Benefits Of Dosa: ಸಾಮಾನ್ಯವಾಗಿ ಎಲ್ಲಾದರೂ ಹೊರಗೆ ಹೋದಾಗ ಜನರು ಇಡ್ಲಿ, ದೋಸೆ ತಿನ್ನಲು ಇಷ್ಟಪಡುತ್ತಾರೆ. ದಕ್ಷಿಣ ಭಾರತದ ಆಹಾರಗಳು ವಿವಿಧ ವಿಷಯಗಳನ್ನು ಒಳಗೊಂಡಿವೆ, ಅವುಗಳಲ್ಲಿ ಹಲವು ಸಾಕಷ್ಟು ಆರೋಗ್ಯಕರವಾಗಿವೆ. ಅಂತಹ ಆರೋಗ್ಯಕರ ಆಹಾರಗಳಲ್ಲಿ ದೋಸೆ ಕೂಡ ಒಂದು. ದೋಸೆ ದಕ್ಷಿಣದ ಪ್ರಸಿದ್ಧ ಆಹಾರಗಳಲ್ಲಿ ಒಂದಾಗಿದೆ. 


COMMERCIAL BREAK
SCROLL TO CONTINUE READING

ದೋಸೆಯಲ್ಲಿ ಹಲವು ವಿಧಗಳಿವೆ.  ದೋಸೆ (Dosa) ತಿನ್ನಲು ರುಚಿಕರವಾಗಿರುವುದು ಮಾತ್ರವಲ್ಲ ಇದು ಆರೋಗ್ಯಕ್ಕೂ ಕೂಡ ಹೆಚ್ಚು ಪ್ರಯೋಜನಕಾರಿ ಆಗಿದೆ. ಹಾಗಿದ್ದರೆ ದೋಸೆ ತಿನ್ನುವುದರಿಂದಾಗುವ ಲಾಭಗಳ ಬಗ್ಗೆ ತಿಳಿಯೋಣ..


ಇದನ್ನೂ ಓದಿ- Benefits of soaked raisins:ಒಣದ್ರಾಕ್ಷಿಯನ್ನು ಈ ರೀತಿ ಸೇವಿಸಿದರೆ ವಿವಾಹಿತ ಪುರುಷರಿಗೆ ಸಿಗುತ್ತೆ ಹೆಚ್ಚು ಲಾಭ


ದೋಸೆ ಸೇವನೆಯಿಂದ ಸಿಗುವ ಆರೋಗ್ಯಕರ ಪ್ರಯೋಜನಗಳಿವು:
ಇದು ಸುಲಭವಾಗಿ ಜೀರ್ಣವಾಗುತ್ತದೆ - 

ದೋಸೆ ಹಿಟ್ಟನ್ನು ತಯಾರಿಸಲು ಅಕ್ಕಿ ಮತ್ತು ಉದ್ದಿನಬೇಳೆಯನ್ನು ಬಳಸಲಾಗುತ್ತದೆ. ಇದರ ನಂತರ, ಅದರಲ್ಲಿ ಯೀಸ್ಟ್ ಅನ್ನು ಬೆಳೆಸಲಾಗುತ್ತದೆ. (ಸಾಮಾನ್ಯವಾಗಿ ಮನೆಯಲ್ಲಿ ಯೀಸ್ಟ್ ಬಳಸುವುದಿಲ್ಲ. ) ಈ ಕಾರಣದಿಂದಾಗಿ ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ನಿಮಗೆ ಹೊಟ್ಟೆ ಭಾರವಾಗುವುದಿಲ್ಲ.


ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲ- ದೋಸೆಯಲ್ಲಿ ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿವೆ. ಹಾಗಾಗಿ ದೋಸೆ ನಿಮಗೆ ತ್ವರಿತ ಶಕ್ತಿಯನ್ನು ನೀಡುವ ಆಹಾರ (Benefits Of Dosa) ಎಂದು ಪರಿಗಣಿಸಲಾಗಿದೆ.


ಇದನ್ನೂ ಓದಿ- Weight Loss: ಈ 5 ಆಹಾರ ಪದಾರ್ಥಗಳ ಸೇವನೆಯಿಂದ ಬೇಗ ತೂಕ ಕಡಿಮೆಯಾಗುತ್ತಂತೆ


ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ- ದೋಸೆಯನ್ನು ತಯಾರಿಸಲು ಉದ್ದಿನ ಬೇಳೆ ಅನ್ನು ಬಳಸಲಾಗುತ್ತದೆ. ವಾಸ್ತವವಾಗಿ ಉದ್ದಿನ ಬೇಳೆ ಅನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದನ್ನು ತಿನ್ನುವುದರಿಂದ, ನಿಮ್ಮ ಹೊಟ್ಟೆ ತುಂಬ ಹೊತ್ತು ತುಂಬಿರುತ್ತದೆ.


ಖನಿಜಗಳಿಂದ ಸಮೃದ್ಧವಾಗಿದೆ- ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ದೋಸೆಯಲ್ಲಿ ಹೇರಳವಾಗಿ ಕಂಡುಬರುತ್ತವೆ. ದೋಸೆಯಲ್ಲಿ ವಿಟಮಿನ್ ಸಿ ಕೂಡ ಹೇರಳವಾಗಿ ಕಂಡುಬರುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ