ಬೆಂಗಳೂರು : ಶುಗರ್ ಲೆವೆಲ್ ಹೆಚ್ಚಾಗುವುದೇ ಆರೋಗ್ಯದ ದೊಡ್ಡ ಸಮಸ್ಯೆ (Blood Sugar Level). ಖಾಲಿ ಹೊಟ್ಟೆಯಲ್ಲಿ ಸಕ್ಕರೆ ಪ್ರಮಾಣ ಏಕೆ ಹೆಚ್ಚಾಗುತ್ತದೆ ಎನ್ನುವುದಕ್ಕೆ ಬೇರೆ ಬೇರೆ ಕಾರಣಗಳಿವೆ (Sugar level on empty stomach).  ಪ್ರತಿಯೊಂದರ ಹಿಂದೆ ಬೇರೆ ಬೇರೆ ತರ್ಕಗಳಿವೆ. ವಾಸ್ತವವಾಗಿ, ಅನೇಕ ಜನರ ಸಕ್ಕರೆ ಮಟ್ಟವು ಬೆಳಗ್ಗಿನ ಹೊತ್ತಿನಲ್ಲಿ ಹೆಚ್ಚಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಖಾಲಿ ಹೊಟ್ಟೆಯಲ್ಲಿ ಸಕ್ಕರೆ ಪ್ರಮಾಣ ಯಾಕೆ ಹೆಚ್ಚಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಲ್ಲದೆ ಸಾಮಾನ್ಯ ಸಕ್ಕರೆ ಮಟ್ಟ ಎಷ್ಟಿರಬೇಕು?  ಮಧುಮೇಹವು ಮೂತ್ರಪಿಂಡಗಳು, ಹೃದಯ, ಕಣ್ಣುಗಳು, ಚರ್ಮ ಮತ್ತು ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ . ಆದ್ದರಿಂದ, ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ (how to control blood sugar). 


COMMERCIAL BREAK
SCROLL TO CONTINUE READING

ಬೆಳಿಗ್ಗೆ ಸಕ್ಕರೆಯ ಮಟ್ಟ ಹೇಗಿರಬೇಕು ? :
ವರದಿಗಳ ಪ್ರಕಾರ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಕ್ಕರೆಯ ಮಟ್ಟವನ್ನು ಸಾಮಾನ್ಯಗೊಳಿಸುವುದು ಬಹಳ ಮುಖ್ಯ (how to control blood sugar). ಏಕೆಂದರೆ ಹೆಚ್ಚುತ್ತಿರುವ ಸಕ್ಕರೆಯ ಮಟ್ಟವು ವ್ಯಕ್ತಿಯಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಹುಟ್ಟು ಹಾಕಬಹುದು. ಜೊತೆಗೆ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಸಾಮಾನ್ಯ ರಕ್ತದಲ್ಲಿನ ಸಕ್ಕರೆಯ ಮಟ್ಟವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 70-100 mg/dl ಆಗಿರಬೇಕು ಎನ್ನಲಾಗಿದೆ. ಸಕ್ಕರ(Blood sugar on empty stomach)ೆಯ ಮಟ್ಟವು 100-125mg/dl ಆಗಿದ್ದರೆ, ಅದು ಅಪಾಯಕಾರಿ. 126mg/dl ಗಿಂತ ಹೆಚ್ಚು ಸಕ್ಕರೆ ಪ್ರಮಾಣ ಡಯಾಬಿಟಿಕ್ ರೇಂಜ್ ನಲ್ಲಿ ಬರುತ್ತದೆ.ಈ ಪರಿಸ್ಥಿತಿಯಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.  ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗಬಹುದು.


ಇದನ್ನೂ ಓದಿ : ಚಿಕ್ಕವಯಸ್ಸಿನಲ್ಲೇ ದೃಷ್ಟಿ ಸಮಸ್ಯೆಯೇ? ಮುಖ್ಯ ಕಾರಣ ಇದೇ ನೋಡಿ


ಬೆಳಿಗ್ಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಹೇಗೆ  ? 
-ರಾತ್ರಿಯಲ್ಲಿ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಲು ಪ್ರಯತ್ನಿಸಿ, ಜೊತೆಗೆ ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸಿ. 
-ಇದಲ್ಲದೇ ಆಹಾರ ಸೇವಿಸಿದ ನಂತರ ವಾಕ್ (Walk) ಮಾಡುವುದನ್ನು ರೂಢಿಸಿಕೊಳ್ಳಬೇಕು. 
-ರಾತ್ರಿ ಹೊತ್ತು ಸ್ನಾಕ್ಕ್ಸ್, ಕಾರ್ಬೋಹೈಡ್ರೇಟ್  ತೆಗೆದುಕೊಳ್ಳಬಾರದು. ಒಂದು ವೇಳೆ ಹೀಗೆ ಮಾಡಿದರೆ ಬೆಳಿಗ್ಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ.
-ಇದರ ಹೊರತಾಗಿ, ನಿಮ್ಮನ್ನು ಹೈಡ್ರೀಕರಿಸಿಟ್ಟುಕೊಳ್ಳಿ. ಹೆಚ್ಚು ಹೆಚ್ಚು ನೀರು ಕುಡಿಯಲು ಪ್ರಯತ್ನಿಸಿ. 
-ಬೆಳಗಿನ ಉಪಾಹಾರವನ್ನು (Breakfast) ತಪ್ಪಿಸಲೇ ಬಾರದು. ಬೆಳಗಿನ ಉಪಾಹಾರದಲ್ಲಿ ಆರೋಗ್ಯಕರ ಪದಾರ್ಥಗಳನ್ನು ಮಾತ್ರ ಸೇವಿಸಿ. 


ಇದನ್ನೂ ಓದಿ : White Hair Solution : ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಬಳಸಿ ತುಳಸಿ ಮತ್ತು ನೆಲ್ಲಿಕಾಯಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.