Dev Uthani Ekadashi 2022: ದೇವೋತ್ಥಾನ  ಏಕಾದಶಿ 4ನೇ ನವೆಂಬರ್ 2022 ರಂದು ಆಚರಿಸಲಾಗುತ್ತಿದೆ. ಶಾಸ್ತ್ರಗಳ ಪ್ರಕಾರ, ಈ ದಿನ ರಾಶಿಗಳಿಗೆ ಅನುನುಗವಾಗಿ ವಿವಿಧ ಜಾತಕದವರು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ಇಷ್ಟಾರ್ಥವು ನೆರವೇರುತ್ತದೆ. ಲಕ್ಷ್ಮಿ-ನಾರಾಯಣರ ಆಶೀರ್ವಾದದಿಂದ, ವ್ಯಕ್ತಿ ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ.


COMMERCIAL BREAK
SCROLL TO CONTINUE READING

ಮೇಷ ರಾಶಿ - ಮೇಷ ರಾಶಿಯವರು ದೇವಉಠಣಿ ಏಕಾದಶಿಯಂದು ಶ್ರೀಹರಿಗೆ ಬೆಲ್ಲವನ್ನು ಅರ್ಪಿಸಿ ವಿಷ್ಣು ಸಹಸ್ರನಾಮವನ್ನು ಪಠಿಸಿದರೆ ಸಾಲಬಾಧೆಯಿಂದ ಮುಕ್ತಿ ಸಿಗುತ್ತದೆ. ಇದರೊಂದಿಗೆ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಲಿದೆ.

ವೃಷಭ ರಾಶಿ - ವೃಷಭ ರಾಶಿಯ ಜನರು ಈ ದಿನ ವಿಷ್ಣುವಿಗೆ ಪಂಚಾಮೃತ ಅಥವಾ ಪಂಜಿರಿ ನೈವೇದ್ಯಗಳನ್ನು ಅರ್ಪಿಸಬೇಕು. ಇದು ಮೋಕ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ.

ಮಿಥುನ ರಾಶಿ - ದೇವೋತ್ಥಾನ ಏಕಾದಶಿಯಂದು, ಶ್ರೀ ಹರಿ ವಿಷ್ಣುವಿಗೆ ತುಳಸಿ ದಳವನ್ನು ಅರ್ಪಿಸಿ ಮತ್ತು ನಮೋ ನಮಸ್ತೇ ತುಳಸಿ ಪಾಪಂ ಹರ್ ಹರಿಪ್ರಿಯಾ ಎಂಬ ಮಂತ್ರವನ್ನು ಪಠಿಸಿ. ಇದು ಸಂತೋಷದ ದಾಂಪತ್ಯ ಜೀವನದಲ್ಲಿ ವರವನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಕರ್ಕ ರಾಶಿ - ಈ ದಿನ ಕರ್ಕ ರಾಶಿಯವರು ಶುಭ ಮುಹೂರ್ತದಲ್ಲಿ ತುಪ್ಪದ ದೀಪವನ್ನು ಹಚ್ಚಿ ಜಗತ್ ರಕ್ಷಕನಿಗೆ ಬಿಳಿ ಚಂದನವನ್ನು ಅರ್ಪಿಸಿ. ಮಧ್ಯರಾತ್ರಿ ಕನಕಧಾರಾ ಸ್ತೋತ್ರವನ್ನು ಪಠಿಸಬೇಕು. ಇದು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಸಿಂಹ ರಾಶಿ - ದೇವಉಠಣಿ ಏಕಾದಶಿಯಂದು ಬಲ ಶಂಖದಲ್ಲಿ ಹಸಿ ಹಾಲು ಮತ್ತು ಗಂಗಾಜಲವನ್ನು ಸುರಿದು ಮಹಾವಿಷ್ಣುವಿಗೆ ಅಭಿಷೇಕ ಮಾಡಿ ಉತ್ತಮ ಆರೋಗ್ಯವನ್ನು ಪಡೆಯಿರಿ.

ಕನ್ಯಾ ರಾಶಿ - ದೇವಉಠಣಿ ಏಕಾದಶಿಯಂದು ಕನ್ಯಾ ರಾಶಿಯವರು ಭಗವದ್ಗೀತೆ ಪಠಿಸುವುದರಿಂದ ಶುಭಫಲಪ್ರದಾಯಿ ಸಾಬೀತಾಗಲಿದೆ. ಇದು ವ್ಯಾಪಾರ ಮತ್ತು ಉದ್ಯೋಗದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ.

ತುಲಾ ರಾಶಿ - ತುಲಾ ರಾಶಿಯ ಜನರು ದೇವೋತ್ಥಾನ ಏಕಾದಶಿಯಂದು ಸಂಜೆ ವಿಷ್ಣುವಿಗೆ ಹಳದಿ ಹೂವುಗಳು ಮತ್ತು ಹಳದಿ ಸಿಹಿತಿಂಡಿಗಳನ್ನು ಅರ್ಪಿಸಬೇಕು. ಹಳದಿ ವಸ್ತುಗಳನ್ನು ಸಹ ದಾನ ಮಾಡಿ. ಇದರಿಂದ ಮಾನಸಿಕ ಮತ್ತು ದೈಹಿಕ ಒತ್ತಡ ದೂರವಾಗುತ್ತದೆ.

ವೃಶ್ಚಿಕ ರಾಶಿ -  ದೇವಪ್ರಬೋಧಿನಿ ಏಕಾದಶಿಯಂದು ವಿಷ್ಣು ಚಾಲೀಸವನ್ನು ಪಠಿಸುವುದರಿಂದ ವೃಶ್ಚಿಕ ರಾಶಿಯವರಿಗೆ ಶುಭ ಫಲ ಪ್ರಾಪ್ತಿಯಾಗಲಿದೆ. ಇದರಿಂದ ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.

ಧನು ರಾಶಿ - ಪ್ರದೋಷ ಕಾಲದಲ್ಲಿ ಶ್ರೀಹರಿಯನ್ನು ಜಾಗೃತಗೊಳಿಸಿದ ನಂತರ ಧನು ರಾಶಿಯವರು ಬಡವರಿಗೆ ಹೊದಿಕೆ ಅಥವಾ ಬೆಚ್ಚನೆಯ ಬಟ್ಟೆಗಳನ್ನು ದಾನ ಮಾಡಬೇಕು. ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಈ ಪರಿಹಾರವು ತುಂಬಾ ಪ್ರಯೋಜನಕಾರಿಯಾಗಿದೆ.

ಮಕರ ರಾಶಿ - ಈ ದಿನ ಮಕರ ರಾಶಿಯವರು ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಕುಂಕುಮ, ಬಾಳೆಹಣ್ಣು ಅಥವಾ ಅರಿಶಿನವನ್ನು ದಾನ ಮಾಡುತ್ತಾರೆ. ಹೀಗೆ ಮಾಡುವುದರಿಂದ ದಾಂಪತ್ಯದಲ್ಲಿ ಬರುವ ಅಡೆತಡೆಗಳು ದೂರಾಗುತ್ತವೆ ಎಂದು ನಂಬಲಾಗಿದೆ.

ಕುಂಭ ರಾಶಿ - ದೇವಉಠಣಿ ಏಕಾದಶಿಯಂದು ಕುಂಭ ರಾಶಿಯವರು ಉಪವಾಸವಿದ್ದು ಸಂಜೆ ತುಳಸಿ ಮಾತೆಗೆ ಕೆಂಪು ಬಣ್ಣದ ಚುನರಿ ಅರ್ಪಿಸಬೇಕು. ಈ ಪರಿಹಾರವು ಘನತೆ - ಗೌರವವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ-Chanakya Niti: ಇಂತಹ ಜನರು ಬಡತನದಲ್ಲಿ ಹುಟ್ಟಿದರೂ ಕೂಡ ಇವರ ಮೇಲೆ ತಾಯಿ ಲಕ್ಷ್ಮಿಯ ಅಪಾರ ಕೃಪೆ ಇರುತ್ತದೆ

ಮೀನ ರಾಶಿ - ಮೀನ ರಾಶಿಯವರು ದೇವೋತ್ಥಾನ ಏಕಾದಶಿಯಂದು ಶ್ರೀ ಹರಿ ವಿಷ್ಣುವಿಗೆ ಗಂಗಾಜಲದಿಂದ ಅಭಿಷೇಕ ಮಾಡಿಸಿ ನಂತರ, ತುಳಸಿ ದಳವನ್ನು ಅರ್ಪಿಸಿ. ಇದು ರೋಗಗಳು ಮತ್ತು ದೋಷಗಳನ್ನು ನಿವಾರಿಸುತ್ತದೆ.


ಇದನ್ನೂ ಓದಿ-Rahu Dosh: ರಾಹು ದೋಷದಿಂದ ಪಾರಾಗಲು ಇಲ್ಲಿದೆ ಸರಳ ಉಪಾಯ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ