Diwali 2022 Good Luck: ದೀಪಾವಳಿ ಹಬ್ಬವು ಇಂದಿನಿಂದ ಅಂದರೆ, ಧನತ್ರಯೋದಶಿಯಿಂದ ಆರಂಭಗೊಂಡಿದೆ. ಇದು ಐದು ದಿನಗಳ ಹಬ್ಬ. ಹಿಂದೂ ಕ್ಯಾಲೆಂಡರ್ ಪ್ರಕಾರ ದೀಪಾವಳಿ ಹಬ್ಬವನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ವರ್ಷ ದೀಪಾವಳಿಯನ್ನು 24 ಅಕ್ಟೋಬರ್ 2022 ರಂದು ಆಚರಿಸಲಾಗುತ್ತದೆ. ದೀಪಾವಳಿಯಂದು, ಗ್ರಹ-ನಕ್ಷತ್ರಗಳ ಸ್ಥಿತಿಯಿಂದ ರೂಪುಗೊಂಡ ಮಂಗಳಕರ ಯೋಗಗಳು ಅನೇಕ ರಾಶಿಗಳ ಜನರಿಗೆ ಪ್ರಯೋಜನಕಾರಿ ಸಾಬೀತಾಗಲಿವೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಜ್ಯೋತಿಷಿಗಳ ಪ್ರಕಾರ, ದೀಪಾವಳಿಯ ದಿನದಂದು ಅಭಿಜಿತ್ ಮುಹೂರ್ತ ಮತ್ತು ವೈಧೃತಿ ಯೋಗದ ಅದ್ಭುತ ಸಂಯೋಜನೆ ನೆರವೇರುತ್ತಿದೆ. ಈ ಕಾಕತಾಳೀಯಕ್ಕೆ ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವಿದೆ. ಈ ಸಂಯೋಜನೆಯು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಪ್ರಭಾವ ಬೀರುತ್ತದೆ, ಆದರೂ ಇದು ಕೆಲವು ರಾಶಿಗಳ ಜಾತಕದವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಪವಿತ್ರ ಹಬ್ಬವಾದ ದೀಪಾವಳಿಯಂದು ತಾಯಿ ಲಕ್ಷ್ಮಿಯ ವಿಶೇಷ ಕೃಪೆ ಯಾವ ರಾಶಿಯವರ ಮೇಲಿರಲಿದೆ ತಿಳಿದುಕೊಳ್ಳೋಣ ಬನ್ನಿ,


ಸಿಂಹ ರಾಶಿ- ಗ್ರಹ-ನಕ್ಷತ್ರಗಳ ಸ್ಥಿತಿಯ ಕಾರಣ ನಿರ್ಮಾಣಗೊಳ್ಳುವ ದೀಪಾವಳಿಯ ವಿಶೇಷ ಕಾಕತಾಳೀಯವು ಸಿಂಹ ರಾಶಿಯ ಜನರಿಗೆ ಪ್ರಯೋಜನಕಾರಿಯಾಗಲಿದೆ. ಈ ರಾಶಿಯ ಅಧಿಪತಿ ಗ್ರಹ ಸೂರ್ಯ ದೇವರು. ಸಿಂಹ ರಾಶಿಯ ಜನರು ವೃತ್ತಿಯಲ್ಲಿ ಪ್ರಗತಿಯನ್ನು ಹೊಂದುವ ಸಾಧ್ಯತೆ ಇದೆ. ಶನಿದೇವನ ಆಶೀರ್ವಾದವೂ ನಿಮ್ಮ ಮೇಲಿದೆ. ಹೂಡಿಕೆಯ ಲಾಭವನ್ನು ನೀವು ಪಡೆಯುವಿರಿ.


ತುಲಾ ರಾಶಿ- ತುಲಾ ರಾಶಿಯವರಿಗೆ ದೀಪಾವಳಿ ಹಬ್ಬವು ಸಂತೋಷದಿಂದ ಕೂದಿರಲಿದೆ. ಗ್ರಹಗಳ ವಿಶೇಷ ಸಂಯೋಜನೆಯು ಈ ರಾಶಿ ಜನರಿಗೆ ಅತ್ಯಂತ ಶುಭಕರ ಸಾಬೀತಾಗುವ ಸಾಧ್ಯತೆ ಇದೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ನೀವು ಕೈ ಹಾಕುವ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ. ಹೊಸ ಉದ್ಯೋಗಾವಕಾಶಗಳು ಒದಗಿ ಬರಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.


ಇದನ್ನೂ ಓದಿ-Dhanatrayodashi 2022: ಧನತ್ರಯೋದಶಿಯ ದಿನ ಖರೀದಿಗಾಗಿ ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ಯೋಗಗಳು


ಮಕರ ರಾಶಿ- ಮಕರ ರಾಶಿಯವರ ಅದೃಷ್ಟಕ್ಕೆ ದೀಪಾವಳಿಯಂದು ನಿರ್ಮಾಣಗೊಳ್ಳುವ ಅಭಿಜೀತ್ ಮುಹೂರ್ತ ಮತ್ತು ವೈಧೃತಿ ಯೋಗವು ಸೂರ್ಯನ ಹೊಳಪು ನೀಡಲಿದೆ. ಉದ್ಯೋಗದಲ್ಲಿ ಬಡ್ತಿಯೊಂದಿಗೆ ಆದಾಯವನ್ನು ಹೆಚ್ಚಾಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಬಹಳ ದಿನಗಳಿಂದ ಸಿಲುಕಿಕೊಂಡಿರುವ ಹಣ ನಿಮ್ಮ ಬಳಿ ಮರಳಲಿದೆ. ಆಕಸ್ಮಿಕ ಧನಲಾಭದ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.


ಇದನ್ನೂ ಓದಿ-Surya Grahan 2022: ಒಂದೇ ಮಾಸದಲ್ಲಿ 2 ಗ್ರಹಣ, ಮಹಾಭಾರತ ಯುದ್ಧದಂತಹ ಸ್ಥಿತಿ ನಿರ್ಮಾಣ...ಎಚ್ಚರ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.