ಒಂದೇ ವಾರದಲ್ಲಿ ಕೇವಲ ಹೊಟ್ಟೆ ಭಾಗದ ಕೊಬ್ಬಷ್ಟೇ ಕರಗಿಸಬೇಕೆ? ಈ ಜ್ಯೂಸ್ ಕುಡಿಯಿರಿ
ಆರೋಗ್ಯ ದೃಷ್ಟಿಯಿಂದ ಇದು ತುಂಬಾ ಪ್ರಯೋಜನಕಾರಿ. ಇದರ ಔಷಧೀಯ ಗುಣಗಳ ಬಗ್ಗೆ ತಿಳಿದರೆ ನಿತ್ಯದ ಆಹಾರದಲ್ಲಿ ಹಾಗಲಕಾಯಿಯನ್ನು ಸೇರಿಸುವುದು ಖಂಡಿತ.
ಬೆಂಗಳೂರು : ನಾವು ತೂಕ ಇಳಿಸಿಕೊಳ್ಳಲು ಬಯಸಿದಾಗ, ಮೊದಲು ಕಿವಿಗೆ ಬೀಳುವ ಸಲಹೆ ಎಂದರೆ ಸಿಹಿತಿಂಡಿಗಳಿಂದ ದೂರ ಇರಬೇಕು. ಆದರೆ ಕಹಿ ತಿನ್ನುವುದರಿಂದ ಹೊಟ್ಟೆ ಮತ್ತು ಸೊಂಟದ ಕೊಬ್ಬು ಕರಗುತ್ತದೆ ಎನ್ನುವ ಅಂಶ ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ. ಹೌದು, ನಾವಿಲ್ಲಿ ಹಾಗಲ ಕಾಯಿ ಬಗ್ಗೆ ಮಾತನಾಡುತ್ತಿದ್ದೇವೆ. ಹಾಗಲಕಾಯಿ ಎಂದರೆ ಸಾಮಾನ್ಯವಾಗಿ ಮುಗು ಮುರಿಯುವವರೇ ಹೆಚ್ಚು. ಅದರ ರುಚಿಯ ಕಾರಣದಿಂದ ಈ ತರಕಾರಿಯನ್ನು ಇಷ್ಟಪಡುವವರ ಸಂಖ್ಯೆ ಕಡಿಮೆ. ಆದರೆ ಆರೋಗ್ಯ ದೃಷ್ಟಿಯಿಂದ ಇದು ತುಂಬಾ ಪ್ರಯೋಜನಕಾರಿ. ಇದರ ಔಷಧೀಯ ಗುಣಗಳ ಬಗ್ಗೆ ತಿಳಿದರೆ ನಿತ್ಯದ ಆಹಾರದಲ್ಲಿ ಹಾಗಲಕಾಯಿಯನ್ನು ಸೇರಿಸುವುದು ಖಂಡಿತ.
ತೂಕ ಇಳಿಸಿಕೊಳ್ಳಲು ಹಾಗಲಕಾಯಿ :
ಹಾಗಲಕಾಯಿಯಲ್ಲಿರುವ ಕ್ಯಾಲೊರಿ ತುಂಬಾ ಕಡಿಮೆ. ಅಲ್ಲದೆ, ಇದರಲ್ಲಿ ವಿಟಮಿನ್ ಸಿ, ಫೈಬರ್, ಸತು ಮತ್ತು ಫೋಲೇಟ್ ಸಮೃದ್ಧವಾಗಿದೆ. ಹಾಗಲಕಾಯಿಯಲ್ಲಿರುವ ಈ ಎಲ್ಲಾ ಅಂಶಗಳು ತೂಕ ಇಳಿಸಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡಾ ಹೆಚ್ಚಿಸುತ್ತದೆ.
ಇದನ್ನೂ ಓದಿ : ಪ್ಲಾಸ್ಟಿಕ್ ಬಾಟಲ್ ನೀರು ಸ್ಲೋಪಾಯ್ಸನ್ ಇದ್ದಂತೆ..ಬಳಸುವ ಮುನ್ನ ಎಚ್ಚರ ವಹಿಸಿ..!
ಹಾಗಲಕಾಯಿ ಸೇವನೆ ಮೂಲಕ ತೂಕವನ್ನು ಕಳೆದುಕೊಳ್ಳುವುದು ಹೇಗೆ ? :
1. ನಾರಿನಂಶವಿರುವ ಆಹಾರ :
ಹಾಗಲಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿರುವುದರಿಂದ ಜೀರ್ಣಕ್ರಿಯೆ ಆರೋಗ್ಯಕರವಾಗಿರುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗುತ್ತಿದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವುದಿಲ್ಲ. ತೂಕ ನಷ್ಟಕ್ಕೆ ಸಹಾಯ ಮಾಡುವ ಪ್ರಮುಖ ಅಂಶಗಳಲ್ಲಿ ಸರಿಯಾದ ಜೀರ್ಣಕ್ರಿಯೆ ಪ್ರಕ್ರಿಯೆ ಕೂಡಾ ಒಂದು.
2. ಕಡಿಮೆ ಕ್ಯಾಲೋರಿ ಆಹಾರ :
ತೂಕವನ್ನು ಕಳೆದುಕೊಳ್ಳುವುದು ನಾವು ದಿನವಿಡೀ ಎಷ್ಟು ಕ್ಯಾಲೊರಿಗಳನ್ನು ಸೇವಿಸುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಹಾಗಲಕಾಯಿ ಕಡಿಮೆ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ. ಇದು ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Weight Loss Tips: ವ್ಯಾಯಾಮ ಮಾಡಲು ಉತ್ತಮ ಸಮಯ ಯಾವುದು ಗೊತ್ತೇ ?
3. ವಿಟಮಿನ್ ಸಿ ಯ ಸಮೃದ್ಧ ಮೂಲ :
ಹಾಗಲಕಾಯಿಯನ್ನು ವಿಟಮಿನ್ ಸಿ ಯ ಸಮೃದ್ಧ ಮೂಲವೆಂದು ಕರೆಯಲಾಗುತ್ತದೆ. ಅದರ ಸಹಾಯದಿಂದ ದೇಹದಿಂದ ವಿಷವನ್ನು ಹೊರಗೆ ಹಾಕುವುದು ಸುಲಭ. ಇದರಿಂದಾಗಿ ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಕೂಡಾ ಹೆಚ್ಚುತ್ತದೆ.
ಹಾಗಲಕಾಯಿ ತಿನ್ನುವುದು ಹೇಗೆ? :
ಹಾಗಲಕಾಯಿ ತಿನ್ನಲು ಉತ್ತಮ ವಿಧಾನವೆಂದರೆ ಅದರ ಜ್ಯೂಸ್ ತೆಗೆದು ಕುಡಿಯುವುದು. ಇದರ ಕಹಿಯನ್ನು ಕಡಿಮೆ ಮಾಡಲು ಸ್ವಲ್ಪ ನಿಂಬೆ ರಸವನ್ನು ಸೇರಿಸಬಹದು.ನಿತ್ಯ ಈ ಜ್ಯೂಸ್ ಅನ್ನು ಸೇವಿಸುತ್ತಾ ಬಂದರೆ ಶೀಘ್ರದಲ್ಲೇ ತೂಕವನ್ನು ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : ತೂಕ ಇಳಿಕೆಗೆ ಈ ಅದ್ಭುತ ಪರಿಹಾರ ಟ್ರೈ ಮಾಡಿ ನೋಡಿ!
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು, ನೀವು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. Zee Media ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)