Weight Loss Easy Tips : ಇತ್ತೀಚಿನ ದಿನಗಳಲ್ಲಿ ತಪ್ಪು ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದ ಹೆಚ್ಚಿನವರು ಬೊಜ್ಜಿನ  ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತೂಕ ಇಳಿಸಿಕೊಳ್ಳಲು ಜನರು ವಿವಿಧ ಆಹಾರಕ್ರಮಗಳನ್ನು ಅನುಸರಿಸುತ್ತಾರೆ. ಕೆಲವರು ಗಂಟೆಗಟ್ಟಲೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರೆ. ಅನೇಕರು ತಮ್ಮ ಆಹಾರದ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗುತ್ತಾರೆ. ಆದರೆ, ಇಷ್ಟೆಲ್ಲಾ ಮಾಡಿದರೂ ತೂಕ ಕಡಿಮೆಯಾಗುವುದಿಲ್ಲ. ಬದಲಿಗೆ ದೇಹ  ಆಯಾಸಗೊಳ್ಳುತ್ತದೆ. ತೂಕ ಇಳಿಸಿಕೊಳ್ಳಲು, ಕಡಿಮೆ ಆಹಾರ ಸೇವನೆಯ ಅಗತ್ಯವಿಲ್ಲ. ಬದಲಾಗಿ ಸರಿಯಾದ ಆಹಾರವನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು. ಕೆಲವು ಸರಳ, ಆರೋಗ್ಯಕರ ಮತ್ತು ನೈಸರ್ಗಿಕ ವಿಧಾನಗಳಲ್ಲಿ ತೂಕವನ್ನು ಕಳೆದುಕೊಳ್ಳಬಹುದು. 


COMMERCIAL BREAK
SCROLL TO CONTINUE READING

ತೂಕ ನಷ್ಟಕ್ಕೆ ಸೋಯಾ ಚಂಕ್ಸ್ :
ತೂಕ ನಷ್ಟಕ್ಕೆ, ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪ್ರೋಟೀನ್ ಆಹಾರವನ್ನು ಶಿಫಾರಸು ಮಾಡಲಾಗುತ್ತದೆ. ಇದಕ್ಕಾಗಿ ಸೋಯಾ  ಚಂಕ್ಸ್ ಅನ್ನು ಆಹಾರದಲ್ಲಿ ಸೇರಿಸಬಹುದು. ಪ್ರೋಟೀನ್‌ ಹೊರತಾಗಿ, ಇದು ಜೀವಸತ್ವಗಳು, ಖನಿಜಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಸೋಯಾಬೀನ್ ನಲ್ಲಿ ನಾರಿನಂಶ ಹೆಚ್ಚಿದ್ದು, ಇದು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಸ್ನಾಯುಗಳ ಬೆಳವಣಿಗೆಗೂ ಸಹಕಾರಿಯಾಗುತ್ತದೆ. 


ಇದನ್ನೂ ಓದಿ : ಕರ್ಕಾಟಕ ಲಗ್ನದಲ್ಲಿ ತೀರ್ಥ ರೂಪಿಣಿಯಾಗಿ ನೆರೆದಿದ್ದ ಸಾವಿರಾರು ಭಕ್ತರಿಗೆ ಕಾವೇರಿ ಮಾತೆ ದರ್ಶನ


ತೂಕ ನಷ್ಟಕ್ಕೆ ಸೋಯಾಬೀನ್ ಅನ್ನು ಹೇಗೆ ಸೇವಿಸಬೇಕು : 
1. ಸೋಯಾ ಅವಲಕ್ಕಿ :  

ದೇಹದ ತೂಕವನ್ನು ಕಡಿಮೆ ಮಾಡಲು ಬೆಳಗಿನ ಉಪಹಾರದಲ್ಲಿ ಸೋಯಾ ಬಿನ್ ಸೇವಿಸಬಹುದು. ಇದು ತಿನ್ನಲು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೆಳಗಿನ ಉಪಹಾರ ತಯಾರಿಸಲು ಕುಡಿಯುವ ನೀರಿನಲ್ಲಿ ಸೋಯಾವನ್ನು ಹಾಕಿ. ಒಂದೆರಡು ನಿಮಿಷಗಳ ನಂತರ ಸೋಯಾದಲ್ಲಿರುವ ನೀರನ್ನು ಚೆನ್ನಾಗಿ ಹಿಂಡಿ ತೆಗೆಯಿರಿ. ನಂತರ ಮಿಕ್ಸಿಯಲ್ಲಿ ಹಾಕಿ ತರಿ ತರಿ  ರುಬ್ಬಿಕೊಳ್ಳಿ. ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ಸಾಸಿವೆ ಮತ್ತು ಕರಿಬೇವಿನ ಸೊಪ್ಪು ಹಾಕಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಕಡಲೆಕಾಯಿಯನ್ನು ಹಾಕಿ 2 ನಿಮಿಷ ಫ್ರೈ ಮಾಡಿ. ಸ್ವಲ್ಪ ಅರಿಶಿನ ಪುಡಿ ಹಾಕಿ ಒಂದು ನಿಮಿಷ ಹುರಿಯಿರಿ. ನಂತರ ರುಬ್ಬಿಟ್ಟುಕೊಂಡ ಸೋಯಾ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಂತಿಮವಾಗಿ ನಿಂಬೆ ರಸ ಮತ್ತು ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೇರಿಸಿ. ಇಷ್ಟು ಮಾಡಿದರೆ ಸೋಯಾ ಅವಲಕ್ಕಿ  ಸಿದ್ದವಾಗುತ್ತದೆ. ಬೆಳಗಿನ ಉಪಾಹಾರದಲ್ಲಿ ಸೋಯಾ ಅವಲಕ್ಕಿ ತಿನ್ನುವುದರಿಂದ ಹೊಟ್ಟೆಯು ತುಂಬಿರುತ್ತದೆ. ಪದೇ ಪದೇ ಹಸಿವಾಗುವುದಿಲ್ಲ. ತೂಕ ನಷ್ಟಕ್ಕೂ ಇದು ಪ್ರಯೋಜನಕಾರಿಯಾಗಿದೆ.


2. ಸೋಯಾ ಚಂಕ್ಸ್ ಕರಿ : 
ತೂಕ ಇಳಿಸಿಕೊಳ್ಳಲು ಸೋಯಾ ಚಂಕ್‌ ನ ಕರಿ ಮಾಡಬಹುದು. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸೋಯಾ ಚಂಕ್ಸ್  ಕರಿಯನ್ನು ಮಧ್ಯಾಹ್ನ ಅಥವಾ ರಾತ್ರಿಯ ಊಟದ ಜೊತೆಗೆ ಸೇವಿಸಬಹುದು. ಇದನ್ನು ಮಾಡಲು ನೀವು ಆಲಿವ್ ಎಣ್ಣೆ ಅಥವಾ ತುಪ್ಪವನ್ನು ಬಳಸಬಹುದು.  ಬೇಕಾದರೆ ಇದರೊಂದಿಗೆ  ನಿಮ್ಮ ಆಯ್ಕೆಯ ತರಕಾರಿಗಳನ್ನು ಸಹ ಇದಕ್ಕೆ ಸೇರಿಸಬಹುದು.


ಇದನ್ನೂ ಓದಿ : ನಿಂಬೆರಸದ ಜೊತೆ ಈ ವಸ್ತು ಬೆರೆಸಿ ತಲೆಗೆ ಹಚ್ಚಿದರೆ ತಕ್ಷಣವೇ ಕಪ್ಪಾಗುತ್ತೆ ಬಿಳಿಕೂದಲು


3. ಹುರಿದ ಸೋಯಾ : 
ಹೆಚ್ಚಿನ ಜನರು ಸಂಜೆ ಹಸಿವಾದಾಗ ಅನಾರೋಗ್ಯಕರ ಜಂಕ್ ಫುಡ್ ತಿನ್ನುತ್ತಾರೆ.  ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ನೀವು ಹುರಿದ ಸೋಯಾ ಚಂಕ್ ಅನ್ನು ತಿನ್ನಬಹುದು. ಇದು ಕಡಿಮೆ ಕ್ಯಾಲೋರಿ ಹೊಂದಿದ್ದು ದೇಹಕ್ಕೆ ಹೆಚ್ಚಿನ ಪ್ರೋಟೀನ್ ಅನ್ನು ಒದಗಿಸುತ್ತದೆ. ಇದಲ್ಲದೆ, ಇದು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಬಿಸಿ ಮಾಡಿ. ಅದಕ್ಕೆ ಸೋಯಾ ಚಂಕ್ಸ್ ಹಾಕಿ ಹುರಿಯಿರಿ. ಈಗ ಚಾಟ್ ಮಸಾಲಾ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕಡಿಮೆ ಉರಿಯಲ್ಲಿ 5 ನಿಮಿಷ ಫ್ರೈ ಮಾಡಿ. ನಿಮ್ಮ ರುಚಿಕರವಾದ ಮತ್ತು ಆರೋಗ್ಯಕರ ತಿಂಡಿ ಸಿದ್ಧವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್