ನವದೆಹಲಿ:  Death Indications - ಪ್ರತಿಯೊಬ್ಬರೂ ಸಾವಿಗೆ ಹೆದರುತ್ತಾರೆ ಆದರೆ ಅದರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಬಯಸುತ್ತಾರೆ. ಸಾವಿನ ಸಮಯದಲ್ಲಿ ಏನನ್ನಿಸುತ್ತದೆ ಎಂಬುದರ ಕುರಿತು ಅನೇಕ ಸಂಶೋಧನೆಗಳು ಮತ್ತು ಅಧ್ಯಯನಗಳು ಸಹ ಮುಂದುವರಿಯುತ್ತವೆ. ಧರ್ಮ ಪುರಾಣಗಳಲ್ಲಿ ಸಾವಿನ ಬಗ್ಗೆ, ಅದರ ನಂತರ ಆತ್ಮದ ಪಯಣ ಮತ್ತು ಸಾವಿನ ಮುನ್ನ ಸೂಚನೆಗಳ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹೇಳಲಾಗಿದೆ. ಸಾವಿಗೆ ಮುನ್ನ ಸಿಗುವ ಸಂಕೇತಗಳ (Death Indications) ಕುರಿತು ಮಾತನಾಡುವುದಾದರೆ, ಕನಸುಗಳು (Dreams) ಇವುಗಳಲ್ಲಿ ಬಹಳ ಮುಖ್ಯ ಎನ್ನಲಾಗಿದೆ. ಸ್ವಪ್ನ ಶಾಸ್ತ್ರವು (Swapna Shastra) ಸಾವನ್ನು ಸೂಚಿಸುವ ಕನಸುಗಳ ಬಗ್ಗೆಯೂ ಹೇಳುತ್ತದೆ. ಸಾವು ಹತ್ತಿರದಲ್ಲಿದೆ ಎಂದು ಸೂಚಿಸುವ ಅಂತಹ ಕನಸುಗಳು ಮತ್ತು ಸಂಕೇತಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಸಾವಿಗೂ ಮುನ್ನ ಸಿಗುತ್ತವೆ ಈ ಸಂಕೇತಗಳು
- ಪ್ರಕಾಶಮಾನವಾದ ಹಗಲು ಆಕಾಶದಲ್ಲಿ ನಕ್ಷತ್ರಗಳು ಗೋಚರಿಸುವ ಅಥವಾ ಮಳೆಬಿಲ್ಲು ಕಾಣುವ ಕನಸು (Dreams Of Death) ಬಿದ್ದರೆ, ವ್ಯಕ್ತಿಯ ಸಾವು ಹತ್ತಿರವಾಗಿದೆ ಎನ್ನುವುದರ ಸಂಕೇತ.


- ಕನಸಿನಲ್ಲಿ (Death Dreams) ವ್ಯಕ್ತಿ ತನ್ನನ್ನು ತಾನು ಕಂದಕದಲ್ಲಿ ಅಥವಾ ಆಳವಾದ ಹಳ್ಳದಲ್ಲಿ ನೋಡಿದರೆ ಮತ್ತು ಎಲ್ಲಾ ಪ್ರಯತ್ನಗಳ ಬಳಿಕವೂ ಆತ ಕಂದಕದಿಂದ ಹೊರಬರುತ್ತಿಲ್ಲ ಎಂದಾದರೆ ಅದು ಸಾವಿನ ಸಂಕೇತವಾಗಿರಬಹುದು.


- ಒಂದು ವೇಳೆ ವ್ಯಕ್ತಿ ಕನಸಿನಲ್ಲಿ (Dreams Before Dying) ತನ್ನನ್ನು ತಾನು ಸೋರೆಕಾಯಿ, ನಿಂಬೆ, ಸೌತೆಕಾಯಿ ಮತ್ತು ಕಲ್ಲಂಗಡಿ ತಿನ್ನುವುದನ್ನು ಕಂಡೆ  ಅದು ಸಾವಿನ ಸಂಕೇತವಾಗಿದೆ. ಯಾವುದೇ ಸಾವು ಇಲ್ಲದಿದ್ದರೂ, ವ್ಯಕ್ತಿಯು ಸಾವಿನಂತಹ ಕಷ್ಟ ಅನುಭವಿಸಬೇಕಾಗಬಹುದು.


- ಯಾವುದೇ ಒಂದು ವ್ಯಕ್ತಿಗೆ ನೀರಿನಲ್ಲಿ ಹಾಗೂ ಎಣ್ಣೆಯಲ್ಲಿ ಆತನ ನೆರಳು ಕಾಣದೆ ಹೋದಲ್ಲಿ ಸಾವು ಹತ್ತಿರಕ್ಕೆ ಬಂದಿದೆ ಎಂಬುದರ ಸಂಕೇತವಾಗಿದೆ.


ಇದನ್ನೂ ಓದಿ-Dream Interpretation: ಆಹಾರಕ್ಕೆ ಸಂಬಂಧಿಸಿದ ಕನಸುಗಳು ಬಂದರೆ ಶುಭವಂತೆ, ನಿಮಗೂ ಬಿದ್ದಿದೆಯಾ ಇಂಥಹ ಸ್ವಪ್ನ


- ವ್ಯಕ್ತಿಯ ಕನಸಿನಲ್ಲಿ ದೇವಸ್ಥಾನದಿಂದ, ಹಾಸಿಗೆಯಿಂದ ಅಥವಾ ಕುದುರೆಯಿಂದ ಬೀಳುವುದನ್ನು ನೋಡಿದರೆ, ಅವನ ಸಾವು ಕೂಡ ಹತ್ತಿರದಲ್ಲಿದೆ ಎಂಬ ಸಂಕೇತ. ಅಂತಹ ಜನರು ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಬೇಕು ಏಕೆಂದರೆ ಜಾತಕದಲ್ಲಿ ಗ್ರಹಗಳ ಸ್ಥಿತಿ ಕೆಟ್ಟಾಗಲೂ ಇಂತಹ ಕನಸುಗಳು ಮತ್ತೆ ಮತ್ತೆ ಬರುತ್ತವೆ.


- ವ್ಯಕ್ತಿಗೆ ಆತನ ತಲೆಯ ಮೇಲೆ ರಣಹದ್ದು ಸುತ್ತಾಡುವ ಹಾಗೆ ಕನಸು ಬೀಳುವುದು ಕೂಡ ಅಶುಭಕರ.


ಇದನ್ನೂ ಓದಿ-Swapna Shastra: ಅದೃಷ್ಟವಂತರ ಕನಸಿನಲ್ಲಷ್ಟೇ ಕಾಣುತ್ತದೆಯಂತೆ ಈ ಜೀವಿಗಳು..! ನೀವು ಆ ಭಾಗ್ಯಶಾಲಿಗಳೇ?


- ಕನಸಿನಲ್ಲಿ ಶೃಂಗಾರ ಮಾಡಿಕೊಂಡ ಕೆಂಪು ಸೀರೆಯಲ್ಲಿನ ಮಹಿಳೆ ಕಂಡರೆ ಮತ್ತು ವ್ಯಕ್ತಿ ಆಕೆಯ ಜೊತೆಗೆ ಸಂಬಂಧ ಬೆಳೆಸುವ ಹಾಗೆ ಕಂಡರೆ ಅದು ಆ ವ್ಯಕ್ತಿಯ ಸಾವಿನ ಸಂಕೇತವಾಗಿರಬಹುದು.


(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-Dream Sign: ಈ ರೀತಿಯ ಕನಸುಗಳು ಮೃತ್ಯುವಿನ ಸಂಕೇತವಂತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.