Vastu Tips : ಬೆಳಗ್ಗೆ ಪೂಜೆ ಮತ್ತು ಆರತಿ ಮಾಡದ ಮನೆಯೇ ಇಲ್ಲ. ಹಿಂದೂ ಧರ್ಮದಲ್ಲಿ ಮನೆಯ ದೇವರ ದೇವರ ಕೋಣೆಯಲ್ಲಿ ದೀಪವನ್ನು ಹಚ್ಚುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಯಾವುದೇ ಪೂಜೆ ಅಥವಾ ಶುಭ ಕಾರ್ಯಗಳನ್ನು ಮಾಡುವ ಮೊದಲು ದೀಪವನ್ನು ಬೆಳಗಿಸುವ ಮೂಲಕ ದೇವರ ಆರ್ಶೀವಾದ ಪಡೆಯುತ್ತಾರೆ. ಆದ್ರೆ, ದೀಪ ಹಚ್ಚುವಾಗಿ ವಾಸ್ತುವನ್ನು ನಾವು ನೆನಪಿನಲ್ಲಿಟ್ಟುಕೊಳ್ಳುವುದು ಬಹು ಮುಖ್ಯ.


COMMERCIAL BREAK
SCROLL TO CONTINUE READING

ಮನೆಯಲ್ಲಿ ತುಪ್ಪದ ದೀಪ ಅಥವಾ ಎಣ್ಣೆಯ ದೀಪವನ್ನು ಹಚ್ಚುವುದು ಮಂಗಳಕರ ಎಂದು ನಿಮಗೆ ತಿಳಿದಿದೆಯೇ..? ಇಂದು ನಾವು ನಿಮಗೆ ಇದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತೇವೆ. ದೀಪವನ್ನು ಬೆಳಗಿಸದೆ, ಯಾವುದೇ ಪೂಜೆ ಯಶಸ್ವಿಯಾಗುವುದಿಲ್ಲ ಮತ್ತು ಅದರ ಫಲವೂ ಸಿಗುವುದಿಲ್ಲ. ಶಾಸ್ತ್ರಗಳಲ್ಲಿ ದೀಪವನ್ನು ಹಚ್ಚುವುದರಿಂದ ಅನೇಕ ಪ್ರಯೋಜನಗಳಿವೆ. ಪ್ರತಿ ದಿನ ಮನೆಯ ದೇವರ ಕೋಣೆಯಲ್ಲಿ ದೀಪವನ್ನು ಬೆಳಗಿಸುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ. ಅಲ್ಲದೆ ನಕಾರಾತ್ಮಕ ಶಕ್ತಿಯೂ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ: Nirjala Ekadashi 2023: ನಿರ್ಜಲ ಏಕಾದಶಿಯಂದು ಈ ಸಣ್ಣ ಕೆಲಸ ಮಾಡಿದ್ರೆ ಹಣ ಸುರಿಮಳೆ!


ದೀಪವನ್ನು ಹಚ್ಚುವಾಗ ದಿಕ್ಕನ್ನು ನೆನಪಿನಲ್ಲಿಡಿ : ತುಪ್ಪದ ದೀಪ ಅಥವಾ ಎಣ್ಣೆಯ ದೀಪವನ್ನು ಬೆಳಗಿಸುವಾಗ ಯಾವಾಗಲೂ ದಿಕ್ಕನ್ನು ನೆನಪಿನಲ್ಲಿಡಿ. ಆಕಸ್ಮಿಕವಾಗಿ ದೀಪವನ್ನು ತಪ್ಪು ದಿಕ್ಕಿನಲ್ಲಿ ಬೆಳಗಿಸಿದರೂ ಹಾನಿಯಾಗುತ್ತದೆ. ದೀಪವನ್ನು ತಪ್ಪು ದಿಕ್ಕಿನಲ್ಲಿ ಇಡುವುದರಿಂದ ಹಾನಿಯಾಗುವ ಸಂಭವವಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಣಕಾಸಿನ ನಷ್ಟದ ಜೊತೆಗೆ, ನೀವು ಮಾನಸಿಕ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು. ದೀಪವನ್ನು ಬೆಳಗಿಸುವಾಗ, ಅದನ್ನು ಪಶ್ಚಿಮ ದಿಕ್ಕಿನಲ್ಲಿ ಇರಿಸಿ.


ತುಪ್ಪದ ದೀಪವನ್ನು ಹಚ್ಚುವುದರಿಂದ ಆಗುವ ಲಾಭಗಳು : ಮನೆಯಾಗಿರಲಿ ಅಥವಾ ದೇವಸ್ಥಾನವಾಗಲಿ ದೀಪದ ಜ್ವಾಲೆಯಿಲ್ಲದೆ ಪೂಜೆ ಸಂಪೂರ್ಣಗೊಳ್ಳುವುದಿಲ್ಲ. ದೀಪದಿಂದ ದೇವರು ಪ್ರಸನ್ನನಾಗುತ್ತಾನೆ ಎಂದು ನಂಬಿಕೆ ಇದೆ. ಅಲ್ಲದೆ, ತುಪ್ಪದ ದೀಪವನ್ನು ಹಚ್ಚುವುದರಿಂದ ದೇವರನ್ನು ಮೆಚ್ಚಿಸಲು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಹಚ್ಚಿ ದೇವಾನುದೇವತೆಗಳಿಗೆ ಅರ್ಪಿಸಲಾಗುತ್ತದೆ. ಅದರೊಂದಿಗೆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಮತ್ತು ಸಂತೋಷವು ನೆಲೆಸುತ್ತದೆ ಹಾಗೆಯೇ ಮನೆಯ ವಾಸ್ತು ದೋಷಗಳನ್ನು ನಿವಾರಣೆಯಾಗುತ್ತವೆ ಎಂದು ನಂಬಲಾಗುತ್ತದೆ.


ಇದನ್ನೂ ಓದಿ: Pillow Vastu Tips: ರಾತ್ರಿ ಮಲಗುವ ಮುನ್ನ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ!


ಸಾಸಿವೆ ಎಣ್ಣೆಯ ದೀಪ : ನಿಮ್ಮ ಇಷ್ಟಾರ್ಥಗಳನ್ನು ಪೂರೈಸಲು ಬಯಸಿದರೆ, ದೇವರ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇದು ಬಯಕೆಯನ್ನು ಪೂರೈಸುತ್ತದೆಯಂತೆ. ಎಚ್ಚರಿಕೆ ಒಡೆದ ದೀಪವನ್ನು ಹಚ್ಚುವುದು ಮಂಗಳಕರವಲ್ಲ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ