ಕನ್ಯಾರಾಶಿಯಲ್ಲಿ ಬುಧನ ನೇರ ಸಂಚಾರ: ಮುಂದಿನ 1 ತಿಂಗಳು ಈ 5 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ
ಮಿಥುನ ರಾಶಿಯಲ್ಲಿ ಬುಧ ಲಗ್ನದ ಅಧಿಪತಿ ಎನ್ನಲಾಗುತ್ತದೆ. ಇದೀಗ ಕನ್ಯಾರಾಶಿಯಲ್ಲಿ ಬುಧ ಸಂಕ್ರಮಿಸುತ್ತಿದ್ದು, ಪರಿಣಾಮ ಮಿಥುನ ರಾಶಿಯವರು ವಾಹನ ಖರೀದಿಸುವ ಸಾಧ್ಯತೆ ಇದೆ. ಜೊತೆಗೆ ಈ ರಾಶಿಯ ಜನರು ಸಂತೋಷದ ಜೀವನವನ್ನು ನಡೆಸುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹದ ಸ್ಥಾನ ಬಲವಾಗಿದ್ದರೆ ಆತನಿಗೆ ಶುಭ ಪ್ರಾಪ್ತವಾಗುತ್ತದೆ. ಇದೀಗ ವಕ್ರಿಯಾಗಿದ್ದ ಬುಧನು ಅಕ್ಟೋಬರ್ 2ರ ಬಳಿಕ ಕನ್ಯಾ ರಾಶಿಯಲ್ಲಿ ನೇರ ಸಂಚಾರ ಪ್ರಾರಂಭಿಸಿದ್ದಾನೆ. ಈ ಚಲನೆಯನ್ನು ಬದಲಾಯಿಸಿರುವುದು ಜನರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವಂತೆ ಮಾಡಿದೆ. ಆದರೆ ಈ ಪರಿಣಾಮ ಕೆಲವರಿಗೆ ಸಕಾರಾತ್ಮಕವಾಗಿದ್ದರೆ, ಇನ್ನೂ ಕೆಲವರಿಗೆ ಅದು ನಕಾರಾತ್ಮಕವಾಗಿದೆ. ಇನ್ನು ದೀಪಾವಳಿಯ ಮುನ್ನ ಬುಧದ ನೇರ ಚಲನೆಯು ಕೆಲವು ರಾಶಿಚಕ್ರ ಚಿಹ್ನೆಗಳ ಸಂಪತ್ತನ್ನು ವೃದ್ಧಿಸುವಂತೆ ಮಾಡಲಿವೆ.
ಇದನ್ನೂ ಓದಿ: Chanakya Niti : ಪುರುಷರ ಈ ಗುಣಗಳು ಮಹಿಳೆಯರಿಗೆ ತುಂಬಾ ಇಷ್ಟವಂತೆ!
ಮಿಥುನ ರಾಶಿಯಲ್ಲಿ ಬುಧ ಲಗ್ನದ ಅಧಿಪತಿ ಎನ್ನಲಾಗುತ್ತದೆ. ಇದೀಗ ಕನ್ಯಾರಾಶಿಯಲ್ಲಿ ಬುಧ ಸಂಕ್ರಮಿಸುತ್ತಿದ್ದು, ಪರಿಣಾಮ ಮಿಥುನ ರಾಶಿಯವರು ವಾಹನ ಖರೀದಿಸುವ ಸಾಧ್ಯತೆ ಇದೆ. ಜೊತೆಗೆ ಈ ರಾಶಿಯ ಜನರು ಸಂತೋಷದ ಜೀವನವನ್ನು ನಡೆಸುತ್ತಾರೆ. ಈ ಸಮಯದಲ್ಲಿ ನೀವು ರೂಪಿಸುವ ಯೋಜನೆಗಳು ಯಶಸ್ವಿಯಾಗುತ್ತವೆ. ಮಾರುಕಟ್ಟೆಯಲ್ಲಿ ಲಾಭವೂ ಕಂಡುಬರುತ್ತದೆ.
ಇನ್ನೊಂದೆಡೆ ಕರ್ಕಾಟಕ ರಾಶಿಯವರಿಗೂ ಲಾಭವಾಗಲಿದೆ. ಬುಧವು ಸಂಚಾರದ ದಾರಿಯಲ್ಲಿದ್ದರೆ, ಅದು ಕರ್ಕ ರಾಶಿಯ ಮೂರನೇ ಮನೆಗೆ ಪ್ರವೇಶಿಸುತ್ತದೆ. ಹೀಗಾಗಿ ನಿಮ್ಮ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಒಡಹುಟ್ಟಿದವರೊಂದಿಗಿನ ಸಂಬಂಧವೂ ಸುಧಾರಿಸುತ್ತದೆ. ವೃತ್ತಿಜೀವನದ ವಿಷಯದಲ್ಲಿ ಅಭಿವೃದ್ಧಿ ಹೊಂದುತ್ತೀರಿ.
ಇನ್ನು ಕನ್ಯಾ ರಾಶಿಯವರಿಗೆ ಬುಧವು ನಿಮ್ಮ ಸ್ವಂತ ರಾಶಿ ಚಿಹ್ನೆಯ ಮೇಲೆ ಗರಿಷ್ಠ ಪರಿಣಾಮ ಬೀರುತ್ತದೆ. ಏಕೆಂದರೆ ಈಗಾಗಲೇ ಬುಧವು ನಿಮ್ಮ ಲಗ್ನ ಮನೆಯಲ್ಲಿ ಇದ್ದಾನೆ. ಈ ಸಮಯದಲ್ಲಿ, ನಿಮ್ಮ ಸ್ವಭಾವದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ವೃತ್ತಿ ಮತ್ತು ಶಿಕ್ಷಣದ ವಿಷಯದಲ್ಲಿ ಭಾರೀ ಯಶಸ್ಸು ಪಡೆಯುತ್ತೀರಿ. ಹಣದ ವಿಷಯದಲ್ಲಿ ನೀವು ಶೀಘ್ರ ಲಾಭವನ್ನು ಪಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: ವಿಪರೀತ ರಾಜಯೋಗ ರೂಪಿಸುತ್ತಿರುವ ಶನಿದೇವ, ಮೂರು ರಾಶಿಯವರಿಗೆ ನೀಡಲಿದ್ದಾನೆ ಯಶಸ್ಸು
ಮೀನ ರಾಶಿಯ ಜನರ ಈ ಬುಧ ಸಂಚಾರವು ವಿಶೇಷ ಪರಿಣಾಮ ಬೀರುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಲಿದೆ. ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಈ ಸಮಯದಲ್ಲಿ ನೀವು ವಿಫುಲ ಅವಕಾಶವನ್ನು ಕಂಡುಕೊಳ್ಳುತ್ತೀರಿ, ಅದು ನಿಮಗೆ ಸಾಕಷ್ಟು ಬೆಳವಣಿಗೆಯನ್ನು ನೀಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.