Dhanatrayodashi Broom Remedies: ದೀಪಾವಳಿ ಒಟ್ಟು ಐದು ದಿನಗಳ ಹಬ್ಬ. ಈ ಹಬ್ಬ ಧನತ್ರಯೋದಶಿಯ ಆಚರಣೆಯೊಂದಿಗೆ ಪ್ರಾರಂಭವಾಗುತ್ತದೆ. ಧನತ್ರಯೋದಶಿಯ ದಿನ ಲಕ್ಷ್ಮಿ, ಕುಬೇರ ದೇವ್ ಮತ್ತು ಧನ್ವಂತರಿ ದೇವನನ್ನು ಪೂಜಿಸಲಾಗುತ್ತದೆ. ಇದರಿಂದ ತಾಯಿ ಲಕ್ಷ್ಮಿ ವರ್ಷವಿಡೀ ಮನೆಯಲ್ಲಿಯೇ ಇರುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ. ಇದೇ ವೇಳೆ, ಅನುಸರಿಸಲಾಗುವ ಕೆಲವು ಸಣ್ಣ ಕ್ರಮಗಳು ಕೂಡ ವ್ಯಕ್ತಿಗೆ ಸಾಕಷ್ಟು ಸಂಪತ್ತು ಮತ್ತು ವೈಭವವನ್ನು ಒದಗಿಸುತ್ತವೆ ಎನ್ನಲಾಗುತ್ತದೆ. ಧನತ್ರಯೋದಶಿಯ ದಿನ ಕೆಲವು ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಚಿನ್ನ, ಬೆಳ್ಳಿಯ ಜೊತೆಗೆ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸುವುದು ಕೂಡ ಶುಭ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಅದೇ ರೀತಿ ಧನತ್ರಯೋದಶಿಯ ದಿನ ಪೊರಕೆ ಖರೀದಿಸುವುದಕ್ಕೂ ಕೂಡ ವಿಶೇಷ ಮಹತ್ವವಿದೆ. ಈ ದಿನ, ಜನರು ಹೊಸ ಪೊರಕೆ ಖರೀದಿಸುತ್ತಾರೆ ಮತ್ತು ಹಳೆಯ ಪೊರಕೆ ತೆಗೆಯುತ್ತಾರೆ. ಆದರೆ ಹಳೆಯ ಪೊರಕೆಯನ್ನು ತೆಗೆಯುವ ಮೊದಲು ಕೆಲವು ಕ್ರಮಗಳನ್ನು ತೆಗೆದುಕೊಂಡರೆ, ವ್ಯಕ್ತಿಗೆ ತಾಯಿ ಲಕ್ಷ್ಮಿಯ ಅನುಗ್ರಹದಿಂದ ಸಾಕಷ್ಟು ಹಣ ಪ್ರಾಪ್ತಿಯಾಗುತ್ತದೆ.


ಹಳೆ ಪೊರಕೆಯ ಉಪಾಯಗಳು
>> ಧನತ್ರಯೋದಶಿಯ ದಿನದಂದು ಹೊಸ ಪೊರಕೆಯನ್ನು ಖರೀದಿಸಿ ಮನೆಗೆ ತರುವುದು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಪೊರಕೆಯನ್ನು ತಾಯಿ ಲಕ್ಷ್ಮಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಅನೇಕ ಜನರು ಈ ದಿನದಂದು ಹೊಸ ಪೊರಕೆ ಖರೀದಿಸುತ್ತಾರೆ ಮತ್ತು ಹಳೆಯ ಪೊರಕೆಯನ್ನು ಅನ್ನು ಹೊರಹಾಕುತ್ತಾರೆ. ಆದರೆ ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿಗೆ ಕಿರಿಕಿರಿಯಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು.


>> ಧನತ್ರಯೋದಶಿಯ ದಿನದಂದು, ಹಳೆಯ ಪೊರಕೆಯನ್ನು ಸಿಂಧೂರ, ಕುಂಕುಮ ಮತ್ತು ಅಕ್ಷತದಿಂದ ಪೂಜಿಸುವುದರಿಂದ ಸರಿಯಾದ ಪ್ರಯೋಜನಗಳು ಪ್ರಾಪ್ತಿಯಾಗುತ್ತವೆ. ಇದರೊಂದಿಗೆ ಹೊಸ ಪೊರಕೆಗೂ ಪೂಜೆ ಸಲ್ಲಿಸಿ.


>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಳೆಯ ಪೊರಕೆಯ ತುದಿಯಲ್ಲಿ ಕಪ್ಪು ದಾರವನ್ನು ಕಟ್ಟಿ ಮತ್ತು ಹೊರಗಿನವರಿಗೆ ಕಾಣಿಸದಂತಹ ಸ್ಥಳದಲ್ಲಿ ಇರಿಸಿ. ಪೊರಕೆಯು ಶುಕ್ರ ಗ್ರಹಕ್ಕೂ ಕಪ್ಪು ದಾರವು ಶನಿ ಗ್ರಹಕ್ಕೂ ಸಂಬಂಧಿಸಿರುವುದರಿಂದ ಹೀಗೆ ಮಾಡುವುದರಿಂದ ಜಾತಕದಲ್ಲಿ ಎರಡೂ ಗ್ರಹಗಳು ಬಲಗೊಳ್ಳುತ್ತವೆ ಎನ್ನುತ್ತಾರೆ ವಾಸ್ತು ತಜ್ಞರು. ಮತ್ತು ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುವುದಿಲ್ಲ.


>> ಧನತ್ರಯೋದಶಿಯ ದಿನದಂದು ಹಳೆಯ ಪೊರಕೆಯ ಬದಲು ಹೊಸ ಪೊರಕೆಯಿಂದ ಸ್ವಚ್ಛಗೊಳಿಸುವುದು ಉತ್ತಮ.


ಇದನ್ನೂ ಓದಿ-Dhanatrayodashi 2022: ಅಕ್ಟೋಬರ್ 22-23 ರಂದು ಈ ಚಿಕ್ಕ ಕೆಲಸ ಮಾಡಿ, ಧನ ಕುಬೇರ ಹಾಗೂ ಶನಿ ದೇವರ ಕೃಪೆಯಿಂದ ಭಾರಿ ಧನಲಾಭ


>> ಧನತ್ರಯೋದಶಿಯ ರಾತ್ರಿ ನೀವು ಹಳೆಯ ಪೊರಕೆಯನ್ನು ಮನೆಯಿಂದ ಹೊರಹಾಕಬಹುದು.


ಇದನ್ನೂ ಓದಿ-Diwali Gold purchase: ಧನತ್ರಯೋದಶಿ-ದೀಪಾವಳಿಗೆ ಚಿನ್ನ ಖರೀದಿಸಬೇಕೆ? ಮುಂದಿನ ವರ್ಷ ನಿಮಗೆ ಎಷ್ಟು ಲಾಭ?

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.