ಮಧುಮೇಹ ಇರುವವರು ಈ ಹಳದಿ ಚಪಾತಿ ತಿಂದರೆ ನಿಯಂತ್ರಣಕ್ಕೆ ಬರುತ್ತದೆ ರಕ್ತದಲ್ಲಿನ ಸಕ್ಕರೆ ಮಟ್ಟ
ಕಡಲೆ ಹಿಟ್ಟು ನಮ್ಮ ಅಡುಗೆಮನೆಯ ಪ್ರಮುಖ ಭಾಗವಾಗಿದೆ. ಅದರ ಸಹಾಯದಿಂದ ಅನೇಕ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಆದರೆ ಅದರಿಂದ ತಯಾರಿಸಿದ ಚಪಾತಿ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.
ಬೆಂಗಳೂರು : ಕಡಲೆ ಹಿಟ್ಟನ್ನು ಸಾಮಾನ್ಯವಾಗಿ ಬಹುತೇಕ ಅಡುಗೆಗಳಲ್ಲಿ ಬಳಸಲಾಗುತ್ತದೆ. ಇನ್ನು ಈ ಹಿಟ್ಟು ಬಳಸಿ ತಯಾರಿಸುವ ಬೋಂಡಾ ಬಜ್ಜಿಯನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲ. ಇದು ಪ್ರೋಟೀನ್ ನ ಸಮೃದ್ಧ ಮೂಲವಾಗಿದೆ. ಕಡಲೆ ಹಿಟ್ಟು ಬಳಸುವ, ಮೂಲಕ ಮಧುಮೇಹಿಗಳ ಆರೋಗ್ಯವನ್ನು ಸುಧಾರಿಸಬಹುದು.
ಮಧುಮೇಹಿಗಳಿಗೆ ಬೆಸ್ಟ್ ಕಡಲೆಹಿಟ್ಟಿನ ಚಪಾತಿ :
ಡಯಾಬಿಟೀಸ್ ರೋಗಿಗಳು ತಮ್ಮ ಆಹಾರ ಪದ್ಧತಿಯಾ ಬಗ್ಗೆ ಬಹಳ ಕಾಳಜಿ ವಹಿಸಬೇಕು. ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ ಅವರ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರುಪೇರಾಗುತ್ತದೆ. ಹೀಗಾಗಿ ಮಧುಮೇಹಿಗಳು ಕಡಲೆಹಿಟ್ಟಿನ ಚಪಾತಿ ತಿಂದರೆ ಅವರ ಆರೋಗ್ಯ ಚೆನ್ನಾಗಿರುತ್ತದೆ.
ಇದನ್ನೂ ಓದಿ : Anemia: ಇದನ್ನು ಸೇವಿಸಿದರೆ ದೇಹದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ, ಆದರೆ ಸರಿಯಾದ ಕ್ರಮ ತಿಳಿದಿರಲಿ
ಕಡಲೆ ಹಿಟ್ಟಿನಲ್ಲಿ ಕಂಡುಬರುವ ಪೋಷಕಾಂಶಗಳು :
ಕಡಲೆ ಹಿಟ್ಟಿನಿಂದ ತಯಾರಿಸಿದ ಚಪಾತಿಯನ್ನು ಸೇವಿಸಿದರೆ, ದೇಹವು ಅನೇಕ ರೀತಿಯ ಪೋಷಕಾಂಶಗಳನ್ನು ಪಡೆಯುತ್ತದೆ. ಇದು ಮಧುಮೇಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸುಧಾರಿಸುತ್ತದೆ. ಇದು ಸಾಮಾನ್ಯ ಹಿಟ್ಟಿಗಿಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದರ ಹೊರತಾಗಿ, ಪೊಟ್ಯಾಸಿಯಮ್, ಮ್ಯಾಂಗನೀಸ್, ತಾಮ್ರ, ಸತು, ವಿಟಮಿನ್ ಬಿ 6 ಮತ್ತು ಥಯಾಮಿನ್, ಫೈಬರ್, ಕಬ್ಬಿಣ, ರಂಜಕ, ಮೆಗ್ನೀಸಿಯಮ್ ಮತ್ತು ಫೋಲೇಟ್ ಮುಂತಾದ ಪೋಷಕಾಂಶಗಳು ಈ ಹಿಟ್ಟಿನಲ್ಲಿ ಹೇರಳವಾಗಿ ಕಂಡುಬರುತ್ತವೆ.
ಸಕ್ಕರೆ ಕಾಯಿಲೆಗೆ ಬೇಳೆ ಹಿಟ್ಟು ಹೇಗೆ ಪ್ರಯೋಜನಕಾರಿ?:
ಕಡಲೆ ಹಿಟ್ಟಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆಯಾಗಿರುತ್ತದೆ. ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಅದಕ್ಕಾಗಿಯೇ ಚಪಾತಿ ತಿನ್ನಲು ಸಲಹೆ ನೀಡುತ್ತಾರೆ.
ಇದನ್ನೂ ಓದಿ : Omicron BA.5 Variant: ಮಹಾರಾಷ್ಟ್ರದ ಪುಣೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯಲ್ಲಿ ಒಮಿಕ್ರಾನ್ ಉಪ-ರೂಪಾಂತರಿ BA.5 ಪತ್ತೆ
ಈ ವಿಷಯದ ಬಗ್ಗೆ ವಿಶೇಷ ಕಾಳಜಿ ವಹಿಸಿ :
ಡಯಾಬಿಟೀಸ್ ರೋಗಿಗಳಿಗೆ ಕಡಲೆ ಹಿಟ್ಟು ಆರೋಗ್ಯಕರ ಆಯ್ಕೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅದರ ಚಪಾತಿಯನ್ನು ಮಾತ್ರ ತಿನ್ನಿರಿ, ಪಕೋಡಾ ಅಥವಾ ಪರೋಟಾಗಳನ್ನು ಈ ಹಿಟ್ಟಿನಿಂದ ತಯಾರಿಸಿ ಸೇವಿಸಿದರೆ ಈ ಹಿಟ್ಟಿನ ಜೊತೆಗೆ ಅತಿಯಾದ ಎಣ್ಣೆಯ ಅಂಶ ಕೂಡಾ ನಿಮ್ಮ ದೇಹ ಸೇರುತ್ತದೆ. ಇದರಿಂದ ಕೊಲೆಸ್ಟ್ರಾಲ್ ಸಮಸ್ಯೆ ಕಾಣಿಸಿಕೊಳ್ಳಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.