ಮರೆತು ಕೂಡ ತುಳಸಿಯ ಸುತ್ತ ಈ 5 ವಸ್ತುಗಳನ್ನು ಇಡಬೇಡಿ.. ಕೆಟ್ಟ ದಿನಗಳನ್ನು ಎದುರಿಸಬೇಕಾದೀತು, ಎಚ್ಚರ!
ಹಿಂದೂ ಧರ್ಮದಲ್ಲಿ, ತುಳಸಿಯನ್ನು ಲಕ್ಷ್ಮಿ ದೇವಿಯೆಂದು ಪೂಜಿಸಲಾಗುತ್ತದೆ. ತುಳಸಿ ನೆಲೆಸಿರುವ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ವಿಷ್ಣುವಿನ ಆರಾಧನೆಯಲ್ಲಿ ತುಳಸಿ ಎಲೆಯನ್ನು ಬಳಸುವುದು ಅತ್ಯಗತ್ಯವೆಂದು ಪರಿಗಣಿಸಲಾಗಿದೆ.
ನವದೆಹಲಿ: ಹಿಂದೂ ಧರ್ಮದಲ್ಲಿ (Hindu) ತುಳಸಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಅದರಲ್ಲಿ ಲಕ್ಷ್ಮಿ ದೇವಿ (Goddess Lakshmi) ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ಜನರು ಇದನ್ನು ತಮ್ಮ ಮನೆಗಳಲ್ಲಿ ನೆಡುತ್ತಾರೆ.
ಇದನ್ನೂ ಓದಿ: ಟ್ರೋಲ್ ಆಯ್ತು ಉಪೇಂದ್ರ ಹೊಸ ಡಿಪಿ! ಉಪ್ಪಿ ಹೊಸ ಅವತಾರ ಕಂಡು ದಂಗಾದ ಫ್ಯಾನ್ಸ್..
ಶಾಸ್ತ್ರಗಳ ಪ್ರಕಾರ, ತುಳಸಿ (Tulasi) ಗಿಡವು ಹಸಿರಾಗಿ ಉಳಿದಿರುವ ಮನೆಗಳಲ್ಲಿ ಸಂತೋಷದ ಜೊತೆಗೆ ಶಾಂತಿ ಮತ್ತು ಸಮೃದ್ಧಿ ಇರುತ್ತದೆ. ಶಾಸ್ತ್ರಗಳ ಪ್ರಕಾರ, ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಗಾಗಿ ತುಳಸಿಯ ಸುತ್ತಲೂ ಕೆಲವು ವಸ್ತುಗಳನ್ನು ಇಡಬೇಡಿ.
ತುಳಸಿಯ ಸುತ್ತಲೂ ಈ ವಸ್ತುಗಳನ್ನು ಇಡಬೇಡಿ:
ತುಳಸಿ ಗಿಡ ಇರುವ ಸ್ಥಳದ ಸುತ್ತ ಸಂಪೂರ್ಣ ಸ್ವಚ್ಛವಾಗಿರಬೇಕು. ತುಳಸಿ ಒಣಗುತ್ತಿದ್ದರೆ ಅಥವಾ ಬಾಡುತ್ತಿದ್ದರೆ ಅದು ಅಶುದ್ಧತೆಯ ಕಾರಣದಿಂದಾಗಿರಬಹುದು. ಇಂತಹ ಸಂದರ್ಭದಲ್ಲಿ ತುಳಸಿಯ ಸುತ್ತಮುತ್ತ ಪ್ರತಿದಿನ ಸ್ವಚ್ಛತೆ ಕಾಪಾಡಬೇಕು.
ತುಳಸಿಯ ಸುತ್ತ ಕಸ, ಪಾದರಕ್ಷೆ, ಪೊರಕೆ ಇರಬಾರದು. ಇದನ್ನು ಹೊರತುಪಡಿಸಿ, ತುಳಸಿ ಗಿಡದೊಂದಿಗೆ ಇತರ ಸಸ್ಯಗಳನ್ನು (Plants) ನೆಡಬಾರದು. ವಾಸ್ತವವಾಗಿ ತುಳಸಿ ಗಿಡ ನೆಟ್ಟ ಕುಂಡದಲ್ಲಿ ಇನ್ನೊಂದು ಗಿಡ ನೆಡುವುದು ಸರಿಯಲ್ಲ. ತುಳಸಿಯಲ್ಲಿ ಹಾಲು ಬೆರೆಸಿದ ನೀರನ್ನು ಅರ್ಪಿಸುವುದರಿಂದ ತುಳಸಿ ಹಸಿರಾಗಿ ಉಳಿಯುತ್ತದೆ.
ಅನೇಕ ಬಾರಿ ಜನರು ಸಂಜೆ ತುಳಸಿ ಬಳಿ ದೀಪವನ್ನು ಬೆಳಗಿಸುವಾಗ ನೀರನ್ನು ಸಹ ಹಾಕುತ್ತಾರೆ. ಸಂಜೆ ತುಳಸಿಗೆ ನೀರನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದಲ್ಲದೇ ತುಳಸಿ ಬಳಿ ನೀರು ತುಂಬಿದ ಪಾತ್ರೆ ಇಡಬಾರದು.
ಇದನ್ನೂ ಓದಿ: Corona Vaccine For Children: Novovax ಕರೋನಾ ಲಸಿಕೆಗೆ DCGI ಅನುಮೋದನೆ
ಸಾಮಾನ್ಯವಾಗಿ ಮಹಿಳೆಯರು ಸ್ನಾನದ ನಂತರ ಕೂದಲು (Hair) ಬಿಟ್ಟುಕೊಂಡು ತುಳಸಿಗೆ ನೀರು ಹಾಕುತ್ತಾರೆ. ತುಳಸಿಯು ಸದಾ ಸುಖವಾಗಿರಲು ದೇವರಿಂದ ವರವನ್ನು ಪಡೆದಿದ್ದಾಳೆ. ಆದ್ದರಿಂದ ತುಳಸಿಗೆ ನೀರನ್ನು ಅರ್ಪಿಸುವಾಗ ಮುಡಿಯನ್ನು ಕಟ್ಟಿ, ಸಿಂಧೂರವನ್ನು ಹಚ್ಚಿಕೊಂಡಿರಬೇಕು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.