ನವದೆಹಲಿ: ಬದಲಾಗುತ್ತಿರುವ ಋತುವಿನಲ್ಲಿ ಕೆಮ್ಮು ಸಾಮಾನ್ಯ ಸಮಸ್ಯೆ(Cough Problem)ಯಾಗಿದೆ. ಆದರೆ ಇದು ಪದೇ ಪದೇ ಮತ್ತು ನಿರಂತರವಾಗಿ ಕಾಡುತ್ತಿದ್ದರೆ ದೊಡ್ಡ ಅಪಾಯದ ಸಂಕೇತವೆಂದೇ ತಿಳಿಯಬೇಕು. ಕೆಮ್ಮುವಾಗ ಕೆಲವೊಬ್ಬರು ಅನೇಕ ಬಾರಿ ಉಸಿರುಗಟ್ಟುವಿಕೆ ಸಮಸ್ಯೆಯಿಂದ ಬಳಲುತ್ತಾರೆ. ಇದರ ಬಗ್ಗೆ ಸಮಯಕ್ಕೆ ಸರಿಯಾಗಿ ಎಚ್ಚರಿಕೆವಹಿಸುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಮುಂದೆ ಇದರಿಂದ ದೊಡ್ಡ ತೊಂದರೆ ಉಂಟಾಗಬಹುದು.


COMMERCIAL BREAK
SCROLL TO CONTINUE READING

ಕೆಮ್ಮು ಉಸಿರಾಟದ ಸಮಸ್ಯೆ


ಬೆಳಗ್ಗೆ ಎದ್ದ ತಕ್ಷಣವೇ ಕೆಮ್ಮು ಬಂದರೆ ಅದು ಕ್ಯಾನ್ಸರ್(Cough Cancer Problem) ಲಕ್ಷಣವಾಗಿರಬಹುದು. ನಿರಂತರವಾಗಿ ಕೆಮ್ಮು ಬರುತ್ತಿದ್ದರೆ ಇತರ ಕಾಯಿಲೆಗಳ ಲಕ್ಷಣವಾಗಿರಬಹುದು. ಆದರೆ ಇದು ಕ್ಯಾನ್ಸರ್ ರೋಗದ ಲಕ್ಷಣವೇ ಎಂದು ನೀವು ಪರೀಕ್ಷಿಸಿಕೊಳ್ಳಬೇಕು.


Kidney Food: ಆರೋಗ್ಯಕರ ಕಿಡ್ನಿಗಾಗಿ ಈ 5 ಆಹಾರಗಳನ್ನು ಮಿಸ್ ಮಾಡದೇ ನಿಮ್ಮ ಡಯಟ್ನಲ್ಲಿ ಸೇರಿಸಿ


ಇಂದೇ ಧೂಮಪಾನ ಅಭ್ಯಾಸ ಬಿಟ್ಟುಬಿಡಿ


ಕ್ಯಾನ್ಸರ್‌ಗೆ ಹಲವು ಕಾರಣಗಳಿರಬಹುದು, ಆದರೆ ಧೂಮಪಾನ(Smoking)ವು ಈ ಕಾಯಿಲೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಆಗಾಗ್ಗೆ ಜನರು ಒತ್ತಡ ನಿಭಾಯಿಸಲು ಧೂಮಪಾನದ ಮೊರೆ ಹೋಗುತ್ತಾರೆ. ಇದು ಕೆಮ್ಮು ಮತ್ತು ಕ್ಯಾನ್ಸರ್‍ಗೆ ಕಾರಣವಾಗುತ್ತದೆ.


ಕ್ಯಾನ್ಸರ್ ರೋಗದ ಇತರ ಕಾರಣಗಳು


Virus alert! ಜಗತ್ತನ್ನು ಆತಂಕಕ್ಕೀಡು ಮಾಡಿರುವ ಲಸ್ಸಾ ಜ್ವರದ ಬಗ್ಗೆ ನಿಮಗೆಷ್ಟು ಗೊತ್ತು?


ಧೂಮಪಾನದಿಂದ ಉಂಟಾಗುವ ಕ್ಯಾನ್ಸರ್ ಕೆಮ್ಮು


ಧೂಮಪಾನ(Smoking) ಮಾಡುವ ಜನರು ಸಾಮಾನ್ಯವಾಗಿ ಕೆಮ್ಮಿನಿಂದ ಬಳಲುತ್ತಿದ್ದಾರೆ. ಕೆಮ್ಮು ಒಂದರಿಂದ ಎರಡು ವಾರಗಳವರೆಗೆ ನಿರಂತರವಾಗಿ ಮುಂದುವರಿದರೆ ಮತ್ತು ಬೆಳಿಗ್ಗೆ ಎದ್ದಾಗ ಗಂಟಲು ನೋವು ಕಾಣಿಸಿಕೊಂಡರೆ ತಕ್ಷಣವೇ ವೈದ್ಯರಿಗೆ ತೋರಿಸಿ ಮತ್ತು ಅಗತ್ಯ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.