆದು ಕನ್ಯಾರಾಶಿಗೆ ಪ್ರವೇಶಿಸಿದ್ದಾನೆ.  ಬುಧ ಗ್ರಹವು 34 ದಿನಗಳ ಕಾಲ ಅಂದರೆ ಅಕ್ಟೋಬರ್ 25 ರವರೆಗೆ ಕನ್ಯಾರಾಶಿಯಲ್ಲಿಯೇ ಇರಲಿದ್ದಾನೆ. ಬುಧ ಸಂಕ್ರಮಣದ ಪರಿಣಾಮವು ಅನೇಕ ರಾಶಿಚಕ್ರಗಳ ಮೇಲೆ ಇರುತ್ತದೆ. ಆದರೆ,  ಈ ಸಂಚಾರವು ಕೆಲವು ರಾಶಿಯವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಮಿಥುನ, ಕರ್ಕ, ಸಿಂಹ ಮತ್ತು ಕನ್ಯಾ ರಾಶಿಯವರಿಗೆ ತಮ್ಮ ಕೆಲಸದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.  ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಕೂಡಾ  ಈ ಅವಧಿಯಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ. 


ಇದನ್ನೂ ಓದಿ : ಈ ಮೂರು ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳ ಪ್ರಾರಂಭ.! ಸೂರ್ಯ-ಶನಿ-ಬುಧ ನೀಡಲಿದ್ದಾರೆ ಒಂದರ ಹಿಂದೆ ಒಂದು ಯಶಸ್ಸು


ಬುಧ ಸಂಚಾರದ ಪರಿಣಾಮ :
ಮಿಥುನ ರಾಶಿ  : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಗ್ರಹದ ಸಂಕ್ರಮಣವು ಎಲ್ಲಾ 12 ರಾಶಿಚಕ್ರಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮವನ್ನು ಬೀರುತ್ತದೆ. ಕನ್ಯಾರಾಶಿಯಲ್ಲಿ ಬುಧ ಪ್ರವೇಶದಿಂದ, ಮಿಥುನ ರಾಶಿಯ ಜನರ ಕುಟುಂಬ ಜೀವನವು ಆಹ್ಲಾದಕರ ಮತ್ತು ಆರಾಮದಾಯಕವಾಗಿರುತ್ತದೆ. ಕುಟುಂಬದೊಂದಿಗೆ ಸಂಬಂಧವು ಬಲವಾಗಿರುತ್ತದೆ. ತಮ್ಮ ವ್ಯಕ್ತಿತ್ವದಿಂದ ಕಚೇರಿಯಲ್ಲಿ ಸಹೋದ್ಯೋಗಿಗಳನ್ನು ಆಕರ್ಷಿಸುವರು. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಈ ಸಮಯವು ಅದಕ್ಕೆ ಉತ್ತಮವಾಗಿದೆ. ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರಸ್ಥರಿಗೆ ಲಾಭ ಮತ್ತು ಹೊಸ ಅವಕಾಶಗಳು ಸಿಗುತ್ತವೆ.  


ಕರ್ಕ ರಾಶಿ :  ಈ ರಾಶಿಯವರಿಗೆ ಈ ಸಮಯವು ತುಂಬಾ ಶುಭಕರವಾಗಿರುತ್ತದೆ. ಸಹೋದರ ಮತ್ತು ಸ್ನೇಹಿತರ ಬೆಂಬಲ ಸಿಗಲಿದೆ. ಈ ರಾಶಿಯವರು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ.  ಲಾಭವು ಹೆಚ್ಚಾಗುತ್ತದೆ. ಈ ಸಮಯವು ಪತ್ರಿಕೋದ್ಯಮ, ಬರವಣಿಗೆ, ನಟನೆ, ನಿರ್ದೇಶನ, ಆಂಕರಿಂಗ್ ಇತ್ಯಾದಿ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. 


ಇದನ್ನೂ ಓದಿ : Vastu Tips: ತೆಂಗಿನ ಕಾಯಿ ತಾಯಿ ಲಕ್ಷ್ಮಿಯ ಸ್ವರೂಪ,


ಸಿಂಹ ರಾಶಿ: ಕನ್ಯಾರಾಶಿಯಲ್ಲಿ ಬುಧ ಸಂಕ್ರಮಣದ ಫಲವಾಗಿ ಸಿಂಹ ರಾಶಿಯವರಿಗೆ  ಭಾರೀ ಅದೃಷ್ಟ ಕೈ ಹಿಡಿಯಲಿದೆ. ಈ ಸಮಯವು ಈ ಜನರಿಗೆ ಬಹಳ ವಿಶೇಷವಾಗಿರುತ್ತದೆ. ಈ ಅವಧಿಯಲ್ಲಿ ಪೂರ್ವಜರ ಭೂಮಿ ಮತ್ತು ಆಸ್ತಿಯಿಂದ ಲಾಭ ಪಡೆಯುವ ಬಲವಾದ ಅವಕಾಶಗಳಿವೆ. ಇದರೊಂದಿಗೆ, ಈ ಜನರ ಖ್ಯಾತಿ ಹೆಚ್ಚಾಗುತ್ತದೆ.  


ಕನ್ಯಾ ರಾಶಿ :  ಕನ್ಯಾ ರಾಶಿಯನ್ನು ಬುಧದ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯಲ್ಲಿ ಬುಧ ಪ್ರವೇಶಿಸಿದ್ದು ಕನ್ಯಾ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ತರಲಿದೆ.  ಅನಾರೋಗ್ಯ ಪೀಡಿತರ ಆರೋಗ್ಯ ಸುಧಾರಿಸಲಿದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಸಾಧನೆ ಕಂಡು ಬರಲಿದೆ. ಅನೇಕ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಕುಟುಂಬ ಮತ್ತು ವೈವಾಹಿಕ ಜೀವನ ಸುಖಮಯವಾಗಿರುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.