ಬೆಂಗಳೂರು: ಕರಿಬೇವಿನ ಎಲೆಗಳು ಯಾವುದೇ ಆಯುರ್ವೇದ ಔಷಧಕ್ಕಿಂತ ಕಡಿಮೆಯಲ್ಲ. ವಿಟಮಿನ್ ಸಿ, ಮೆಗ್ನೀಸಿಯಮ್, ಕಬ್ಬಿಣ, ತಾಮ್ರ, ಕ್ಯಾಲ್ಸಿಯಂ, ರಂಜಕ, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಪ್ರಮುಖ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ನಾವು ಮಾಡುವ ಬಹುತೇಕ ಖಾದ್ಯಗಳಲ್ಲಿ ಈ ಎಲೆಯನ್ನು ಬಳಸುತ್ತೇವೆ. ಇವು ರುಚಿಯ ದೃಷ್ಟಿಯಿಂದ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಪ್ರಯೋಜನಕಾರಿ. ಅನೇಕ ಆರೋಗ್ಯ ತಜ್ಞರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4 ರಿಂದ 5 ಕರಿಬೇವಿನ ಎಲೆಗಳನ್ನು ಅಗಿದು ತಿನ್ನಲು ಸಲಹೆ ನೀಡುತ್ತಾರೆ. ಈ ರೀತಿ ಮಾಡುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು.  


COMMERCIAL BREAK
SCROLL TO CONTINUE READING

ಕರಿಬೇವಿನ ಎಲೆಗಳ ಪ್ರಯೋಜನಗಳು : 
1. ಮಧುಮೇಹವನ್ನು ನಿಯಂತ್ರಿಸಲಾಗುವುದು :

ಮಧುಮೇಹ ರೋಗಿಗಳು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ಅಗಿಯಬೇಕು. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಬೇಕಿದ್ದರೆ ಕರಿಬೇವಿನ ಸೊಪ್ಪನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಪುಡಿ ಮಾಡಿ ಶೇಖರಿಸಿಟ್ಟು ಕೂಡಾ ಬಳಸಬಹುದು. 


ಇದನ್ನೂ ಓದಿ :  Taming Blood Sugar: ಡೈಬಿಟೀಸ್ ರೋಗಿಗಳಿಗೆ ಟಾನಿಕ್ಗೆ ಸಮಾನ ಬ್ಲಾಕ್ ಕಾಫಿ, ನಿತ್ಯ 1 ಕಪ್ ಸೇವನೆಯಿಂದ 5 ಕಾಯಿಲೆಗಳ ನಿವಾರಣೆ!


2. ತೂಕ ಕಡಿಮೆ ಮಾಡಲು ಸಹಕಾರಿ : 
ಹೆಚ್ಚುತ್ತಿರುವ ತೂಕದಿಂದ ತೊಂದರೆಗೊಳಗಾದವರಿಗೆ, ಕರಿಬೇವಿನ ಎಲೆಗಳು ಲಾಭದಾಯಕ. ಬೆಳಿಗ್ಗೆ ಎದ್ದ ನಂತರ ಈ ಎಲೆಗಳನ್ನು ಅಗಿದು ತಿಂದರೆ  ದೇಹ ಡಿಟಾಕ್ಸ್ ಆಗುವುದಲ್ಲದೆ, ಚಯಾಪಚಯವನ್ನು ಕೂಡಾ ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ತೂಕವನ್ನು ಕಳೆದುಕೊಳ್ಳಲು ಪ್ರಾರಂಭವಾಗುತ್ತದೆ.


3. ತ್ವಚೆಯ ಸಮಸ್ಯೆಗಳು ದೂರವಾಗುತ್ತವೆ:
ಕರಿಬೇವಿನ ಸೊಪ್ಪಿನ ಸೇವನೆಯಿಂದ ತ್ವಚೆಯ ಸಮಸ್ಯೆಯೂ ನಿವಾರಣೆಯಾಗುತ್ತದೆ. ಚರ್ಮದ ಮೇಲೆ ಕಲೆ ಅಥವಾ ಮೊಡವೆಗಳು ಕಾಣಿಸಿಕೊಂಡರೆ, ಈ ಎಲೆಗಳನ್ನು ಪುಡಿಮಾಡಿ ಬಾಧಿತ ಜಾಗಕ್ಕೆ ಹಚ್ಚಬೇಕು. ಇದರ ಪರಿಣಾಮ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ. 


ಇದನ್ನೂ ಓದಿ : ಈ ಬೀಜದ ಪೇಸ್ಟನ್ನು ಹಚ್ಚಿದರೆ ಸಾಕು ಬಿಳಿಕೂದಲು ಪರ್ಮನೆಂಟ್ ಆಗಿ ಕಪ್ಪಾಗುವುದಲ್ಲದೆ, ಮೊಣಕಾಲುದ್ದ ಬೆಳೆಯುತ್ತೆ!


4. ಹೊಟ್ಟೆನೋವಿನಿಂದ ಉಪಶಮನ :
ನೀವು ಹೊಟ್ಟೆನೋವಿನಿಂದ ತೊಂದರೆಗೊಳಗಾದಾಗ, ಬಾಣಲೆಯಲ್ಲಿ ನೀರನ್ನು ಕುದಿಸಿ ಮತ್ತು ಅದಕ್ಕೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಸೇರಿಸಿ. ನೀರು ಅರ್ಧಕ್ಕೆ ಇಳಿದ ಮೇಲೆ ಅದನ್ನು ಫಿಲ್ಟರ್ ಮಾಡಿ. ಉಗುರು ಬೆಚ್ಚಗಿರುವಾಗ ಕುಡಿಯಿರಿ. ಇದು ಹೊಟ್ಟೆಯ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.


5. ಕೂದಲಿಗೆ ಪ್ರಯೋಜನಕಾರಿ :
ಕೂದಲು ಉದುರುವಿಕೆ ಅಥವಾ ಇತರ ಕೂದಲಿನ ಸಮಸ್ಯೆಗಳನ್ನು ಎದುರಿಸುತ್ತಿರುವವರು ಖಾಲಿ ಹೊಟ್ಟೆಗೆ ಕರಿಬೇವಿನ ಎಲೆಗಳನ್ನು ತಿನ್ನಬೇಕು. ಇದು ಕೂದಲನ್ನು ಬಲಪಡಿಸಿ, ಕೂದಲು ಉದುರುವುದನ್ನು ತಡೆಯುತ್ತದೆ. ಮಾತ್ರವಲ್ಲ ಕೂದಲಿಗೆ ಬಣ್ಣ ಬರಲು ಬೇಕಾಗಿರುವ ಮೆಲನಿನ್ ಅನ್ನು ಹೆಚ್ಚು ಮಾಡಲು ಇದು ಸಹಾಯ ಮಾಡುತ್ತದೆ. ಇದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಇದಲ್ಲದೆ, ಈ ಎಲೆಯನ್ನು ಪುಡಿ ಮಾಡಿ ಪೇಸ್ಟ್ ಮಾಡಿ  ಕೂದಲಿಗೆ ಹಚ್ಚಬಹುದು. ಇದು ಕೂಡಾ ಪ್ರಯೋಜನಕಾರಿ. 


ಇದನ್ನೂ ಓದಿ :  ದೇಹ ಪೂರ್ತಿ ಸಣ್ಣಗಾಗಿದ್ದು ಹೊಟ್ಟೆ ಮಾತ್ರ ದಪ್ಪಗಿದೆಯೇ ? ಇಂದೇ ಈ ಪಾನೀಯ ಟ್ರೈ ಮಾಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.