ನವದೆಹಲಿ: ನೀವು ಕರೋನಾ ಪೀಡಿತರೇ? ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಕರೋನಾ ರೋಗಿ ಇದ್ದರೆ ಅವರ ಆಹಾರದ ಬಗ್ಗೆ ನಿಗಾ ವಹಿಸುವುದು ಅತ್ಯವಶ್ಯಕ. ನೀವು ಯಾವುದೇ ರೋಗದಿಂದ ತ್ವರಿತವಾಗಿ ಗುಣಮುಖರಾಗಲು ಆಹಾರ ಮತ್ತು ಪೋಷಣೆ ಪ್ರಮುಖ ಪಾತ್ರವಹಿಸುತ್ತವೆ. ಯಾವುದೇ ವ್ಯಕ್ತಿಯು ಕರೋನಾವೈರಸ್ ಸೋಂಕಿಗೆ ಒಳಗಾದಾಗ ಅವರಲ್ಲಿ ದುರ್ಬಲತೆ ಸಹಜವಾಗಿಯೇ ಕಂಡುಬರುತ್ತದೆ. ಕರೋನಾ ನೆಗೆಟಿವ್ ಬಂದ ಬಳಿಕವೂ ಅಂದರೆ ವ್ಯಕ್ತಿಯು ಕರೋನಾದಿಂದ ಚೇತರಿಸಿಕೊಂಡ ಬಳಿಕವೂ ಅವರಿಗೆ ಈ ಸಮಸ್ಯೆ ಹಲವಾರು ದಿನಗಳು ಅಥವಾ ವಾರಗಳವರೆಗೆ ಕಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮನ್ನು ಮತ್ತೆ ಓರ್ವ ಆರೋಗ್ಯವಂತ ವ್ಯಕ್ತಿಯನ್ನಾಗಿ ಮಾಡುವುದರಲ್ಲಿ ನಿಮ್ಮ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ.  ಈ ಸಂದರ್ಭದಲ್ಲಿ ಕರೋನಾ ರೋಗಿಯು ಏನನ್ನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದನ್ನು ತಿಳಿಯುವುದು ಬಹಳ ಮುಖ್ಯ.


COMMERCIAL BREAK
SCROLL TO CONTINUE READING

* ಕರೋನಾ ರೋಗಿಗಳಿಗೆ ಉಳಿದ ಆಹಾರವನ್ನು ನೀಡಬೇಡಿ :


Covid Patient) ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸಬೇಕು, ಇದರಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್, ಕೊಬ್ಬು ಮತ್ತು ಹೆಚ್ಚಿನ ಮೌಲ್ಯದ ಪ್ರೋಟೀನ್ ಇರುತ್ತದೆ. ಅಲ್ಲದೆ, ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್‌ಗಳು ವಿಶೇಷವಾಗಿ ವಿಟಮಿನ್ ಸಿ ಮತ್ತು ವಿಟಮಿನ್ ಡಿ ಅನ್ನು ಹೆಚ್ಚು ಸೇವಿಸಬೇಕು. ಈ ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಆಹಾರದಿಂದ ಪೂರೈಸದಿದ್ದರೆ, ವೈದ್ಯರೊಂದಿಗೆ ಮಾತನಾಡುವ ಮೂಲಕ ಮೌಖಿಕ ಪೂರಕಗಳನ್ನು ಸಹ ಸೇವಿಸಬಹುದು. ಇದಲ್ಲದೆ, ಮತ್ತೊಂದು ಪ್ರಮುಖ ವಿಷಯವೆಂದರೆ ಕರೋನಾ ರೋಗಿಯ ಉಳಿದ ಆಹಾರವನ್ನು ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಿ ಅದನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ. ಕರೋನಾ ರೋಗಿಗಳಿಗೆ ಉಳಿದ ಅಥವಾ ಹಳೆಯ ಆಹಾರವನ್ನು ನೀಡಬೇಡಿ. ಬದಲಿಗೆ ಬಿಸಿ, ಬಿಸಿಯಾಗಿ ತಯಾರಿಸಿದ ಆಹಾರವನ್ನು ನೀಡಿ.


* ನಿಮ್ಮ ಡಯಟ್ ನಲ್ಲಿ ಈ ಆಹಾರವನ್ನು ತಪ್ಪದೇ ಸೇರಿಸಿ:


Corona- ನಿಮ್ಮ ಒಳ್ಳೆಯ ಅಭ್ಯಾಸ ಕರೋನದ ಅಪಾಯವನ್ನು 31% ಕಡಿಮೆ ಮಾಡುತ್ತೆ


* ಆಹಾರದಲ್ಲಿ ಸ್ವಲ್ಪ ಮಾವಿನ ಪುಡಿಯನ್ನು ಸೇರಿಸಿ:


Covid -19) ರೋಗಿಗಳಲ್ಲಿ, ವಾಸನೆ ಮತ್ತು ರುಚಿಯ ಸಾಮರ್ಥ್ಯವು ಕಳೆದುಹೋಗುತ್ತದೆ ಅಥವಾ ಆಹಾರವನ್ನು ನುಂಗಲು ಅವರಿಗೆ ಕಷ್ಟವಾಗುತ್ತದೆ. ಆದ್ದರಿಂದ ನೀವು ರೋಗಿಗೆ ಮೃದುವಾದ ವಸ್ತುಗಳನ್ನು ನೀಡುವುದು ಬಹಳ ಮುಖ್ಯ. ಕೆಲವರಿಗೆ ಈ ಸಂದರ್ಭದಲ್ಲಿ ಆಹಾರ ರುಚಿ ಎನಿಸುವುದಿಲ್ಲ. ಅಂತಹವರಿಗೆ ಆಹಾರದಲ್ಲಿ ಸ್ವಲ್ಪ ಮಾವಿನ ಪುಡಿಯನ್ನು ಸೇರಿಸಿ, ಇದು ಆಹಾರದ ರುಚಿಯನ್ನು ಸಹ ಉತ್ತಮಗೊಳಿಸುತ್ತದೆ. ಪ್ರತಿದಿನ ತಪ್ಪದೇ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. 70 ರಷ್ಟು ಕೋಕೋ ಹೊಂದಿರುವ ಡಾರ್ಕ್ ಚಾಕೊಲೇಟ್ ಅನ್ನು ಸಹ ಸ್ವಲ್ಪ ತಿನ್ನಬಹುದು. ಇದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಆತಂಕವನ್ನು ನಿವಾರಿಸುತ್ತದೆ.


* ಬೆಳಗಿನ ಉಪಾಹಾರದಿಂದ ರಾತ್ರಿ ಭೋಜನದವರೆಗೆ - ಏನು ತಿನ್ನಬೇಕು?


Corona ಯುಗದಲ್ಲಿ ನಿಮ್ಮ ಬಳಿಯೂ ಇರಲಿ ಈ Health Gadgets


* ಸೋಂಕಿನಿಂದ ಚೇತರಿಸಿಕೊಂಡ ನಂತರ ಆಯಾಸವನ್ನು ಹೇಗೆ ನಿವಾರಿಸುವುದು?


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.