ಚಿಕ್ಕ ವಯಸ್ಸಿನಲ್ಲಿ ನಿಮ್ಮ ಮುಖದಲ್ಲಿ ಸುಕ್ಕುಗಳಿವೆಯೇ...? ಡೋಂಟ್ ವರಿ,ಇಲ್ಲಿವೆ ಟಿಪ್ಸ್...
Skin Care Tips: ನಿಮ್ಮ ಮುಖದ ಮೇಲಿನ ಸುಕ್ಕುಗಳು ಮತ್ತು ಗೆರೆಗಳನ್ನು ನೀವು ಹೋಗಲಾಡಿಸಬೇಕೆ? ಹಾಗಾದರೆ ಯೋಚನೆ ಬಿಡಿ. ನಿಮ್ಮ ಚಿಂತೆಯನ್ನ ದೂರ ಮಾಡೋಕೆ ನಮ್ಮ ಬಳಿ ಇದೆ ಕೆಲ ಟಿಪ್ಸ್
ಸೂರ್ಯನ ಬೆಳಕಿನಿಂದ ತ್ವಚೆಯ ರಕ್ಷಣೆ:
ಚರ್ಮವು ನಿರಂತರವಾಗಿ ಬಿಸಿಲಿನಲ್ಲಿ ಇದ್ದು ಹೆಚ್ಚು ಶಾಖಕ್ಕೆ ಒಡ್ಡಿಕೊಂಡರೆ ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಮನೆಯಿಂದ ಹೊರಗೆ ಹೋಗುವಾಗ ಟೋಪಿ, ಸಂಪೂರ್ಣ ಚರ್ಮವನ್ನು ಮುಚ್ಚುವಂತಹ ಬಟ್ಟೆ ಮತ್ತು ಬೂಟುಗಳನ್ನು ಧರಿಸಿ. ಈ ಮೂಲಕ ನೀವು ಸೂರ್ಯನ ಕಿರಣಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಇದರ ಮೂಲಕ ನಿಮ್ಮ ಚರ್ಮವನ್ನ ಕಾಪಾಡಿಕೊಳ್ಳಬಹುದು.
ಸಾಕಷ್ಟು ನೀರು ಕುಡಿಯಿರಿ:
ನಿಮ್ಮ ದೇಹಕ್ಕೆ ಸಾಕಷ್ಟು ನೀರು ಅಥವಾ ಆರೋಗ್ಯಕರ ಪಾನೀಯಗಳು ತುಂಬಾ ಮುಖ್ಯ ಇವುಗಳ ಸೇವನೆಯಿಂದ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಬಹುದು. ಇದು ಅನೇಕ ಚರ್ಮದ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬೋಳು ತಲೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಚಿಕ್ಕ ಉಪಾಯ ಟ್ರೈ ಮಾಡಿ ನೋಡಿ!
ಆರೋಗ್ಯಕರ ಆಹಾರ ಪದ್ಧತಿ:
ನಿಮ್ಮ ಆಹಾರವು ಯಾವಾಗಲೂ ಸಮತೋಲಿತವಾಗಿರಬೇಕು. ಅಂದರೆ ನೀವು ತಿನ್ನುವ ಆಹಾರವು ಪ್ರೋಟೀನ್, ಜೀವಸತ್ವಗಳು, ಖನಿಜಗಳು, ಕಾರ್ಬೋಹೈಡ್ರೇಟ್ಗಳು, ಹಣ್ಣುಗಳು, ತರಕಾರಿಗಳು, ಹಸಿರು ತರಕಾರಿಗಳು, ಕೋಳಿ ಮೊಟ್ಟೆಗಳು, ನೇರ ಮಾಂಸಗಳನ್ನ ಒಳಗೊಂಡಿರಬೇಕು.
ಧೂಮಪಾನವನ್ನು ತೊರೆಯಿರಿ:
ಧೂಮಪಾನವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ನಿಮ್ಮ ಚರ್ಮವನ್ನು ಸೌಂದರ್ಯವನ್ನ ಮಂಕಾಗಿಸುತ್ತದೆ. ಹಾಗಾಗಿ ಧೂಮಪಾನದಿಂದ ದೂರ ಉಳಿಯುವುದರಿಂದ ನಿಮ್ಮ ಚರ್ಮವನ್ನ ರಕ್ಷಿಸಿಕೊಳ್ಳಬಹುದು.
ಇದನ್ನೂ ಓದಿ: ಕಂತೆ-ಕಂತೆ ಕೂದಲುದುರಿ ಬೋಳು ತಲೆ ಸಮಸ್ಯೆ ಎದುರಾಗುವ ಮುನ್ನ ತೆಂಗಿನೆಣ್ಣೆಯಲ್ಲಿ ಈ ಒಂದು ವಸ್ತು ಬೆರೆಸಿ ಕೂದಲಿಗೆ ಅನ್ವಯಿಸಿ!
ಚರ್ಮವನ್ನು ತೇವಗೊಳಿಸಿ:
ವಿಶೇಷವಾಗಿ ಚಳಿಗಾಲ ಮತ್ತು ಬೇಸಿಗೆಯಲ್ಲಿ ನಿಮ್ಮ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಪ್ರತಿದಿನ ನಿಯಮಿತವಾಗಿ ನಿಮ್ಮ ಚರ್ಮವನ್ನು ತೇವಗೊಳಿಸುವುದರಿಂದ ಬಿರುಕುಗಳು ಮತ್ತು ಸುಕ್ಕುಗಳನ್ನು ತಡೆಯಬಹುದು. ಇದರಿಂದ ನಿಮ್ಮ ಚರ್ಮವು ದೀರ್ಘಕಾಲದವರೆಗೆ ಆರೋಗ್ಯಕರವಾಗಿರುತ್ತದೆ.
ಮುಖದ ವ್ಯಾಯಾಮ ಅತ್ಯಗತ್ಯ:
ನಿಮ್ಮ ಮುಖವು ಸುಂದರವಾಗಿ ಕಾಣಬೇಕಾದರೆ, ನೀವು ವ್ಯಾಯಾಮಗಳನ್ನು ಮಾಡಬೇಕು. ಇದು ಮುಖದ ತ್ವಚೆಯಲ್ಲಿ ರಕ್ತ ಸಂಚಾರವನ್ನು ಸುಧಾರಿಸುವುದಲ್ಲದೆ ಮುಖದಲ್ಲಿನ ಜೀವಕೋಶಗಳಿಗೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಿಂದ ಚರ್ಮದ ಸಮಸ್ಯೆ ದೂರವಾಗುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ತೂಕ ಇಳಿಕೆಗೆ ಇಲ್ಲಿವೆ 3 ಫ್ಯಾಟ್ ಬರ್ನಿಂಗ್ ಪಾನೀಯಗಳು, ಇಂದೇ ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿ!
ಉತ್ತಮ ನಿದ್ರೆ ಅತ್ಯಗತ್ಯ:
ರಾತ್ರಿ ಚೆನ್ನಾಗಿ ನಿದ್ದೆ ಮಾಡುವವರು ಸುಂದರವಾಗಿರುತ್ತಾರೆ ಎಂದು ನಂಬಲಾಗಿದೆ. ಏಕೆಂದರೆ ತ್ವಚೆಯ ಆರೋಗ್ಯಕ್ಕೂ ಸಾಕಷ್ಟು ನಿದ್ರೆಯ ಅಗತ್ಯವಿರುತ್ತದೆ. ಆದ್ದರಿಂದ ಪ್ರತಿ ರಾತ್ರಿ 8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡುವುದರಿಂದ ನಿಮ್ಮ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.