ಬೆಂಗಳೂರು : ಜ್ಯೋತಿಷ್ಯದಲ್ಲಿ, ಶನಿದೇವನನ್ನು ನ್ಯಾಯದ ದೇವರು, ಕರ್ಮ ಫಲದಾತ ಎಂದೆಲ್ಲಾ ಕರೆಯುತ್ತಾರೆ. ವ್ಯಕ್ತಿಯ ಕಾರ್ಯಗಳಿಗೆ ಅನುಗುಣವಾಗಿ ಶನಿದೇವ ಫಲ ನೀಡುತ್ತಾನೆ. ಒಳ್ಳೆಯ ಕೆಲಸ ಮಾಡುವವರಿಗೆ ಒಳ್ಳೆಯ ಫಲ, ಕೆಟ್ಟ ಕೆಲಸ ಮಾಡುವವರಿಗೆ ಕೆಟ್ಟ ಫಲ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಯಾವ ವ್ಯಕ್ತಿಯ ಜೀವನದಲ್ಲಿ ಶನಿ ದೇವನ ಆಶೀರ್ವಾದ ಇರುತ್ತದೆಯೋ ಕೆಲಸ ಮಾಡುವ  ವ್ಯಕ್ತಿಗೆ ಜೀವನದಲ್ಲಿ ಯಾವ ವಸ್ತುವಿಗೂ ಕೊರತೆ ಇರುವುದಿಲ್ಲ. ಇನ್ನು ಯಾರ ಮೇಲೆ ಶನಿದೇವನ ವಕ್ರದೃಷ್ಟಿ ಬೀಳುತ್ತದೆಯೋ ಆ ವ್ಯಕ್ತಿ ಪಡಬಾರದ ಪಾಡು ಅನುಭವಿಸುತ್ತಾನೆ. ಶನಿ ದೇವನನ್ನು ಮೆಚ್ಚಿಸಲು ಜನರು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.


COMMERCIAL BREAK
SCROLL TO CONTINUE READING

ಹಿಂದೂ ಕ್ಯಾಲೆಂಡರ್ ಪ್ರಕಾರ, ಶನಿ ಜಯಂತಿಯನ್ನು ಪ್ರತಿ ವರ್ಷ ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ವರ್ಷ 30 ಮೇ 2022, ಸೋಮವಾರ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಯಾರ ಜಾತಕದಲ್ಲಿ ಶನಿ ಧೈಯ್ಯಾ ಮತ್ತು ಶನಿ ಸಾಡೇ ಸಾತಿ ದೆಸೆ ನಡೆಯುತ್ತಿದೆಯೋ ಆ ಜನರು ಈ ದಿನ ಶನಿ ದೇವರನ್ನು ಮೆಚ್ಚಿಸಲು ಕೆಲವು ಕ್ರಮಗಳನ್ನು ಅನುಸರಿಸಬೇಕು. 


ಇದನ್ನೂ ಓದಿ : June 2022 Planetary Changes: ಜೂನ್‌ನಲ್ಲಿ 5 ಗ್ರಹಗಳ ರಾಶಿ ಪರಿವರ್ತನೆ, ಈ ರಾಶಿಯವರಿಗೆ ಪ್ರಗತಿ


ಸದ್ಯ ಶನಿದೇವನು ಕುಂಭ ರಾಶಿಯಲ್ಲಿದ್ದಾನೆ. ಶನಿಯ ಸಾಡೇ ಸಾತಿ ಪ್ರಭಾವವು ಕುಂಭ, ಮೀನ, ಮಕರ ರಾಶಿಯವರ ಮೇಲಿರುತ್ತದೆ. ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿ ಧೈಯ್ಯಾ ನಡೆಯುತ್ತಿದೆ. ಈ ವರ್ಷ, ಶನಿ ಜಯಂತಿಯಂದು, ಶನಿದೇವನು ತನ್ನದೇ ಆದ ಕುಂಭ ರಾಶಿಯಲ್ಲಿದ್ದಾನೆ. ಸುಮಾರು 30 ವರ್ಷಗಳ ನಂತರ ಗ್ರಹಗಳ ಈ ಸ್ಥಾನವು ರೂಪುಗೊಳ್ಳುತ್ತಿದೆ. ಹೀಗಿರುವಾಗ, ಶನಿ ದೇವನನ್ನು ಮೆಚ್ಚಿಸಲು ಕೆಳಗೆ ತಿಳಿಸಲಾದ ಪರಿಹಾರ ಕಾರ್ಯಗಳನ್ನು ಅನುಸರಿಸಿದರೆ ಶುಭ ಫಲ ಸಿಗುತ್ತದೆ. 


1. ಶನಿ ಜಯಂತಿಯ ದಿನ ಶನಿದೇವನನ್ನು ಪೂಜಿಸುವಾಗ 'ಓಂ ಶನಿಶ್ಚರಾಯ ನಮಃ' ಎಂಬ ಮಂತ್ರವನ್ನು ಪಠಿಸಬೇಕು ಮತ್ತು ಶನಿ ಚಾಲೀಸವನ್ನು ಪಠಿಸಬೇಕು.
2. ಈ ದಿನ, ಕಂಚಿನ ಬಟ್ಟಲಿನಲ್ಲಿ ಎಳ್ಳೆಣ್ಣೆ ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಿ. ಅದರ ನಂತರ ಅದನ್ನು ಬಟ್ಟಲಿಣ ಸಮೇತ ಬಡ ಅಥವಾ ನಿರ್ಗತಿಕರಿಗೆ ದಾನ ಮಾಡಿ. ಅಥವಾ ಶನಿ ದೇವಸ್ಥಾನದಲ್ಲಿ ಇರಿಸಿ.
3. ಶನಿ ಜಯಂತಿಯಂದು ಶನಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ. ಅದರ ನಂತರ ಶನಿದೇವನಿಗೆ ಎಳ್ಳೆಣ್ಣೆ, ಕಪ್ಪು ಎಳ್ಳು ಮತ್ತು ಕಪ್ಪು ಉಂಡೆಯನ್ನು ಅರ್ಪಿಸಿ.
4. ಶನಿ ಜಯಂತಿಯ ದಿನದಂದು, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಯಾವುದೇ ಬಡ ಅಥವಾ ನಿರ್ಗತಿಕರಿಗೆ ಸಹಾಯ ಮಾಡಿ.
5. ಶನಿ ಜಯಂತಿಯಂದು ಹಣ, ಕಪ್ಪು ಬಟ್ಟೆ, ಎಣ್ಣೆ, ಅನ್ನ, ಎಳ್ಳು ಮತ್ತು ಉಂಡೆ ಇತ್ಯಾದಿಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.


ಇದನ್ನೂ ಓದಿ : ಇಂದಿನಿಂದ ಬೆಳಗಲಿದೆ ಈ ನಾಲ್ಕು ರಾಶಿಯವರ ಅದೃಷ್ಟ.. ! ಚಂದ್ರ ಕರುಣಿಸಲಿದ್ದಾನೆ ಭಾಗ್ಯ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.