ನವದೆಹಲಿ : ಲಕ್ಷ್ಮಿ ದೇವಿಯ ಕೃಪೆಯಿಂದ ವ್ಯಕ್ತಿಯ ಜೀವನದಲ್ಲಿ ಸಂಪತ್ತು ಮತ್ತು ಆಸ್ತಿ ಸಿಗುತ್ತದೆ. ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಜನರು ಅನೇಕ ಕ್ರಮಗಳನ್ನು ಅನುಸರಿಸುತ್ತಾರೆ.  ಲಕ್ಷ್ಮಿ ದೇವಿಯನ್ನು (Godess Lakshmi) ಪೂಜಿಸುತ್ತಾರೆ. ಇಷ್ಟೆಲ್ಲಾ ಮಾಡಿಯೂ ಕೆಲವು ತಪ್ಪುಗಳನ್ನು ಮಾಡಿಯೇ ಬಿಡುತ್ತಾರೆ. ಈ ತಪ್ಪುಗಳಿಂದ ಧನಾಗಮನ  ನಿಲ್ಲುತ್ತದೆ. ಲಕ್ಷ್ಮಿ ದೇವಿಯನ್ನು ಪೂಜಿಸುವುದರ ಜೊತೆಗೆ, ಹಣಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಿಳಿದುಕೊಳ್ಳುವುದು ಕೂಡಾ ಮುಖ್ಯ. ಅಂತಹ ಕೆಲವು ವಿಧಾನಗಳನ್ನು ಇಂದು ನಾವು ಹೇಳಲಿದ್ದೇವೆ..


COMMERCIAL BREAK
SCROLL TO CONTINUE READING

ನೋಟು ಮಡಚಿ ಪರ್ಸಿನಲ್ಲಿಡಬಾರದು..!
ಅನೇಕ ಜನರಿಗೆ ನೋಟುಗಳನ್ನು ಮಡಚಿ ಪರ್ಸ್‌ನಲ್ಲಿ ತುಂಬಿಸಿಡುವ ಅಭ್ಯಾಸವಿರುತ್ತದೆ. ಹಣ (Money) ಬರುವುದನ್ನು ನಿಲ್ಲಿಸಲು ಮತ್ತು ಆರ್ಥಿಕ ನಷ್ಟವನ್ನುಂಟುಮಾಡಲು ಈ ಒಂದು ತಪ್ಪು ಸಾಕಂತೆ. ನೋಟು ಗಳನ್ನು ಕೂಡಾ ಪೂಜೆಗೆ ಇಡುವ ಕ್ರಮವಿದೆ. ಯಾಕಂದರೆ ಅದು ಲಕ್ಷ್ಮೀ ದೇವಿಗೆ ಸಂಬಂಧಪಟ್ಟಂತದ್ದು. ಹಾಗಾಗಿ ಲಕ್ಷ್ಮೀ ದೇವಿಗೆ (Godess Lakshmi) ಸಂಬಂಧಿಸಿದ ನೋಟುಗಳನ್ನು ಸರಿಯಾಗಿ ಇಟ್ಟುಕೊಳ್ಳದಿದ್ದರೆ  ಮಹಾಲಕ್ಷ್ಮಿಯ  ಅನುಗ್ರಹ ಸಾಧ್ಯವಿಲ್ಲ. .  


ಇದನ್ನೂ ಓದಿ : Importance Of Decorating Home: ವಿಶೇಷ ಸಂದರ್ಭಗಳಲ್ಲಿ ಮನೆಯನ್ನು ಅಲಂಕರಿಸುವುದರ ಹಿಂದಿನ ಮಹತ್ವವಿದು


ಎಂಜಲು ಅಂಟಿಸಿ ನೋಟು ಎಣಿಸಲೇ ಬಾರದು..!
ಬಹಳಷ್ಟು ಜನರಿಗೆ ನೊಟುಗಳನ್ನು ಎಣಿಸುವಾಗ ನೋಟುಗಳಿಗೆ ಎಂಜಲು  ತಾಗಿಸುವ ಅಭ್ಯಾಸವಿರುತ್ತದೆ. ಹೀಗೆ ಮಾಡಲೇಬಾರದು. ಹೀಗೆ ಮಾಡಿದರೆ ಸಂಪತ್ತಿಗೆ ಅವಮಾನ ಮಾಡಿದಂತೆ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯ (Lakshmi Devi) ಕೃಪೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಮನೆಯಲ್ಲಿ ಬಡತನ ನೆಲೆಯಾಗಬಹುದು.  ಅಲ್ಲದೆ ನೀವು ಎಂಜಲು ತಾಗಿಸಿದ ಒಂದು ನೋಟು ಅನೇಕ ಜನರ ಕೈ ಸೇರುತ್ತದೆ.  ಇದು ಕರೋನಾ (Coronavirus)ಮುಂತಾದ ಮಾರಕ ರೋಗ ಹರಡಲು ಕಾರಣವಾಗಬಹುದು. 


ನಿಮ್ಮ ಪರ್ಸ್ ಹೀಗಿದೆಯಾ..?
ಇನ್ನು ಹಣ ಡುವ ಜಾಗದಲ್ಲಿ ಬಿಲ್‌ಗಳು, ನಗದು ವಹಿವಾಟಿನ ಸ್ಲಿಪ್‌ಗಳು, ಬೇಡದ ಪೇಪರ್ ಗಳನ್ನು ತುಂಬಿಸಿ ಇಡಬಾರದು. ಕೆಲವರ ಪರ್ಸ್ ನಲ್ಲಂತೂ ಈ ರೀತಿಯ ಪೇಪರ್ ಗಳು ತುಂಬಿಕೊಂಡಿರುತ್ತವೆ, ಇಂಥಹ ಬೇಡದ ಪೇಪರ್‌ಗಳನ್ನು ಪರ್ಸ್‌ನಲ್ಲಿ ಅಥವಾ ಹಣವನ್ನು ಇಟ್ಟುಕೊಳ್ಳುವ ಸ್ಥಳದಲ್ಲಿ ಇಡಬೇಡಿ. ಅವುಗಳನ್ನು ಪರ್ಸ್‌ನಲ್ಲಿ ಇಡುವುದು ವಾಸ್ತು ದೃಷ್ಟಿಕೋನದಿಂದ (Vastu dosha) ತಪ್ಪಾಗುತ್ತದೆ. 


ಇದನ್ನೂ ಓದಿ : Astrology: ಈ ನಾಲ್ಕು ರಾಶಿಯ ಜನರ ಮೇಲೆ ಶನಿ-ಮಂಗಳರ ವಿಶೇಷ ಕೃಪೆ, ಇವರು ಭಾಗ್ಯಶಾಲಿಗಳಾಗಿರುತ್ತಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.