Benefits Of Drinking Bottle Gourd Juice: ಸೋರೆಕಾಯಿ ಕುರಿತು ಬಹುತೇಕ ಜನರಿಗೆ ತಿಳಿದಿದೆ. ಆಂಗ್ಲ ಭಾಷೆಯಲ್ಲಿ ಇದನ್ನು ಬಾಟಲ ಗಾರ್ಡ್ ಎಂದು ಕರೆಯುತ್ತಾರೆ ಮತ್ತು ಇದು ಒಂದು ತರಕಾರಿಯ ರೂಪದಲ್ಲಿ ಬಳಕೆಯಾಗುತ್ತದೆ. ಹಲವರಿಗೆ ಸೋರೆಕಾಯಿ ಪಲ್ಯೆ ಇಷ್ಟವಾಗುತ್ತದೆ. ಆದರೆ, ಖಾಲಿ ಹೊಟ್ಟೆ ಸೋರೆಕಾಯಿ ಜ್ಯೂಸ್ ಸೇವಿಸುವುದರಿಂದ ಕೇವಲ 90 ದಿನಗಳಲ್ಲಿ ಕೊಲೆಸ್ಟ್ರಾಲ್ ಗೆ ಗುಡ್ ಬೈ ಹೇಳಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ.

COMMERCIAL BREAK
SCROLL TO CONTINUE READING

ಸೋರೆಕಾಯಿ ಜ್ಯೂಸ್ ಸೇವನೆಯಿಂದಾಗುವ ಅದ್ಭುತ ಲಾಭಗಳು
ನಮ್ಮಲ್ಲಿ ಬಹುತೇಕರಿಗೆ ಸೋರೆಕಾಯಿ ಪಲ್ಯೆ ಇಷ್ಟವಾಗುವುದಿಲ್ಲ. ಆದರೆ, ಒಂದು ವೇಳೆ ಇದರ ಲಾಭಗಳ ಕುರಿತು ನೀವು ತಿಳಿದುಕೊಂಡರೆ, ನೀವೂ ಕೂಡ ನಿಮ್ಮ ಡಯಟ್ ಪ್ಲಾನ್ ನಲ್ಲಿ ಸೋರೆಕಾಯಿಯನ್ನು ಶಾಮೀಲುಗೊಳಿಸುವಿರಿ. ಸೋರೆಕಾಯಿ ಸೇವಿಸುವುದರಿಂದ ನೀವು ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು. ಏಕೆಂದರೆ, ಸೋರೆಕಾಯಿಯಲ್ಲಿ ಹಲವು ರೀತಿಯ ಪ್ರೋಟೀನ್, ವಿಟಮಿನ್ ಹಾಗೂ ಮಿನರಲ್ ಗಳಿವೆ. ಅದರಲ್ಲಿಯೂ ಪ್ರಮುಖವಾಗಿ ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೆಸಿಯಂ ಹಾಗೂ ಜಿಂಕ್ ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ. ಈ ಪೌಷ್ಟಿಕಾಂಶಗಳು ದೇಹದ ಹಲವು ಅಗತ್ಯತೆಗಳನ್ನು ಪೂರೈಸುತ್ತವೆ. ಇದಲ್ಲದೆ ಸೋರೆಕಾಯಿ ಜ್ಯೂಸ್ ಒಂದು ಔಷಧಿಗಿಂತ ಕಡಿಮೆ ಏನು ಇಲ್ಲ.

ಸೋರೆಕಾಯಿ ಜ್ಯೂಸ್ ತಯಾರಿಸುವ ವಿಧಾನ
ಇದಕ್ಕಾಗಿ ಒಂದು ಸೋರೆಕಾಯಿಯನ್ನು ತೆಗೆದುಕೊಳ್ಳಿ ಮತ್ತು ಅದರ ಸಿಪ್ಪೆ ಸುಲಿದು ಬೀಜಗಳನ್ನು ತೆಗೆಯಿರಿ. ನಂತರ 15-20 ಪುದಿನಾ ಎಲೆಗಳನ್ನು ಕೂಡ ತೆಗೆದುಕೊಳ್ಳಿ. ಈಗ ಒಂದು ಚಮಚೆ ಜೀರಿಗೆ, 2-3 ಚಮಚೆ ನಿಂಬೆಹಣ್ಣಿನ ರಸ ಹಾಗೂ ರುಚಿಗೆ ತಕ್ಕಂತೆ ಉಪ್ಪನ್ನು ತೆಗೆದುಕೊಳ್ಳಿ. ಜ್ಯೂಸ್ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳು ಇದೀಗ ನಿಮ್ಮ ಬಳಿ ಇವೆ. ಈಗ ಈ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ, ಸ್ವಲ್ಪ ನೀರನ್ನು ಬೆರೆಸಿ ಚೆನ್ನಾಗಿ ಬ್ಲೆಂಡ್ ಮಾಡಿ. ಕೊಲೆಸ್ಟ್ರಾಲ್ ಅನ್ನು ಬುಡಸಮೇತ ಕಿತ್ತೆಸೆಯುವ ಜ್ಯೂಸ್ ಇದೀಗ ಮುಂದೆ ರೆಡಿಯಾಗಿದೆ. ಬೆಳಗ್ಗೆ ಎದ್ದಾಕ್ಷಣ ಈ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. 90 ದಿನಗಳವರೆಗೆ ನಿರಂತರವಾಗಿ ಇದನ್ನು ಸೇವಿಸಿ ಮತ್ತು ಇದರ ಜೊತೆಗೆ ನಿಮ್ಮ ಇತರ ಡಯಟ್ ಅನ್ನು ಕೂಡ ನಿಯಂತ್ರಣದಲ್ಲಿರಿಸಿ. 


ಇದನ್ನೂ ಓದಿ-ತೂಕ ಇಳಿಕೆಗಾಗಿ ಸಿರ್ಕಾಡಿಯನ್ ರಿದಮ್ ಉಪವಾಸದ ವಿಧಾನ ನಿಮಗೆಷ್ಟು ಗೊತ್ತು?

ಯಕೃತ್ತು ಹಾಗೂ ಹೃದಯ ಆರೋಗ್ಯಕ್ಕೆ ಉತ್ತಮವಾಗಿದೆ ಸೋರೆಕಾಯಿ
ನಿಯಮಿತವಾಗಿ ಮಧ್ಯಪಾನ ಹಾಗೂ ಧೂಮಪಾನದಲ್ಲಿ ನಿರತರಾಗಿರುವವರು ತಮ್ಮ ಶರೀರವನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಹೀಗಿರುವಾಗ ಯಕೃತ್ತು ಹಾಗೂ ಹೃದಯ ನಮ್ಮ ದೇಹದ ಎರಡು ಪ್ರಮುಖ ಅಂಗಗಳಾಗಿವೆ. ಸಾರಾಯಿ ಕುಡಿಯುವುದು ಮತ್ತು ಸಿಗರೆಟ್ ಸೇದುವುದರಿಂದ ಯಕೃತ್ತಿನಲ್ಲಿ ಬಾವು ಕಾಣಿಸಿಕೊಳ್ಳುತ್ತದೆ ಮತ್ತು ಉಸಿರಾಟದಲ್ಲಿ ಅಡಚಣೆ ಎದುರಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸೋರೆಯಾಯಿ ಜ್ಯೂಸ್ ಎನರ್ಜಿ ಡ್ರಿಂಕ್ ರೀತಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಮೊಟ್ಟಮೊದಲನೆಯದಾಗಿ ಮಧ್ಯಪಾನ-ಧೂಮಪಾನವನ್ನು ತ್ಯಜಿಸಿ ಮತ್ತು ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆ ಸೋರೆಕಾಯಿ ಜ್ಯೂಸ್ ಸೇವಿಸಲು ಆರಂಭಿಸಿ.


ಇದನ್ನೂ ಓದಿ-Summer Tips: ಬೇಸಿಗೆ ಕಾಲದಲ್ಲಿ ಲಾವಂಚ ಜ್ಯೂಸ್ ಸೇವನೆಯಿಂದ ಆಗುವ ಲಾಭಗಳು ನಿಮಗೆ ತಿಳಿದಿವೆಯೇ?


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-