Mukesh Ambani lifestyle : ಮುಖೇಶ್ ಅಂಬಾನಿ ಯೋಗ ಮತ್ತು ಧ್ಯಾನದಿಂದ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಸುಮಾರು 5:30 ಕ್ಕೆ ಎಚ್ಚರಗೊಂಡು ಯೋಗ ಮತ್ತು ಧ್ಯಾನ ಮಾಡುತ್ತಾರೆ. ಸೂರ್ಯ ನಮಸ್ಕಾರ ಮತ್ತು ವಾಕ್‌ ಮಾಡಿದ ನಂತರ ಕೆಲವೊತ್ತು ಧ್ಯಾನ ಮಾಡ್ತಾರೆ.. ಬ್ಯುಸಿ ಸಮಯದ ನುಡವೆಯೂ ಸಹ ಬೆಳಗಿನ ದಿನಚರಿಯನ್ನು ಎಂದಿಗೂ ಬಿಟ್ಟುಬಿಡುವುದಿಲ್ಲ.. ಏಕೆಂದರೆ ಆರೋಗ್ಯಕ ಬಹಳ ಮುಖ್ಯ ಎನ್ನುವುದು ಅವರ ವಿಚಾರ.. ಈ ಅಭ್ಯಾಸಗಳನ್ನು ತಮ್ಮ ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ, ಮುಖೇಶ್ ಅಂಬಾನಿ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಆದ್ಯತೆ ನೀಡುತ್ತಾರೆ.


COMMERCIAL BREAK
SCROLL TO CONTINUE READING

ರಿಲಯನ್ಸ್ ಇಂಡಸ್ಟ್ರೀಸ್ (RIL) ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ಬೆಳಗಿನ ಉಪಹಾರಕ್ಕೆ ತಾಜಾ ಹಣ್ಣುಗಳು, ಜ್ಯೂಸ್ ಮತ್ತು ಇಡ್ಲಿ-ಸಾಂಬಾರ್ ಅನ್ನು ತಿನ್ನಲು ಬಯಸುತ್ತಾರೆ. ಸಂದರ್ಶನವೊಂದರಲ್ಲಿ, ನೀತಾ ಅಂಬಾನಿ ಒಮ್ಮೆ ಮುಖೇಶ್ ಅಂಬಾನಿ ಶಿಸ್ತುಬದ್ಧ ಆಹಾರ ಪದ್ಧತಿಯನ್ನು ನಿರ್ವಹಿಸಲು ಇಷ್ಟಪಡುತ್ತಾರೆ ಮತ್ತು ವಾರಕ್ಕೊಮ್ಮೆ ಮಾತ್ರ ಊಟಕ್ಕೆ ಹೊರಗೆ ಹೋಗುತ್ತಾರೆ ಎಂದು ಹೇಳಿಕೊಂಡಿದ್ದರು. ಅವರು ಇಡೀ ಕುಟುಂಬದೊಂದಿಗೆ ಮನೆಯಲ್ಲಿ ಬೇಯಿಸಿದ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ ಎಂದು ತಿಳಿಸಿದ್ದರು.


ಇದನ್ನೂ ಓದಿ:ಕೂದಲಿಗೆ ವರದಾನ ʼಈʼ ನೀರು! ವಾರಕ್ಕೆ ಎರಡು ಬಾರಿ ಬಳಸಿದ್ರೆ ದಟ್ಟವಾದ.. ಗಾಢಕಪ್ಪು ಕೇಶರಾಶಿ ನಿಮ್ಮದಾಗುತ್ತೆ!!


ಮುಖೇಶ್ ಅಂಬಾನಿಯವರ ಆಹಾರಕ್ರಮ ಒಂದೇ ರೀತಿಯಲ್ಲಿರುತ್ತದೆ, ಸಾಂಪ್ರದಾಯಿಕ ಭಾರತೀಯ ಭಕ್ಷ್ಯಗಳನ್ನು ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಒಳಗೊಂಡಿರುತ್ತದೆ. ವರದಿಗಳ ಪ್ರಕಾರ ಅವರು ದಾಲ್, ಸಬ್ಜಿ, ಅನ್ನ, ಸೂಪ್ ಮತ್ತು ಸಲಾಡ್‌ಗಳನ್ನು ಒಳಗೊಂಡ ಗುಜರಾತಿ ಶೈಲಿಯ ಊಟ ಮಾಡ್ತಾರೆ. ಹೆಚ್ಚಾಗಿ ಆರೋಗ್ಯಕರ ಜೀವನಶೈಲಿ ಕಡೆ ಹೆಚ್ಚು ಗಮನ ಹರಿಸುತ್ತಾರೆ.. ಹೊರಗಿನ ಫುಡ್‌ ಹೆಚ್ಚು ತಿನ್ನಲ್ಲ.. 


ಮುಖೇಶ್ ಅಂಬಾನಿ ಮದ್ಯಪಾನದಿಂದ ದೂರ.. ವಿವಿಧ ಮೂಲಗಳ ಪ್ರಕಾರ, ಬಹುಕೋಟಿ ವ್ಯವಹಾರದ ಉದ್ಯಮಿ ಸಾಮಾಜಿಕ ಕಾರ್ಯಕ್ರಮಗಳು ಅಥವಾ ಸಾರ್ವಜನಿಕ ಸಮಾರಂಭಗಳಲ್ಲಿಯೂ ಸಹ ಎಂದಿಗೂ ಮದ್ಯ ಸೇವಿಸುವುದಿಲ್ಲ. ಜಂಕ್ ಫುಡ್ ಮತ್ತು ಆಲ್ಕೋಹಾಲ್ ಮುಟ್ಟುವುದೇ ಇಲ್ಲವಂತೆ..


ಇದನ್ನೂ ಓದಿ: ಡ್ಯಾಮೇಜ್ ಕೂದಲನ್ನು ಸರಿಪಡಿಸಿ ಸುಂದರ ಬ್ರೌನ್ ಹೇರ್ ಬೇಕೆ? ಶಾಂಪೂವಿನಲ್ಲಿ ಇವನ್ನು ಬೆರೆಸಿ ಹಚ್ಚಿ


ಅನೇಕ ಪಾರ್ಟಿಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಜರಾಗುವ ಮುಖೇಶ್ ಅಂಬಾನಿ ಸಸ್ಯಾಹಾರಿ ಆಹಾರಕ್ಕೆ ಬದ್ಧರಾಗಿದ್ದಾರೆ. ವರದಿಗಳ ಪ್ರಕಾರ ಜಂಕ್ ಫುಡ್ ಸೇವನೆಯಿಂದ ದೂರವಿರುತ್ತಾರೆ ಎನ್ನಲಾಗಿದೆ. ಯಾವುದೇ ರೀತಿಯ ಅನಾರೋಗ್ಯಕರ ತಿಂಡಿಗಳನ್ನು ಸೇವಿಸುವುದಿಲ್ಲ.. 67 ನೇ ವಯಸ್ಸಿನಲ್ಲಿ ದೃಢವಾದ ಶಿಸ್ತು ಬದ್ದ ಜೀವನ ನಡೆಸುತ್ತಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.