Hair Care Tips: ಸುಂದರವಾದ ಉದ್ದ ಕೂದಲು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಸುಂದರವಾದ ಕೂದಲು ಪ್ರತಿಯೊಬ್ಬರನ್ನೂ ನಮ್ಮತ್ತ ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಬಿಡುವಿಲ್ಲದ ಜೀವನ ಶೈಲಿಯಲ್ಲಿ ಕೂದಲ ಕಾಳಜಿ ವಹಿಸುವುದು ಕೂಡ ದೊಡ್ಡ ಸವಾಲೇ ಸರಿ. ಸಾಮಾನ್ಯವಾಗಿ ಒದ್ದೆ ಕೂದಲನ್ನು ಬಾಚಬಾರದು, ಹೀಗೆ ಮಾಡುವುದರಿಂದ ಕೂದಲು ಉದುರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಕೆಲವರು ಬ್ಲೋ ಡ್ರೈ ಬಳಸುತ್ತಾರೆ. ಇನ್ನೂ ಕೆಲವರು ಬೇರೆ ಬೇರೆ ಹೇರ್‌ಸ್ಟೈಲ್‌ ಮಾಡಲು ಇದನ್ನು ಬಳಸುತ್ತಾರೆ. ಕಾರಣ ಏನೇ ಇರಲಿ ನೀವು  ಬ್ಲೋ ಡ್ರೈ ಬಳಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ಬಹಳ ಮುಖ್ಯ. 


COMMERCIAL BREAK
SCROLL TO CONTINUE READING

ಹೌದು, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮನೆಯಲ್ಲಿ ಬ್ಲೋ ಡ್ರೈ ಬಳಸುವುದು ಸರ್ವೇ ಸಾಮಾನ್ಯ. ಆದರೆ, ಈ ಸಮಯದಲ್ಲಿ ಕೂದಲಿನ ಸುರಕ್ಷತೆಯ ದೃಷ್ಟಿಯಿಂದ ಕೆಲವು ವಿಷಯಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಿ. ಇಲ್ಲದಿದ್ದರೆ, ಅದು ನಿಮ್ಮ ಕೂದಲನ್ನು ಆಕರ್ಷಕವಾಗಿ ಮಾಡುವುದರ ಬದಲಿಗೆ ಕೂದಲನ್ನು ಹಾನಿಗೊಳಿಸಬಹುದು. 


ಕೂದಲನ್ನು ಒಣಗಿಸಲು ಬ್ಲೋ ಡ್ರೈ ಬಳಸುವಾಗ ಈ ವಿಷಯಗಳನ್ನು ನೆನಪಿಡಿ: 
* ಆರ್ದ್ರ ಕೂದಲು:

ಕೂದಲು ಒಣಗಿಸಲು ಬ್ಲೋ ಡ್ರೈ ಪ್ರಯೋಜನಕಾರಿ. ಆದರೂ, ತುಂಬಾ ಒದ್ದೆ ಕೂದಲಿಗೆ  ಬ್ಲೋ ಡ್ರೈ ಮಾಡುವ ಬದಲಿಗೆ ಕೂದಲಿನ ನೀರು ಸೋರಿದ ಬಳಿಕ  ಕೂದಲನ್ನು ಸ್ವಲ್ಪ ಒಣಗಿಸಿ ನಂತರ ಬಾಚಿಕೊಳ್ಳುವಾಗ ಬ್ಲೋ ಡ್ರೈ ಮಾಡಿ. ಇದರಿಂದ ಕೂಡಲ ಹಾನಿಯನ್ನು ಕಡಿಮೆ ಮಾಡಬಹುದು. 


ಇದನ್ನೂ ಓದಿ- ಕೂದಲು ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ ಈ ನೀರು ! ಒಮ್ಮೆ ಬಳಸಿ ನೋಡಿ


* ಕೂದಲನ್ನು ಅತಿಯಾಗಿ ಒಣಗಿಸುವುದು: 
ನೀವು ಬ್ಲೋ ಡ್ರೈ ಬಳಸಿ ಕೂದಲನ್ನು ಅತಿಯಾಗಿ ಒಣಗಿಸುವ ತಪ್ಪನ್ನು ಎಂದಿಗೂ ಮಾಡಬೇಡಿ. ಈ ರೀತಿ ಮಾಡುವುದರಿಂದ ಕೂದಲು ಹೆಚ್ಚು ಹಾನಿಗೊಳಗಾಗುತ್ತದೆ. ಮಾತ್ರವಲ್ಲ, ಕೂದಲಿನ ಹೊಳಪು ಕಡಿಮೆ ಆಗುತ್ತದೆ. 


* ಬ್ಲೋ-ಡ್ರೈಯಿಂಗ್ ಮಾಡುವಾಗ ಕೂದಲನ್ನು ಕೆಳಕ್ಕೆ ಎಳೆಯಬೇಡಿ. 
ಬ್ಲೋ-ಡ್ರೈಯಿಂಗ್ ಮಾಡುವಾಗ ಕೂದಲನ್ನು ಕೆಳಕ್ಕೆ ಎಳೆಯಬೇಡಿ ಇದರಿಂದ ಕೂದಲು ಹಾನಿಗೊಳಗಾಗುತ್ತದೆ. 


* ಬ್ಲೋ ಡ್ರೈ ಮಾಡುವಾಗ ಕೂದಲನ್ನು ಭಾಗ ಮಾಡಿಕೊಳ್ಳಿ: 
ನಾವು ಕೂದಲಿನ ಸಂಪೂರ್ಣ ಬಂಡಲ್ ಅನ್ನು ವಿಭಜಿಸದೆ ಒಣಗಿಸುತ್ತೇವೆ. ಇದರಿಂದ ಕೂದಲು ಸರಿಯಾಗಿ ಒಣಗುವುದಿಲ್ಲ. ಜೊತೆಗೆ ಇದು ಸಿಕ್ಕುಗಳು ಮತ್ತು ಸುಕ್ಕುಗಟ್ಟಿದ ಕೂದಲುಗಳಿಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಕೂದಲನ್ನು ಒಣಗಿಸಲು ಪ್ರಾರಂಭಿಸುವ ಮೊದಲು ನಿಮ್ಮ ಕೂದಲನ್ನು ಭಾಗಿಸಿ , ಅವುಗಳನ್ನು ಸಮವಾಗಿ ಭಾಗಿಸಿ ಇದರಿಂದ ನಿಮ್ಮ ಕೂದಲು ವೇಗವಾಗಿ ಮತ್ತು ಸುಲಭವಾಗಿ ಒಣಗುತ್ತದೆ.


ಇದನ್ನೂ ಓದಿ- ಬಿಳಿ ಕೂದಲುಗಳು ತಕ್ಷಣ ನೈಸರ್ಗಿಕವಾಗಿ ಕಪ್ಪಾಗುತ್ತವೆ, ಗೋರಂಟಿಯಲ್ಲಿ ಈ ಒಂದು ವಸ್ತು ಬೆರೆಸಿ ಉಪಯೋಗಿಸಿ ನೋಡಿ!


* ಪದೇ ಪದೇ ಬ್ಲೋ ಡ್ರೈ ಮಾಡಬೇಡಿ: 
ಪದೇ ಪದೇ ಬ್ಲೋ ಡ್ರೈ ಬಳಸುವುದು ಅಥವಾ ಬಿಸಿ ಮಾಡುವ ಉಪಕರಣಗಳ ಅತಿಯಾದ ಬಳಕೆಯಿಂದ ಕೂದಲಿನ ಶುಷ್ಕತೆ ಹೆಚ್ಚಾಗುತ್ತದೆ ಮತ್ತು ಕೂದಲು ನಿರ್ಜೀವವಾಗಿ ಕಾಣಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.