Cholesterol Control Tips : ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಅನೇಕ  ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೊಲೆಸ್ಟ್ರಾಲ್ ಹೆಚ್ಚಾದರೆ ಕಾಣಿ ಸಿಕೊಳ್ಳು ವ ಮೊದಲ ಅಪಾಯ ಎಂದರೆ ಹೃದಯಾಘಾತ. ಇದಲ್ಲದೆ, ನಿರಂತರ ಅಧಿಕ ರಕ್ತದೊತ್ತಡ ಅಥವಾ ಸ್ಟ್ರೋಕ್ ನಂತಹ ಸಮಸ್ಯೆಗಳು ಕೂಡಾ ಕಾಣಿಸಿಕೊಳ್ಳುತ್ತದೆ.  ದೇಹದಲ್ಲಿ ಅಗತ್ಯವಾದ ಪೋಷಕಾಂಶಗಳ ಕೊರತೆಯಿಂದಾಗಿ ಇದು ಸಂಭವಿಸುತ್ತದೆ. ಈ ಹಿನ್ನೆಲೆಯಲ್ಲಿ ಮ ಜೀವನಶೈಲಿಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. 


COMMERCIAL BREAK
SCROLL TO CONTINUE READING

1. ಫೈಬರ್ ಭರಿತ ಆಹಾರಗಳನ್ನು ಸೇವಿಸಿ :
ನಿಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚು ಫೈಬರ್ ಭರಿತ ವಸ್ತುಗಳನ್ನು ಸೇರಿಸಿದರೆ, ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ನಿಯಂತ್ರಣದಲ್ಲಿರುತ್ತದೆ. ದಿನಕ್ಕೆ 20-35 ಗ್ರಾಂ ಫೈಬರ್ ತೆಗೆದುಕೊಳ್ಳು ವಂತೆ ಸೂಚಿಸಲಾಗುತ್ತದೆ. ಈ ಕಾರಣದಿಂದಾಗಿ, ಓಟ್ಸ್, ಧಾನ್ಯಗಳು ಮತ್ತು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಹೆಚ್ಚಾಗಿ ಸೇರಿಸಿಕೊಳ್ಳಬೇಕು. ಯಾಕೆಂದರೆ ಅವುಗಳು ಫೈಬರ್ ನ ಉತ್ತಮ ಮೂಲವಾಗಿದೆ. 


ಇದನ್ನೂ ಓದಿ : ವೇಗವಾಗಿ ತೂಕ ಹೆಚ್ಚಾಗುತ್ತಿದೆಯೇ? ಬೆಂಡೆಕಾಯಿ ಅನ್ನು ತಪ್ಪದೇ ಸೇವಿಸಿ


2. ಕಡಿಮೆ ಕ್ಯಾಲೋರಿಯುಕ್ತ ಆಹಾರ : 
ಕಡಿಮೆ ಕ್ಯಾಲೋರಿ ಆಹಾರಗಳನ್ನು ಸೇವಿಸಿ. ವಾಸ್ತವವಾಗಿ, ತೂಕ ಹೆಚ್ಚಾಗುವುದರಿಂದ, ತೂಕ ಹೆಚ್ಚಾಗುವುದರಿಂದ ಹೃದಯಾಘಾತದ ಸಾಧ್ಯತೆಗಳು ಹೆಚ್ಚಾಗುತ್ತವೆ. ಹಾಗಾಯಿ ಮೊದಲು ತೂಕವನ್ನು ನಿಯಂತ್ರಿಸುವತ್ತ ಹೆಚ್ಚು ಗಮನ ಹರಿಸಬೇಕು. ಇದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಕಡಿಮೆ ಕ್ಯಾಲೋರಿಯುಳ್ಳ ತರಕಾರಿಗಳಲ್ಲಿ ಕರಗುವ ಫೈಬರ್ ಇರುತ್ತದೆ. ಓಟ್ಸ್, ಸೂಪ್, ಚಿಯಾ ಬೀಜಗಳು, ಗ್ರೀಕ್ ಯೋಗರ್ಟ್ ಕಡಿಮೆ ಕ್ಯಾಲೋರಿ ಆಹಾರಗಳಾಗಿವೆ. 


3. ಪ್ರೋಟೀನ್ ಭರಿತ ವಸ್ತುಗಳು :  
ಇದರ ಹೊರತಾಗಿ, ನಿಮ್ಮ ಆಹಾರದಲ್ಲಿ ಪ್ರೋಟೀನ್ ಭರಿತ ವಸ್ತುಗಳನ್ನು ಸೇರಿಸಿಕೊಳ್ಳಬೇಕು. ಪ್ರೋಟೀನ್-ಭರಿತ ಸೋಯಾ ಪನೀರ್, ಸೋಯಾ ಹಾಲು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪರಿಣಾಮಕಾರಿ ಎನ್ನಲಾಗುತ್ತದೆ. ಒಂದು ದಿನದಲ್ಲಿ 25 ಗ್ರಾಂ ಸೋಯಾ ಪ್ರೋಟೀನ್ ಸೇವಿಸುವುದರಿಂದ ಎಲ್ಡಿಎಲ್ ಅನ್ನು ಕಡಿಮೆ ಮಾಡಲು ಸಹಾಯಕವಾಗಿದೆ. 


ಇದನ್ನೂ ಓದಿ : Green Leaves For Diabetes: ಮಧುಮೇಹಿಗಳಿಗೆ ಪರಿಹಾರ ನೀಡಲಿವೆ ಈ ಮೂರು ಹಸಿರು ಎಲೆಗಳು


4. ಮೀನು ಸೇವನೆ : 
ಇದರೊಂದಿಗೆ, ನಿಮ್ಮ ಆಹಾರದಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸೇರಿಸಿಕೊಳ್ಳಬೇಕು. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಇದು ಸಹಾಯಕವಾಗಲಿದೆ. ವಾರಕ್ಕೆ ಎರಡು ಅಥವಾ ಮೂರು ಬಾರಿ ಮೀನುಗಳನ್ನು ಸೇವಿಸಿದರೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು . 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.