ಬೆಂಗಳೂರು : ಹೇಳಿ ಕೇಳಿ ಇದು ಕರೋನಾ ಮಹಾಮಾರಿ (Coronavirus) ಹರಡುತ್ತಿರುವ ದುರ್ಬಿಕ್ಷ ಕಾಲ.  ಈ ಹೊತ್ತಿನಲ್ಲಿ ಆದಷ್ಟು ಮನೆಯೊಳಗಿದ್ದರೆ ಸೇಫ್. ಇಲ್ಲದೇ ಹೋದರೆ ಅಪಾಯ ತಪ್ಪಿದ್ದಲ್ಲ.  ಆದರೆ ಹಾಲು (Milk) , ಹಣ್ಣು ತರಕಾರಿಗಾಗಿ (Vegetable) ಮನೆ ಬಿಟ್ಟು ಹೊರಗೆ ಹೋಗಲೇ ಬೇಕಾಗುತ್ತದೆ. ಈ ಹೊತ್ತಿನಲ್ಲಿ ತರಕಾರಿ, ಹಣ್ಣು ಫ್ರೆಶ್ ಇದ್ದಷ್ಟು ಒಳ್ಳೆಯದು. ಫ್ರಿಜ್ ನಲ್ಲಿಟ್ಟ ತರಕಾರಿ, ಹಣ್ಣನ್ನು ದೂರ  ಇಡುವುದೇ ಸೂಕ್ತ. ಜೊತೆಗೆ ನಮ್ಮ  ಇಮ್ಯೂನಿಟಿ (Immunity) ಹೆಚ್ಚಿಸಲು ನಮ್ಮ ಊಟೋಪಚಾರದಲ್ಲಿ ಸಾಕಷ್ಟು ಹಸಿರು ತರಕಾರಿ, ಫ್ರೆಶ್ ಹಣ್ಣು ಇರಲೇ ಬೇಕು. ಹಾಗಾಗಿ, ಅದನ್ನೆಲ್ಲಾ ತರಲು ನೀವು ಮಾರುಕಟ್ಟೆಗೆ ಹೋಗಲೇ ಬೇಕು. ಆದರೆ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುವಾಗ ಈ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ. 


COMMERCIAL BREAK
SCROLL TO CONTINUE READING

ಹಣ್ಣು, ತರಕಾರಿ ಖರೀದಿಸುವಾಗ  ಈ ತಪ್ಪುಗಳನ್ನು ಮಾಡಬೇಡಿ :
1. ತರಕಾರಿ (Vegetables) ಖರೀದಿಗೆ ಮಾರುಕಟ್ಟೆಗೆ ಹೋಗುವಾಗ ಖಂಡಿತಾ ಮಾಸ್ಕ್ (Mask) ಸರಿಯಾದ ರೀತಿಯಲ್ಲಿ ಧರಿಸಿ
2. ಹಣ್ಣು ಖರೀದಿಸುವಾಗ ದಟ್ಟಣೆ ಇದ್ದರೆ ಆ ಜಾಗಕ್ಕೆ ಹೋಗಬೇಡಿ


ಇದನ್ನೂ ಓದಿ : Exercise- ದೀರ್ಘಾವಧಿಯ ಬಳಿಕ ವ್ಯಾಯಾಮ ಪ್ರಾರಂಭಿಸುತ್ತಿದ್ದರೆ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ


3. ಅಂಗಡಿಯವನಿಗೂ ನಿಮಗೂ ಕನಿಷ್ಠ 6 ಅಡಿ ದೂರವಿರಲಿ
4. ಅಂಗಡಿಯಾತನಿಗೆ ಮಾಸ್ಕ್ (Mask) ಸರಿಯಾಗಿ ಹಾಕಿಕೊಳ್ಳುವಂತೆ ತಾಕೀತು ಮಾಡಿ
5.  ಅಂಗಡಿಗೆ ಬಂದಿರುವ  ಇತರ ಗ್ರಾಹಕರಿಂದಲೂ (Customer) 6 ಅಡಿ ದೂರ ಇರಿ.
6. ಆದಷ್ಟೂ ತಾಜಾ ಹಣ್ಣು ತರಕಾರಿ ಖರೀದಿಸಿ
7. ಹೋಂ ಡೆಲಿವರಿ (Home delivery) ಹುಡುಗ ಮನೆಯ ಬಾಗಿಲ ಹ್ಯಾಂಡಲ್, ಡೋರ್ ಬೆಲ್, ಬ್ಯಾಗ್ ಮುಟ್ಟಿದ್ದರೆ ಅದನ್ನೂ ಸ್ಯಾನಿಟೈಸ್ ಮಾಡಿ.
8. ಹಣ್ಣು, ತರಕಾರಿ ಮನೆಗೆ ತಂದ ಮೇಲೆ ಬಿಸಿ ನೀರು (Hot water) ಮತ್ತು ಉಪ್ಪು ಹಾಕಿ ಚೆನ್ನಾಗಿ ತೊಳೆಯಿರಿ.
9. ತೊಳೆದಾದ ಮೇಲೆ ಕನಿಷ್ಠ 2 ಗಂಟೆ ಹಾಗೆ ಬಿಡಿ
10. ತರಕಾರಿ ತೊಳೆಯಲು ಅಡುಗೆ ಸೋಡಾ (Baking Soda) ಕೂಡಾ ಬಳಸಬಹುದು.


ಇದನ್ನೂ ಓದಿ : Relationship: ಪುರುಷರಲ್ಲಿ ಮಹಿಳೆಯರು ನೋಡುವುದೇನು? ಇಂಪ್ರೆಷನ್ ಹೊಡೆಯೋ ಮುನ್ನ ಈ ಸುದ್ದಿ ಓದ್ರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.