Ayudha Puje In Mysuru Palace: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಆಯುಧಪೂಜೆ ಸಂಭ್ರಮ
ಮೈಸೂರು (Mysore) ಮಹಾರಾಜರ ಕಾಲದಲ್ಲೂ ನವಮಿಯಂದು ಆಯುಧ ಪೂಜೆ ಮಾಡಲಾಗುತ್ತಿತ್ತು. ಇಂದಿಗೂ ಕೂಡ ನವರಾತ್ರಿಯ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಮೈಸೂರು ಅರಮನೆಯಲ್ಲಿ (Mysuru Palace) ರಾಜ ವಂಶಸ್ಥರು ನವರಾತ್ರಿ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ.
ಮೈಸೂರು: ನವರಾತ್ರಿಯ ಒಂಬತ್ತನೇ ದಿನ ಮಹಾನವಮಿ ಅಥವಾ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಇಂದು (ಅಕ್ಟೋಬರ್ 14) ಆಶ್ವಯುಜ ಮಾಸದ ಶುಕ್ಲ ಪಕ್ಷದ ನವಮಿ/ಆಯುಧ ಪೂಜಾ ನಡೆಯಲಿದೆ. ಹೆಸರೇ ಸೂಚಿಸುವಂತೆ ಇದು ಆಯುಧಗಳಿಗೆ ಪೂಜೆ ಮಾಡುವ ದಿನ. ಇಂದು ಮನೆ, ಕಾರ್ಖಾನೆ, ಕಛೇರಿ ಎಲ್ಲೆಡೆ ಆಯುಧಗಳನ್ನು ಸ್ವಚ್ಛಗೊಳಿಸಿ ಪೂಜಿಸಲಾಗುತ್ತದೆ. ಹಿಂದೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ ವಂಶಸ್ಥರು ಆಯುಧ ಪೂಜೆ ದಿನದಂದು ತಮ್ಮ ಪಟ್ಟದ ಕತ್ತಿಯನ್ನೂ ಕೂಡ ಈ ದಿನ ಪೂಜಿಸುತ್ತಿದ್ದರು. ಇಂದಿಗೂ ಕೂಡ ಪ್ರತಿ ವರ್ಷ ಮೈಸೂರು ರಾಜ ವಂಶಸ್ಥರು ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ನವರಾತ್ರಿಯಲ್ಲಿ 'ಆಯುಧ ಪೂಜೆ'ಗೆ ಮಹತ್ವದ ಸ್ಥಾನ:
ಪುರಾಣದ ಪ್ರಕಾರ, ವನವಾಸದಲ್ಲಿದ್ದ ಪಾಂಡವರು ತಮ್ಮ ಅಜ್ಞಾತ ವಾಸವನ್ನು ಮುಗಿಸಿ ಮಹಾ ನವಮಿಯ (Maha Navami) ದಿನದಂದು ತಮ್ಮ ಆಯುಧಗಳಿಗೆ ಪೂಜೆ ಮಾಡಿರುವುದಾಗಿ ಹೇಳಲಾಗುತ್ತದೆ. ಅದರಲ್ಲೂ ಬೃಹನ್ನಳೆ ವೇಷದಲ್ಲಿದ್ದ ಅರ್ಜುನ ತನ್ನ ಆಯುಧ ಇಟ್ಟಿದ್ದ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಆಯುಧಗಳನ್ನು ಮರಳಿ ತಂದು ಪೂಜಿಸಿ, ನಂತರ ವಿರಾಟರಾಜನ ಶತ್ರುಗಳಾದ ಕೌರವರ ಮೇಲೆ ವಿಜಯ ಸಾಧಿಸಿದ್ದರು. ಇದರ ದಿನದ ನೆನಪಿಗಾಗಿ ನವರಾತ್ರಿಯಲ್ಲಿ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸುವ ಪದ್ದತಿಯೂ ಇದೆ.
ಇದನ್ನೂ ಓದಿ- Navratri 2021: ನೀವೂ ಕೂಡ ಜೀವನದಲ್ಲಿ ಪ್ರಗತಿ, ಆರ್ಥಿಕ ಲಾಭ ಬಯಸುತ್ತೀರಾ, ನವರಾತ್ರಿ ಮುಗಿಯುವ ಮೊದಲು ಈ ಕೆಲಸ ಮಾಡಿ
ಅದೇ ರೀತಿ ಮೈಸೂರು (Mysore) ಮಹಾರಾಜರ ಕಾಲದಲ್ಲೂ ನವಮಿಯಂದು ಆಯುಧ ಪೂಜೆ ಮಾಡಲಾಗುತ್ತಿತ್ತು. ಇಂದಿಗೂ ಕೂಡ ನವರಾತ್ರಿಯ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಮೈಸೂರು ಅರಮನೆಯಲ್ಲಿ (Mysuru Palace) ರಾಜ ವಂಶಸ್ಥರು ನವರಾತ್ರಿ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ಮೈಸೂರಿನ 'ಅಂಬಾ ವಿಲಾಸ' ಅರಮನೆಯಲ್ಲಿ ಆಯುಧ ಪೂಜಾ ದಿನದಂದು ಬೆಳಿಗ್ಗಿನಿಂದ ಚಂಡಿಹೋಮ ನಡೆಸಲಾಗುತ್ತದೆ. ಮೈಸೂರು ಅರಮನೆಯಲ್ಲಿ ಇಂದು ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ಇಂದು ಬೆಳಿಗ್ಗೆ 5.30ರಿಂದಲೇ ಪೂಜಾ ವಿಧಿ ವಿಧಾನ ಆರಂಭವಾಗಿದೆ.
ಇದನ್ನೂ ಓದಿ- Dussehra 2021: ದಸರಾ ದಿನದಂದು ಈ ಸುಲಭವಾದ ಕೆಲಸವನ್ನು ಮಾಡಿ, ವರ್ಷವಿಡೀ ಹಣದ ಕೊರತೆ ಇರುವುದಿಲ್ಲ
ಸಾಂಪ್ರದಾಯಿಕವಾಗಿ ಆಯುಧ ಪೂಜೆ (Ayudha Puje) ಹಿನ್ನಲೆಯಲ್ಲಿ ಮೊದಲಿಗೆ ಜಯಮಾರ್ತಾಂಡ ದ್ವಾರದ ಮೂಲಕ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಮತ್ತು ಪಂಚಲೋಹದ ಪಲ್ಲಕ್ಕಿಯಲ್ಲಿ 'ಖಾಸಾ ಖತ್ತಿ' ಸೇರಿದಂತೆ ರಾಜರ ಯುದ್ದೋಪಕರಣಗಳು ಆಯುಧಗಳನ್ನು ಅರಮನೆಯ ಕೋಡಿ ಸೋಮೇಶ್ವರ ದೇವಾಲಯಕ್ಕೆ ರವಾನೆ ಮಾಡಲಾಗುತ್ತದೆ. ರಾಜರ ಎಲ್ಲಾ ಆಯುಧಗಳಿಗೆ ಪೂಜೆ (Ayudhapooja) ಸಲ್ಲಿಸಿದ ಬಳಿಕ ಕೋಡಿ ಸೋಮೇಶ್ವರ ದೇವಾಲಯದಿಂದ ಆಯುಧಗಳನ್ನು ಮರಳಿ ಅರಮನೆಗೆ ತರಲಾಗುತ್ತದೆ. ಬಳಿಕ ಈ ವರ್ಷ (2021) ಬೆಳಿಗ್ಗೆ 11:02 ರಿಂದ 11:22ರ ಶುಭ ಮುಹೂರ್ತದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧಗಳಿಗೆ ಪೂಜೆ ನೆರವೇರಿಸಲಿದ್ದಾರೆ ಮತ್ತು ರಾಜ ಪುರೋಹಿತರಿಂದ ಫಿರಂಗಿಗಳಿಗೆ ಆಯುಧಪೂಜೆ ಸಲ್ಲಿಸಲಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ