Sun Eclipse Zodiac Change: ಹಿಂದೂ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯಂದು ದೇಶಾದ್ಯಂತ ಮಹಾಪರ್ವವನ್ನು ಆಚರಿಸಲಾಗುತ್ತಿದೆ. 27 ವರ್ಷಗಳ ಹಿಂದೆ ದೀಪಾವಳಿಯ ದಿನದಂದು ಇಂತಹ ಕಾಕತಾಳೀಯ ಸೂರ್ಯಗ್ರಹಣ ಸಂಭವಿಸಿತ್ತು. ದೀಪಾವಳಿಯ ಈ ಗ್ರಹಣವು 2022 ರ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವಾಗಿದೆ. ಕಾರ್ತಿಕ ಮಾಸದ ಅಮಾವಾಸ್ಯೆಯಂದು ಸಂಭವಿಸುವ ಈ ಸೂರ್ಯಗ್ರಹಣ ಬಹಳ ವಿಶೇಷವಾಗಿದೆ. ಇದು ವಿವಿಧ ರಾಶಿಗಳ  ಜನರ ಮೇಲೆ ವಿವಿಧ ರೀತಿಯಲ್ಲಿ  ಪ್ರಭಾವ ಬೀರಲಿದೆ.


COMMERCIAL BREAK
SCROLL TO CONTINUE READING

ಯಾವ ರಾಶಿಗಳ ಮೇಲೆ ಸೂರ್ಯ ಗ್ರಹಣದ ಪ್ರಭಾವ ಹೇಗೆ?


ಮೇಷ ರಾಶಿ - ಈ ಸೂರ್ಯಗ್ರಹಣವು ಮೇಷ ರಾಶಿಯ ಜನರ ವೈವಾಹಿಕ ಜೀವನವನ್ನು ಅಸ್ತವ್ಯಸ್ತವಾಗಿಸಲಿದೆ. ಇದು ಈ ಮೇಷ ಜಾತಕದವರ ಮೇಲೆ ಮಾನಸಿಕ ಒತ್ತಡವನ್ನು ತರಲಿದೆ.


ವೃಷಭ ರಾಶಿ - ಇದು ವೃಷಭ ರಾಶಿಯ ಜನರ ಮೇಲೆ ಅನುಕೂಲಕರ ಪರಿಣಾಮ ಬೀರಲಿದೆ ಮತ್ತು ಜೀವನ ಸುಖಕರವಾಗಿರಲಿದೆ.


ಮಿಥುನ ರಾಶಿ - ಈ ವರ್ಷದ ಸೂರ್ಯಗ್ರಹಣವು ಮಿಥುನ ರಾಶಿಯ ಜನರನ್ನು ಒತ್ತದಕ್ಕೀಡು ಮಾಡಬಹುದು. ಮಿಥುನ ರಾಶಿಯ ಜನರು ಇದರಿಂದ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.


ಕರ್ಕ ರಾಶಿ - ಕರ್ಕ ರಾಶಿಯ ಜನರು ಕೂಡ ಈ ಸೂರ್ಯಗ್ರಹಣದಿಂದ ಎಚ್ಚರದಿಂದಿರಬೇಕು. ಇದು ನಿಮ್ಮ ಪಾಲಿಗೆ ಕಷ್ಟಕರ ಸಾಬೀತಾಗಬಹುದು.


ಸಿಂಹ ರಾಶಿ - ಸಿಂಹ ರಾಶಿಯ ಜನರು ಈ ಗ್ರಹಣದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಈ ಗ್ರಹಣದಿಂದ ನಿಮಗೆ ಕಡಿಮೆಯೇ ಆದರೂ ಲಾಭ ಸಿಗಲಿದೆ.


ಕನ್ಯಾ ರಾಶಿ - ಕನ್ಯಾ ರಾಶಿಯ ಜನರು ಜಾಗರೂಕರಾಗಿರಬೇಕು. ಏಕೆಂದರೆ ಈ ಗ್ರಹಣದ ಪ್ರಭಾವದಿಂದ ನೀವು ಹಣವನ್ನು ಕಳೆದುಕೊಳ್ಳಬೇಕಾಗಬಹುದು.


ತುಲಾ ರಾಶಿ - ಈ ಗ್ರಹಣವು ತುಲಾ ರಾಶಿಯ ಜನರ ಮೇಲೆ ಪ್ರತಿಕೂಲ ಪರಿಣಾಮಗಳು ಗೋಚರಿಸಲಿವೆ. ಗ್ರಹಣದ ದಿನ ನೀವು ಸ್ವಲ್ಪ ಜಾಗರೂಕರಾಗಿರಬೇಕು.


ವೃಶ್ಚಿಕ ರಾಶಿ - ಈ ರಾಶಿಗಳ ಜನರು ಕೂಡ ಈ ಸೂರ್ಯಗ್ರಹಣದಿಂದ ಎಚ್ಚರದಿಂದಿರಬೇಕು. ನಿಮಗೆ ಹಣಕ್ಕೆ ಸಂಬಂಧಿಸಿದಂತೆ ನಷ್ಟ ಉಂಟಾಗುವ ಸಾಧ್ಯತೆ ಇದೆ.


ಧನು ರಾಶಿ - ಧನು ರಾಶಿಯವರಿಗೆ ಈ ಗ್ರಹಣವು ಶುಭ ಸಂದೇಶವನ್ನು ತರಲಿದೆ. ನಿಮಗೆ ಶೀಘ್ರದಲ್ಲೇ ಕೆಲವು ಉತ್ತಮ ಸಮಾಚಾರಗಳು ಸಿಗಲಿವೆ. 


ಮಕರ ರಾಶಿ - ಧನು ರಾಶಿಯಂತೆ ಮಕರ ರಾಶಿಯವರು ಕೂಡ ಶುಭ ವಾರ್ತೆ ಕೇಳಲು ಸಿದ್ಧರಾಗಿರಿ. ಶೀಘ್ರದಲ್ಲೇ ನೀವು ಕೆಲವು ದೊಡ್ಡ ಪ್ರಯೋಜನಗಳನ್ನು ಪಡೆಯಲಿರುವಿರಿ.


ಕುಂಭ ರಾಶಿ - ಕುಂಭ ರಾಶಿಯವರಿಗೆ ಒಂದು ಸಲಹೆ ಏನೆಂದರೆ ನೀವು ಯಾವುದೇ ವಿಷಯವನ್ನು ಸಾಕಷ್ಟು ಆಲೋಚಿಸಿ ಮಾತನಾಡಬೇಕು. ಈ ಗ್ರಹಣದ ಪ್ರಭಾವಕ್ಕೆ ಒಳಗಾಗುವುದರಿಂದ ನಿಮ್ಮ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗಬಹುದು.


ಇದನ್ನೂ ಓದಿ-Lizards At Home : ಮನೆಯಲ್ಲಿ ಹಲ್ಲಿ ಕಾಟವೇ? ಹಾಗಿದ್ರೆ, ಈ 5 ಮಾರ್ಗಗಳನ್ನು ಅನುಸರಿಸಿ ಓಡಿಸಿ


ಮೀನ ರಾಶಿ - ಈ ಸೂರ್ಯಗ್ರಹಣವು ಮೀನ ರಾಶಿಯವರ ಮೇಲೆ  ಪ್ರತಿಕೂಲ ಪರಿಣಾಮಗಳನ್ನು ತೋರಿಸುತ್ತಿದೆ. ನೀವು ಜಾಗರೂಕರಾಗಿರಬೇಕು ಇಲ್ಲದಿದ್ದರೆ ಅದು ನಿಮಗೆ ಸಾಕಷ್ಟು ನೋವುಂಟು ಮಾಡಬಹುದು.


ಇದನ್ನೂ ಓದಿ-Diwali Skin Care Tips : ಒಂದೇ ವಾರದಲ್ಲಿ ತ್ವಚೆಯ ಹೊಳಪು ಹೆಚ್ಚಿಸಲು ಈ 3 ವಸ್ತುಗಳನ್ನು ಸೇವಿಸಿ.!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.