Surya Dev: ಭಾನುವಾರ ಸೂರ್ಯದೇವನಿಗೆ ಈ ರೀತಿ ಪೂಜಿಸಿದರೆ ಸಾಕಷ್ಟು ಸಂಪತ್ತು, ಗೌರವ ಲಭಿಸಲಿದೆ
ಜೀವನದಲ್ಲಿ ಯಶಸ್ಸು, ಸಂತೋಷ, ಸಮೃದ್ಧಿ ಮತ್ತು ಗೌರವವನ್ನು ಪಡೆಯುವುದು ಎಲ್ಲ ಜನರ ಬಯಕೆಯಾಗಿದೆ. ಇದಕ್ಕಾಗಿ ಜಾತಕದಲ್ಲಿ ಸೂರ್ಯನು ಬಲಶಾಲಿಯಾಗಿರುವುದು ಬಹಳ ಮುಖ್ಯ. ಸೂರ್ಯದೇವನನ್ನು ವಿಶೇಷ ರೀತಿಯಲ್ಲಿ ಪೂಜಿಸಿದರೆ ಅದೃಷ್ಟ ನಿಮ್ಮದಾಗುತ್ತದೆ.
ನವದೆಹಲಿ: ಜ್ಯೋತಿಷ್ಯದಲ್ಲಿ ಸೂರ್ಯ(Suryadev)ನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಜಾತಕದಲ್ಲಿ ಸೂರ್ಯನು ಬಲಶಾಲಿಯಾಗಿದ್ದರೆ, ವ್ಯಕ್ತಿಯು ತನ್ನ ಜೀವನದಲ್ಲಿ ಬಹಳಷ್ಟು ಸಂಪತ್ತು, ವೈಭವ, ಐಶ್ವರ್ಯ ಮತ್ತು ಗೌರವವನ್ನು ಪಡೆಯುತ್ತಾನೆ. ಆದರೆ ಸೂರ್ಯನು ದುರ್ಬಲನಾಗಿದ್ದರೆ, ವ್ಯಕ್ತಿಯ ಕಠಿಣ ಪರಿಶ್ರಮವೂ ಫಲ ನೀಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಸೂರ್ಯನಿಗೆ ಸಂಬಂಧಿಸಿದ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಇಂದು ನಾವು ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ಖಚಿತ ಪರಿಹಾರಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಭಾನುವಾರದಂದು ಈ ಪರಿಹಾರಗಳನ್ನು ಮಾಡುವುದರಿಂದ ಅದೃಷ್ಟ ನಿದ್ರೆಯಲ್ಲಿದ್ದರೂ ಎಚ್ಚರಗೊಳ್ಳುತ್ತದೆ.
ಭಾನುವಾರ ಈ ವಿಶೇಷ ಕೆಲಸ ಮಾಡಿ
ಅದೃಷ್ಟಕ್ಕಾಗಿ ಈ ಕೆಲಸ ಮಾಡಲು ಭಾನುವಾರ ಅತ್ಯಂತ ವಿಶೇಷ ದಿನ(Sunday Remedies)ವಾಗಿದೆ. ಈ ದಿನವನ್ನು ಸೂರ್ಯದೇವರಿಗೆ ಸಮರ್ಪಿಸಲಾಗಿದೆ. ಜಾತಕದಲ್ಲಿ ಸೂರ್ಯನನ್ನು ಬಲಪಡಿಸುವ ಕ್ರಮಗಳನ್ನು ಭಾನುವಾರದಂದು ಮಾಡಿದರೆ, ಸೂರ್ಯದೇವನು ಶೀಘ್ರದಲ್ಲೇ ಪ್ರಸನ್ನನಾಗುತ್ತಾನೆ ಮತ್ತು ಈ ಕ್ರಮಗಳ ಫಲಿತಾಂಶಗಳು ಹೆಚ್ಚು. ಈ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ವ್ಯಕ್ತಿಯು ವೃತ್ತಿ ಮತ್ತು ವ್ಯವಹಾರದಲ್ಲಿ ತ್ವರಿತ ಪ್ರಗತಿಯನ್ನು ಪಡೆಯುತ್ತಾನೆ. ಸಾಕಷ್ಟು ಗೌರವ ಮತ್ತು ಹಣವೂ ಸಿಗುತ್ತದೆ.
ಇದನ್ನೂ ಓದಿ: Astrology : ಹಣ ಇಡುವ ಸ್ಥಳದಲ್ಲಿ ಈ ಹೂವನ್ನು ಇರಿಸಿ : ಲಕ್ಷ್ಮಿದೇವಿ ಸಂಪತ್ತನ್ನು ಸುರಿಸುತ್ತಾಳೆ
ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸಿ
ಭಾನುವಾರದಂದು ಮುಂಜಾನೆ ಎದ್ದೇಳಿ, ಸಾಧ್ಯವಾದರೆ ಸೂರ್ಯೋದಯ(Suryadev Remedies)ಕ್ಕೆ ಮುಂಚಿತವಾಗಿ ಎದ್ದೇಳಲು ಪ್ರಯತ್ನಿಸಿ. ಇದಾದ ನಂತರ ಬೇಗ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. ಇದಕ್ಕಾಗಿ ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಕುಂಕುಮ, ಅಕ್ಷತೆ, ಕೆಂಪು ಹೂವುಗಳು ಮತ್ತು ಬೆಲ್ಲವನ್ನು ಸೇರಿಸಿ. ಈ ಎಲ್ಲಾ ವಿಷಯಗಳು ಸೂರ್ಯನಿಗೆ ಸಂಬಂಧಿಸಿವೆ. ಆದ್ದರಿಂದ ಅವುಗಳನ್ನು ಅರ್ಘ್ಯದಲ್ಲಿ ಬಳಸುವುದರಿಂದ ಸೂರ್ಯದೇವರು ಬೇಗ ಹೆಚ್ಚು ಫಲವನ್ನು ನೀಡುತ್ತಾನೆ. ಎರಡೂ ಕೈಗಳನ್ನು ಎತ್ತಿ ಸೂರ್ಯನಿಗೆ ನಮಿಸಿ ಪ್ರಾರ್ಥನೆ ಸಲ್ಲಿಸಬೇಕು. ನೀರಿನ ಹೊಳೆಯ ಮಧ್ಯದಿಂದ ಸೂರ್ಯನನ್ನು ನೋಡುವಂತೆ ಕೈಗಳ ಎತ್ತರವನ್ನು ಇರಿಸಿ. ಹಾಗೆಯೇ ಅರ್ಘ್ಯವನ್ನು ಅರ್ಪಿಸುವಾಗ ಅದರ ನೀರು ಕಾಲಿಗೆ ಬೀಳದಂತೆ ಮಡಕೆ ಅಥವಾ ಆಳವಾದ ಪಾತ್ರೆಯನ್ನು ನಿಮ್ಮ ಮುಂದೆ ಇಟ್ಟುಕೊಳ್ಳಿ.
ಉಪವಾಸ ಮತ್ತು ಪಠಣ ಕೂಡ ಬಹಳ ಪರಿಣಾಮಕಾರಿ
ಸೂರ್ಯನಿಗೆ ಅರ್ಧ್ಯ ಅರ್ಪಿಸುವುದರ ಹೊರತಾಗಿ ಪ್ರತಿ ಭಾನುವಾರ ಆದಿತ್ಯ ಹೃದಯ ಸ್ತೋತ್ರ(Surya Dosha)ವನ್ನು ಪಠಿಸಿ. ಇದರಿಂದ ಸೂರ್ಯದೇವನು ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ವಾಲ್ಮೀಕಿ ರಾಮಾಯಣದ ಪ್ರಕಾರ, ರಾವಣನನ್ನು ಕೊಲ್ಲುವ ಮೊದಲು ಭಗವಾನ್ ಶ್ರೀರಾಮನು ಸಹ ಯಶಸ್ಸನ್ನು ಸಾಧಿಸಲು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿದನು. ಇದಲ್ಲದೆ ಭಾನುವಾರದಂದು ಉಪವಾಸ ಮಾಡಲು ಪ್ರಯತ್ನಿಸಿ. ಅಲ್ಲದೆ ಈ ದಿನ ಉಪ್ಪನ್ನು ಸೇವಿಸಬೇಡಿ.
ಇದನ್ನೂ ಓದಿ: Angry Zodiac: ಈ ರಾಶಿಗಳ ಯುವತಿಯರ ಕೋಪ ಮೂಗಿನ ತುದಿಯಲ್ಲಿರುತ್ತದೆ!
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.