Weight Loss With Cucumber: ಮಹಿಳೆಯರಿರಲಿ ಅಥವಾ ಪುರುಷರಿರಲಿ ಪ್ರತಿಯೊಬ್ಬರಿಗೂ ಸಹ ಪ್ರಸ್ತುತ ಸ್ಥೂಲಕಾಯತೆ ಒಂದು ಬಹುದೊಡ್ಡ ಸಮಸ್ಯೆ ಆಗಿದೆ. ಎಷ್ಟೇ ಡಯಟ್ ಮಾಡಿದರೂ, ವ್ಯಾಯಾಮ ಮಾಡಿದರೂ ಕೂಡ ತೂಕ ಕಡಿಮೆಯೇ ಆಗುತ್ತಿಲ್ಲ ಎಂದು ದೂರುವವರು ಬಹಳ ಮಂದಿ ಇದ್ದಾರೆ. ಆದರೆ, ನೀವು ಸೌತೆಕಾಯಿಯಿಂದ ಸುಲಭವಾಗಿ ತೂಕ ಇಳಿಸಬಹುದು ಎಂದು ನಿಮಗೆ ತಿಳಿದಿದೆಯೇ? ಸೌತೆಕಾಯಿಯಲ್ಲಿ ಯವೆಲ್ಲಾ ಪೋಷಕಾಂಶಗಳು ಅಡಕವಾಗಿವೆ? ಸೌತೆಕಾಯಿ ಬಳಕೆಯಿಂದ ತೂಕ ಇಳಿಕೆ ಹೇಗೆ ಸಾಧ್ಯ ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ಪೋಷಕಾಂಶಗಳ ಆಗರ ಸೌತೆಕಾಯಿ: 
ಸೌತೆಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ,  ಪೊಟ್ಯಾಸಿಯಮ್, ಮೆಗ್ನಿಸಿಯಮ್, ಸತು, ಪ್ಲೇವನಾಯ್ಡಳು, ಉತ್ಕರ್ಷಣ ನಿರೋಧಕಗಳು ಮತ್ತು ರಂಜಕದಂತಹ ಹಲವು ಪೋಷಕಾಂಶಗಳು ಅಡಕವಾಗಿವೆ. ಇದು ಕಡಿಮೆ ಕ್ಯಾಲೋರಿ ಆಹಾರವಾಗಿದ್ದು, ಇದರ ಬಳಕೆಯಿಂದ ಸುಲಭವಾಗಿ ಬೇಗ ತೂಕ ಕಳೆದುಕೊಳ್ಳಬಹುದು (Weight Loss With Cucumber) ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- ಕಾಫಿಗೆ ಈ ಹಣ್ಣಿನ ರಸ ಬೆರೆಸಿ ಕುಡಿದರೆ ಕೇವಲ 5 ದಿನದಲ್ಲಿ ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಸುಲಭವಾಗಿ ಕರಗಿಹೋಗುತ್ತೆ!


ತೂಕ ಇಳಿಕೆಗಾಗಿ ಸೌತೆಕಾಯಿಯನ್ನು ಹೇಗೆ ಬಳಸಬೇಕು? 
ನೀವು ತೂಕ ಕಡಿಮೆ ಮಾಡಿಕೊಳ್ಳಲು (Weight Loss) ಬಯಸಿದರೆ ಇದಕ್ಕಾಗಿ ಪ್ರತಿನಿತ್ಯ ಸೌತೆಕಾಯಿ ಜ್ಯೂಸ್ ಸೇವನೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಪ್ರತಿ ದಿನ ನಿಯಮಿತವಾಗಿ ಸೌತೆಕಾಯಿ ಜ್ಯೂಸ್ ತಯಾರಿಸಿ ಸೇವಿಸುವುದರಿಂದ ಆರೋಗ್ಯಕರವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗಾಗಿಯೇ, ತೂಕ ಇಳಿಕೆಗೆ ಇದನ್ನು ಅತ್ಯುತ್ತಮ ಮನೆಮದ್ದು ಎಂದು ಭಾವಿಸಲಾಗಿದೆ. 


ಇದನ್ನೂ ಓದಿ- ನಿಯಮಿತವಾಗಿ ಈ 5 ಜ್ಯೂಸ್​ಗಳನ್ನು ಸೇವಿಸುವುದರಿಂದ ಆರಾಮವಾಗಿ ಕರಗಿಸಬಹುದು ಬೆಲ್ಲಿ ಫ್ಯಾಟ್


ಸೌತೆಕಾಯಿ ಪ್ರಯೋಜನಗಳು: 
>> ನಿಯಮಿತವಾಗಿ ಸೌತೆಕಾಯಿಯನ್ನು (Cucumber) ತಿನ್ನುವುದರಿಂದ, ಇದರ ಜ್ಯೂಸ್ ತಯಾರಿಸಿ ಸೇವಿಸುವುದರಿಂದ ಇದು ದೇಹವನ್ನು ತಂಪಾಗಿರಿಸುತ್ತದೆ. 
>> ಸೌತೆಕಾಯಿ ಬಳಕೆಯೂ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.
>> ಸೌತೆಕಾಯಿಯಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಇದು ದೇಹದಲ್ಲಿ ನೀರಿನ ಕೊರತೆಯನ್ನು ನಿವಾರಿಸುತ್ತದೆ. 
>>  ಸೌತೆಕಾಯಿ ನಿಯಮಿತ ಬಳಕೆಯು ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.