Dhanteras 2022: ಧನತ್ರಯೋದಶಿಯ ದಿನ ಈ ಚಿಕ್ಕ ಕೆಲಸ ಮಾಡಿ, ಜೀವನದಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ
Dhanteras 2022 Upay:ಧನತ್ರಯೋದಶಿಯ ದಿನದಿಂದ ದೀಪಾವಳಿಯ ಮಹಾಪರ್ವ ಆರಂಭಗೊಳ್ಳುತ್ತದೆ. ಧನತ್ರಯೋದಶಿ ಬರಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹ ಪರಿಸ್ಥಿತಿಯಲ್ಲಿ, ಜನರು ತಾಯಿ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಮತ್ತು ಅವಳ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಉಪಾಯಗಳನ್ನು ಅನುಸರಿಸಲು ಆರಂಭಿಸುತ್ತಾರೆ.
Dhanvantri Puja On Dhanteras 2022: ಧನ ತ್ರಯೋದಶಿಯ ದಿನ ತಾಯಿ ಲಕ್ಷ್ಮಿಯ ಜೊತೆಗೆ ಧನ್ವಂತರಿ ದೇವನಿಗೆ ಪೂಜೆ ಸಲ್ಲಿಸುವ ವಾಡಿಕೆ ಇದೆ. ದೀಪಾವಳಿ ಹಬ್ಬವು ಕೂಡ ಧನತ್ರಯೋದಶಿಯ ಆಚರಣೆಯ ಮೂಲಕ ಪ್ರಾರಂಭವಾಗುತ್ತದೆ. ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಧನತ್ರಯೋದಶಿ ದಿನ ತಾಯಿ ಲಕ್ಷ್ಮಿಯ ಆಹ್ವಾನದಿಂದ, ರೋಗ, ಕ್ಲೇಶ, ದುಃಖ ಇತ್ಯಾದಿಗಳನ್ನು ದೂರಾಗುತ್ತವೆ ಎನ್ನಲಾಗುತ್ತದೆ. ಜಗಳ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ ಎಂದು ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.
ಮನೆಯಲ್ಲಿ ತಾಯಿ ಲಕ್ಷ್ಮಿ ವಾಸಕ್ಕಾಗಿ ಧನತ್ರಯೋದಶಿಯ ದಿನ ಕೆಲ ಉಪಾಯಗಳನ್ನು ಅನುಸರಿಸಲು ಸಲಹೆ ನೀಡಲಾಗುತ್ತದೆ, ಇದರಿಂದ ಮನೆಯ ವಾಸ್ತು ದೋಷಗಳು ನಿವಾರಣೆಯಾಗುತ್ತವೆ. ಮನೆಯ ಋಣಾತ್ಮಕತೆಯನ್ನು ಹೋಗಲಾಡಿಸಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು, ಧನತ್ರಯೋದಶಿಯ ದಿನ ಕೆಲವು ಉಪಾಯಗಳನ್ನು ಅನುಸರಿಸಲು ಸಲಹೆ ನೀಡಲಾಗಿದೆ. ಬನ್ನಿ ತಿಳಿದುಕೊಳ್ಳೋಣ,
ಧನ್ವಂತರಿ ದೇವನ ಪೂಜೆ
ಧನ ತ್ರಯೋದಶಿಯ ದಿನವನ್ನು ಯಮನ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಯಮನನ್ನು ಪ್ರಸನ್ನಗೊಳಿಸುವುದರಿಂದ ಕುಟುಂಬದಲ್ಲಿ ಸುಖ ಶಾಂತಿ ನೆಲೆಸುತ್ತದೆ. ಅಷ್ಟೇ ಅಲ್ಲ, ಈ ದಿನದಂದು ಆರೋಗ್ಯದ ದೇವ ಧನಂತರಿಯನ್ನು ಪೂಜಿಸುವ ನಿಯಮವಿದೆ. ಈ ದಿನ ಅವರನ್ನು ಪೂಜಿಸುವುದರಿಂದ ಜನರು ಆರೋಗ್ಯವಂತರಾಗಿರುವ ವರವನ್ನು ಪಡೆಯುತ್ತಾರೆ ಎನ್ನಲಾಗುತ್ತದೆ. ಈ ದಿನ ಜಲಪೂಜೆ ಮತ್ತು ದೀಪ ದಾನ ಎರಡಕ್ಕೂ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಇದರಿಂದ ಉಭಯ ದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ.
ಇದನ್ನೂ ಓದಿ-Saturn Transit: ಶೀಘ್ರದಲ್ಲಿಯೇ ಶನಿಯ ನೇರ ನಡೆ ಆರಂಭ... ಈ ರಾಶಿಗಳ ಜನರ ಮೇಲೆ ನೇರ ಅಶುಭ ಪ್ರಭಾವ
ಧನತ್ರಯೋದಶಿಯ ದಿನ ಈ ಉಪಾಯಗಳನ್ನು ಅನುಸರಿಸಿ
ಕುಟುಂಬದಲ್ಲಿ ಯಾವಾಗಲು ಜಗಳ-ವ್ಯಾಜ್ಯಗಳಿದ್ದರೆ. ನೆಮ್ಮದಿಯ ವಾತಾವರಣ ಇರುವುದಿಲ್ಲ, ಸಂತಾನ ಪ್ರಾಪ್ತಿಯಲ್ಲಿ ಅಡೆತಡೆಗಳು ಎದುರಾಗುತ್ತವೆ, ದಾಂಪತ್ಯದಲ್ಲಿ ಹಲವು ರೀತಿಯ ಅಡೆತಡೆಗಳು ಬರುತ್ತವೆ, ವ್ಯಾಪಾರದಲ್ಲಿ ಏಳಿಗೆ, ಉದ್ಯೋಗದಲ್ಲಿನ ಸಮಸ್ಯೆಗಳಿದ್ದರೆ, ಧನತ್ರಯೋದಶಿಯ ದಿನ ಈ ಕ್ರಮಗಳನ್ನು ಅನುಸರಿಸುವುದರಿಂದ ಲಾಭ ಸಿಗುತ್ತಿದೆ.
ಇದನ್ನೂ ಓದಿ-ಡೇಟಿಂಗ್ ಮಾಡುವ ಮುನ್ನ ಹುಡುಗನಲ್ಲಿ ಗಮನಿಸಬೇಕಾದ 10 ಪ್ರಮುಖ ವಿಷಯಗಳೇನು ಗೊತ್ತೇ?
ಧನತ್ರಯೋದಶಿಯ ದಿನದಂದು, ಯಮ ದೇವರನ್ನು ಸಂಪೂರ್ಣ ಶೃದ್ಧಾ ಭಕ್ತಿಯಿಂದ ಪೂಜಿಸಿದರೆ, ಉದ್ಯೋಗದಲ್ಲಿ ಸ್ಥಗಿತಗೊಂಡ ಬಡ್ತಿ, ಪಿತ್ರ ದೋಷ ಅಥವಾ ಗ್ರಹಗಳ ದೋಷ, ಶನಿ ಅಥವಾ ರಾಹುಗಳಿಂದ ಮುಕ್ತಿ ಸಿಗುತ್ತದೆ. ಈ ದಿನ ನೀರನ್ನು ಪೂಜಿಸುವ ಮೂಲಕ ದೀಪವನ್ನು ದಾನ ಮಾಡಿ. ನೀವು ಯಾವುದೇ ಕಾಲುವೆ ಅಥವಾ ನದಿಯ ಬಳಿ ಹೋಗಿ ಈ ಕೆಲಸವನ್ನು ಮಾಡಬಹುದು. ಮತ್ತೊಂದೆಡೆ, ಸಾಮಾನ್ಯ ದಿನಗಳಲ್ಲಿ ಮನೆಯಲ್ಲಿ ಉಪ್ಪಿನ ನೀರಿನಿಂದ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಮನೆಯಲ್ಲಿನ ನಕಾರಾತ್ಮಕತೆ ದೂರಾಗುತ್ತದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.