Vitamin C Deficiency: ದೊಡ್ಡ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತೆ ದೇಹದಲ್ಲಿ ವಿಟಮಿನ್-ಸಿ ಕೊರತೆ
Vitamin C Deficiency: ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಂತನಾಗಿರಲು ವಿಟಮಿನ್ ಸಿ ಬಹಳ ಅಗತ್ಯ. ದೇಹದಲ್ಲಿ ವಿಟಮಿನ್-ಸಿ ಕೊರತೆಯು ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಪ್ರಾಥಮಿಕ ಹಂತದಲ್ಲಿಯೇ ಇದನ್ನು ಗುರುತಿಸಿ, ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು.
Vitamin C Deficiency: ಯಾವುದೇ ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ದೇಹದಲ್ಲಿ ವಿಟಮಿನ್ ಮತ್ತು ಮಿನರಲ್ ಗಳು ಕೂಡ ಅತ್ಯಗತ್ಯ. ಅದೇ ಸಮಯದಲ್ಲಿ, ದೇಹದಲ್ಲಿ ಯಾವುದೇ ಜೀವಸತ್ವಗಳ ಎಂದರೆ ವಿಟಮಿನ್ ಗಳ ಕೊರತೆ ಇದ್ದರೆ ಅದು ನಮ್ಮ ದೇಹದಲ್ಲಿ ಹಲವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ದೇಹಕ್ಕೆ ಎಲ್ಲಾ ರೀತಿಯ ವಿಟಮಿನ್ ಗಳ ಅಗತ್ಯವಿದ್ದರೂ ವಿಟಮಿನ್-ಸಿ ತುಂಬಾ ಮುಖ್ಯವಾದ ಜೀವಸತ್ವವಾಗಿದೆ. ಕಾರಣ ಯಾವುದೇ ಅನಾರೋಗ್ಯದ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ಬಹಳ ಮುಖ್ಯ.
ವಿಟಮಿನ್-ಸಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಜೀವಸತ್ವವಾಗಿದೆ. ಹಾಗಾಗಿ, ಮುಂದಾಗಬಹುದಾದಂತ ಸಮಸ್ಯೆಗಳನ್ನು ತಪ್ಪಿಸಲು ಪ್ರಾಥಮಿಕ ಹಂತದಲ್ಲಿಯೇ ವಿಟಮಿನ್ ಸಿ ಕೊರತೆಯ ಲಕ್ಷಣಗಳು ಗುರುತಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ವಿಟಮಿನ್ ಸಿ ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಇದು ನಿಮ್ಮ ಚರ್ಮ, ರಕ್ತನಾಳಗಳು, ಮೂಳೆ ಮತ್ತು ಕಾರ್ಟಿಲೆಜ್ ಅನ್ನು ಬಲವಾಗಿರಿಸುತ್ತದೆ.
ವಿಟಮಿನ್-ಸಿ ಕೊರತೆಯ ಸಾಮಾನ್ಯ ಲಕ್ಷಣಗಳು:
>> ದುರ್ಬಲ ರೋಗನಿರೋಧಕ ಶಕ್ತಿ
>> ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು ಕೂಡ ವಿಟಮಿನ್ ಸಿ ಕೊರತೆಯ ಲಕ್ಷಣ.
>> ಒಸಡುಗಳು, ಮೂಗಿನ ರಕ್ತಸ್ರಾವ ವಿಟಮಿನ್ ಸಿ ಕೊರತೆಯ ಲಕ್ಷಣ
>> ಕಡಿಮೆ ಮಟ್ಟದ ವಿಟಮಿನ್ ಸಿ ಹೊಂದಿರುವವರಲ್ಲಿ ದಣಿದ ಮತ್ತು ಕಿರಿಕಿರಿಯನ್ನು ಅನುಭವಿಸುತ್ತಾರೆ.
>> ಕೀಲುಗಳು ಮತ್ತು ಸ್ನಾಯುಗಳಲ್ಲಿ ನೋವು
>> ನಿಮ್ಮ ಚರ್ಮದ ಮೇಲೆ ಸಣ್ಣ ಕೆಂಪು-ನೀಲಿ ಮೂಗೇಟುಗಳಂತಹ ಕಲೆಗಳು
ಇದನ್ನೂ ಓದಿ- Winter foods: ಚಳಿಗಾಲದ ರೋಗಗಳಿಂದ ದೂರವಿರಲು ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ
ವಿಟಮಿನ್-ಸಿ ಕೊರತೆಯ ಪರಿಣಾಮ:
* ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ
* ಸಡಿಲವಾದ ಹಲ್ಲುಗಳು
* ಸಾಮಾನ್ಯವಾಗಿ ಯಾವುದೇ ಸಣ್ಣ-ಪುಟ್ಟ ಗಾಯಗಳಾದಾಗ ಅದು ಕೆಲವೇ ದಿನಗಳಲ್ಲಿ ಗುಣಮುಖವಾಗುತ್ತದೆ. ಆದರೆ, ವಿಟಮಿನ್ ಸಿ ಕೊರತೆ ಇರುವವರಿಗೆ ಗಾಯ ಬೇಗ ಮಾಸುವುದಿಲ್ಲ.
* ವಿಟಮಿನ್ ಸಿ ಕೊರತೆಯು ನಿಮ್ಮನ್ನು ಖಿನ್ನತೆಗೆ ಬಲಿಪಶು ಮಾಡಬಹುದು.
* ದುರ್ಬಲ ಮೂಳೆಗಳು
* ಚರ್ಮದ ತೊಂದರೆಗಳು
* ರಕ್ತಹೀನತೆ
* ಉಸಿರಾಟದ ತೊಂದರೆ
ಇದನ್ನೂ ಓದಿ- Radish Side Effect: ಮೂಲಂಗಿ ತಿಂದ ಬಳಿಕ ಈ ಆಹಾರಗಳನ್ನು ತಪ್ಪಿಯೂ ಸೇವಿಸಬೇಡಿ: ವಿಷವಾಗಿ ಪರಿಣಮಿಸುತ್ತೆ ಎಚ್ಚರ
ವಿಟಮಿನ್ ಸಿ ಕೊರತೆಯನ್ನು ತಡೆಯಲು ಈ ಆಹಾರಗಳನ್ನು ಸೇವಿಸಿ:
ನೀವು ವಿಟಮಿನ್ ಸಿ ಕೊರತೆಯ ಲಕ್ಷಣಗಳನ್ನು ಗಮನಿಸಿದರೆ ಪೂರಕಗಳ ಬದಲಿಗೆ ಮಲ್ಟಿ ವಿಟಮಿನ್ ಗಳನ್ನು ಸೇವಿಸುವುದು ಉತ್ತಮ. ಇದರ ಜೊತೆಗೆ ಕಿತ್ತಳೆ, ಪರಂಗಿ ಹಣ್ಣು, ನಿಂಬೆ, ಕಿವಿ, ಬೆರ್ರಿ, ಸೀಬೆಹಣ್ಣುಗಳನ್ನು ಕೂಡ ಸೇವಿಸಬಹುದು.
ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.