Hair Care Tips: ಕೂದಲು ಉದುರುವುದು ದೊಡ್ಡ ಸಮಸ್ಯೆಯೇ ಆದರೆ ಅದಕ್ಕೆ ಪರಿಹಾರವಿದೆ. ಸಿಕ್ಕ ಸಿಕ್ಕ ಪ್ರಾಡಕ್ಟ್‌ಗಳನ್ನು ಕೂದಲಿಗೆ ಬಳಸುವುದು, ಕಳಪೆ ಆಹಾರ ಕ್ರಮ, ಹೀಗೆ ಹಲವಾರು ಕಾರಣಗಳಿಂದ ಕೂದಲು ಉದುರುತ್ತವೆ. ಆದರೆ ಅದಕ್ಕೆ ಉತ್ತಮ ಪರಿಹಾರವೆಂದರೇ ನಮ್ಮ ಆಹಾರ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು. ಉತ್ತಮ ಆಹಾರ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೇ ನಮ್ಮ ದೇಹದ ಜೊತೆಗೆ ಕೂದಲನ್ನು ಆರೋಗ್ಯವಾಗಿರಿಸಬಹುದು. ಹಾಗಾದರೆ ಈ ಹೇರ್‌ಫಾಲ್‌ ಸಮಸ್ಯೆಗೆ ಯಾವ ಆಹಾರ ಕ್ರಮ ಅನುಸರಿಸಬೇಕು ಎಂದು ತಿಳಿಯೋಣ. 


COMMERCIAL BREAK
SCROLL TO CONTINUE READING

ಒಮೆಗಾ-3 ಕೊಬ್ಬಿನಾಮ್ಲಗಳ ಸೇವನೆ
ಒಮೆಗಾ-3 ಕೊಬ್ಬಿನಾಮ್ಲಗಳ ಸೇವನೆ ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹಕಾರಿಗುತ್ತವೆ. ಇದು ಕೂದಲು ಉದುರುವಿಕೆಯನ್ನು ಕಡಿಮೆಮಾಡಿ ಅವುಗಳನ್ನು ಸೋಪಾಗಿ ಬೆಳೆಯುವಂತೆ ಮಾಡುತ್ತವೆ. ಒಮೆಗಾ-3 ಕೊಬ್ಬಿನಾಮ್ಲಗಳು ಎಂದರೇ ಅಗಸೆಬೀಜ, ಬೆಣ್ಣೆ, ಮೀನು ಮತ್ತು ವಾಲ್ನಟ್. ಇವುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲ ಕಂಡುಬರುತ್ತದೆ. 


ಬಿ-ಕಾಂಪ್ಲೆಕ್ಸ್ ಸೇವನೆ
ಬಿ-ಕಾಂಪ್ಲೆಕ್ಸ್ ಸೇವನೆಯು ದೇಹದಲ್ಲಿ ಬಿ ಜೀವಸತ್ವಗಳನ್ನು ಹೆಚ್ಚಿಸುತ್ತವೆ. ಇವು ಆರೋಗ್ಯರ ಕೂದಲಿಗೆ ಅವಶ್ಯಕ. ಆದ್ದರಿಂದ ಮೊಳಕೆ ಕಾಳುಗಳು, ಆಲೂಗಡ್ಡೆ, ಕ್ಯಾರೆಟ್ ಮತ್ತು ಕೋಸುಗಡ್ಡೆಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ, ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಿ.


ಇದನ್ನೂ ಓದಿ-ದುಂಡಗಿರುವ ಹೊಟ್ಟೆ ಚಪ್ಪಟೆಯಾಗಬೇಕಾದರೆ ಈ ನಾಲ್ಕು ವಸ್ತುಗಳನ್ನು ಸೇವಿಸಿ ಸಾಕು !


ವಿಟಮಿನ್ ಸಿ ಅಂಶ ಹೊಂದಿರುವ ಆಹಾರಗಳ ಸೇವನೆ
ವಿಟಮಿನ್ ಸಿ ಅಂಶ ಹೊಂದಿರುವ ಆಹಾರಗಳ ಸೇವನೆ ಕೂದಲಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ಆಮ್ಲಾ, ಪೇರಳೆ, ಕಿತ್ತಳೆ, ನಿಂಬೆ ಹೀಗೆ ಹಲವಾರು ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ. ಇವುಗಳನ್ನು ಸೇವಿಸುವುದರಿಂದ ನಿಮ್ಮ ಕೂದಲು ಬಲಶಾಲಿಯಾಗುತ್ತವೆ ಮತ್ತು ದಟ್ಟವಾಗಿ ಬೆಳೆಯುತ್ತವೆ. 


ಕಬ್ಬಿಣಂಶ ಇರುವ ಆಹಾರವನ್ನು ಸೇವಿಸಿ
ದಟ್ಟವಾದ ಹೊಳೆಯುವ ಕೇಶಕ್ಕಾಗಿ ಕಬ್ಬಿಣಂಶ ಇರುವ ಆಹಾರವನ್ನು ಸೇವಿಸಿ. ದೇಹದಲ್ಲಿ ಹಿಮೋಗ್ಲೋಬಿನ್‌ ಹಾಗೂ ಕಬ್ಬಣಂಶ ಕಡಿಮೆಯಾದರೇ ಕೂದಲಿನ ಸಮಸ್ಯೆಗಳು ಉದ್ಭವವಾಗುತ್ತವೆ. ಅದಕ್ಕಾಗಿ ಮಾಂಸ, ಮೀನು, ಪಾಲಕ್‌ನ್ನು ಸೇವಿಸಿ.


ಸರಿಯಾಗಿ ನೀರನ್ನು ಕುಡಿಯುವುದು
ಆರೋಗ್ಯಕರ ಕೂದಲಿಗಾಗಿ ನೀರನ್ನು ಕುಡಿಯುವುದು ತುಂಬಾ ಮುಖ್ಯ. ಕೂದಲಿನ ಬೆಳವಣಿಗೆಗೆ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದ ನೀರು ನಿಮ್ಮ ದೇಹದಲ್ಲಿ ಇರದೇ ಹೋದಾಗ ಮಾತ್ರ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಕೂದಲಿನ ಬೆಳವಣಿಗೆ ಸಾಕಷ್ಟು ಪ್ರಮಾಣದ ನೀರನ್ನು ಸೇವಿಸಿ ಆರೋಗ್ಯವಾಗಿರಿ. 


ಇದನ್ನೂ ಓದಿ-ಧನ-ಧಾನ್ಯಗಳಿಂದ ಮನೆ ತುಂಬಿರಬೇಕೆಂದರೆ ಮಹಿಳೆಯರು ಪಿತೃಪಕ್ಷದಲ್ಲಿ ಈ 5 ವಸ್ತುಗಳನ್ನು ದಾನ ಮಾಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.