Do not eat these fruits before bed: ಸಾಮಾನ್ಯವಾಗಿ ರಾತ್ರಿ ಊಟದ ನಂತರ ಹಣ್ಣು ಸೇವಿಸುವುದು ಸಾಮಾನ್ಯ. ಆದರೆ, ಕೆಲವು ಹಣ್ಣುಗಳನ್ನು ರಾತ್ರಿ ಮಲಗುವ ಮುನ್ನ ತಿಂದರೆ ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚು. ಇದು ಅಜೀರ್ಣ, ತೂಕ ಹೆಚ್ಚಾಗುವುದು ಮತ್ತು ನಿದ್ರೆಯ ಅಭಾವಕ್ಕೆ ಕಾರಣವಾಗುತ್ತದೆ. ಮಲಗುವ ಮುನ್ನ ತಪ್ಪಾಗಿಯೂ ಈ ಐದು ಹಣ್ಣುಗಳನ್ನು ತಿನ್ನಬೇಡಿ. 


COMMERCIAL BREAK
SCROLL TO CONTINUE READING

ಕಲ್ಲಂಗಡಿ
ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ನೀರಿನ ಅಂಶವಿರುವುದರಿಂದ ಇದು ಇದು ಮೂತ್ರದ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗಾಗಿ ಮಲಗುವ ಮುನ್ನ ಕಲ್ಲಂಗಡಿ ಹಣ್ಣನ್ನು ತಿಂದರೆ ಪದೇ ಪದೇ ವಾಶ್‌ರೂಮ್‌ಗೆ ಎದ್ದು ನಿದ್ರೆಗೆ ಭಂಗ ತರಬೇಕಾಗುತ್ತದೆ.


ಮಾವಿನ ಹಣ್ಣು
ಮಾವಿನ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಮತ್ತು ನಾರಿನಂಶ ಹೇರಳವಾಗಿದೆ. ಆದರೆ ಮಲಗುವ ಮುನ್ನ ಮಾವಿನ ಹಣ್ಣನ್ನು ತಿಂದ ಕೂಡಲೇ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ.


ಇದನ್ನೂ ಓದಿ: ಕೇವಲ ಒಂದು ಹೂ ಬಳಸಿ ನಿಮ್ಮ ಕೂದಲನ್ನು ಉದ್ದ ಹಾಗೂ ದಟ್ಟವಾಗಿಸಹುದು..!


ಸಿಟ್ರಸ್ ಹಣ್ಣು
ಕಿತ್ತಳೆ, ದ್ರಾಕ್ಷಿ ಮತ್ತು ನಿಂಬೆಹಣ್ಣುಗಳಲ್ಲಿ ಹೆಚ್ಚಿನ ಆಮ್ಲ ಅಂಶವಿದೆ. ಮಲಗುವ ಮುನ್ನ ಇವುಗಳನ್ನು ತಿನ್ನುವುದರಿಂದ ಆಸಿಡ್ ರಿಫ್ಲಕ್ಸ್ ಮತ್ತು ಎದೆಯುರಿ ಉಂಟಾಗುತ್ತದೆ. ಇದು ತೀವ್ರ ಅಸ್ವಸ್ಥತೆ ಮತ್ತು ನಿದ್ರಾಹೀನತೆಗೆ ಕಾರಣವಾಗುತ್ತದೆ.


ಅನಾನಸ್
ಅನಾನಸ್ ಜೀರ್ಣಕ್ರಿಯೆಗೆ ಸಹಾಯ ಮಾಡುವ ಬ್ರೊಮೆಲಿನ್ ಎಂಬ ಕಿಣ್ವವನ್ನು ಹೊಂದಿರದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಬ್ರೋಮೆಲಿನ್ ಹೊಟ್ಟೆಯಲ್ಲಿ ಆಮ್ಲಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಆಸಿಡ್ ರಿಫ್ಲಕ್ಸ್ ಮತ್ತು ಅಜೀರ್ಣಕ್ಕೆ ಕಾರಣವಾಗುತ್ತದೆ.