Beer: ಇತ್ತೀಚಿನ ದಿನಗಳಲ್ಲಿ ಬಿಯರ್ ಕುಡಿಯುವುದು ತುಂಬಾ ಸಾಮಾನ್ಯವಾಗಿದೆ. ಯುವಜನರಲ್ಲಿ ಬಿಯರ್ ಟ್ರೆಂಡ್ ವೇಗವಾಗಿ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಹುಡುಗರು ಮಾತ್ರವಲ್ಲ, ಹುಡುಗಿಯರೂ ಸಹ ಬಿಯರ್ ಕುಡಿಯುತ್ತಿದ್ದಾರೆ. ಬಿಯರ್ ಇಲ್ಲದೆ ಯಾವುದೇ ಪಾರ್ಟಿ ಪೂರ್ಣಗೊಳ್ಳುವುದಿಲ್ಲ. ಕಾರ್ಪೊರೇಟ್ ಕಂಪನಿಗಳೂ ಈ ಸಂಸ್ಕೃತಿಗೆ ಆಸರೆಯಾಗುತ್ತಿವೆ. 


COMMERCIAL BREAK
SCROLL TO CONTINUE READING

ಬಿಯರ್ ನಲ್ಲಿ ಇತರ ಆಲ್ಕೋಹಾಲ್ ಪಾನೀಯಗಳಿಗಿಂತ ಕಡಿಮೆ ಆಲ್ಕೋಹಾಲ್ ಅಂಶವಿದೆ.. ಕೂಲ್ ಬಿಯರ್ ಗಳು ಸುಡುವ ಶಕೆಯಿಂದ ಮುಕ್ತಿ ನೀಡುವುದರಿಂದ.. ಸ್ವಾಭಾವಿಕವಾಗಿ ಬಿಯರ್ ಸೇವನೆ ಹೆಚ್ಚಾಗುತ್ತಿದೆ. ಆದರೆ ಬಿಯರ್ ಕುಡಿಯುವಾಗ.. ಅನೇಕ ಆಹಾರ ಪದಾರ್ಥಗಳನ್ನು ತಿನ್ನುತ್ತಾರೆ.. ಬಿಯರ್ ಜೊತೆಗೆ ಚಿಕನ್, ಮಟನ್, ಆಮ್ಲೆಟ್, ಪಕೋಡಿ, ಡ್ರೈ ಫ್ರೂಟ್ಸ್, ಪಿಜ್ಜಾ, ಹಣ್ಣುಗಳನ್ನು ಹೆಚ್ಚು ಜನರು ಇಷ್ಟಪಡುತ್ತಾರೆ. ಹಲವರು ಮಾಂಸಾಹಾರಿ ಪದಾರ್ಥಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದು ಆರೋಗ್ಯಕ್ಕೆ ಅಪಾಯಕಾರಿ.. ಕುಡಿಯುವಾಗ ಮಸಾಲೆಯುಕ್ತ ಆಹಾರ ತಿಂದ್ರೆ ಅದು ದೇಹಕ್ಕೆ ಹಾನಿಯುಂಟು ಮಾಡಬಹುದು.. 


ಬಿಯರ್ ಅಥವಾ ಇತರ ಯಾವುದೇ ಆಲ್ಕೋಹಾಲ್ ಜೊತೆಗೆ ಚಿಕನ್ ಮತ್ತು ಮಟನ್ ನಂತಹ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಆಸಿಡ್ ರಿಫ್ಲಕ್ಸ್ ಸಮಸ್ಯೆಗಳು ಉಂಟಾಗಿ ಹೊಟ್ಟೆಯೂ ಉಬ್ಬುತ್ತದೆ. ಹೀಗಾಗಿ ಗ್ಯಾಸ್‌ನಂತಹ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತವೆ. ಬಿಯರ್ ಅನ್ನು ಬ್ರೆಡ್ ಜೊತೆಗೆ ತಿನ್ನಬಾರದು. ಏಕೆಂದರೆ ಬಿಯರ್ ಮತ್ತು ಬ್ರೆಡ್.. ಎರಡರಲ್ಲೂ ಯೀಸ್ಟ್ ಇರುತ್ತದೆ. ನಮ್ಮ ಹೊಟ್ಟೆಯು ಅಂತಹ ದೊಡ್ಡ ಪ್ರಮಾಣದ ಯೀಸ್ಟ್ ಅನ್ನು ಜೀರ್ಣಿಸಿಕೊಳ್ಳುವುದಿಲ್ಲ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. 


ಇದನ್ನೂ ಓದಿ-ಮೊದಲ ಹೆರಿಗೆಯ ನಂತರ ದೀಪಿಕಾ ಬಾಡಿ ಶೇಫ್‌ ಫುಲ್‌ ಚೇಂಜ್!‌ ಬಳುಕುವ ಬಳ್ಳಿಯಂತಿದ್ದ ನಟಿಯ ಈಗಿನ ಲುಕ್‌ ನೋಡಿ ಫ್ಯಾನ್ ಶಾಕ್‌!  


ಫ್ರೆಂಚ್ ಫ್ರೈಸ್ ಮತ್ತು ಚಿಪ್ಸ್ ಅನ್ನು ಸಹ ತಪ್ಪಿಸಬೇಕು. ಇದು ಹೆಚ್ಚಿನ ಪ್ರಮಾಣದ ಸೋಡಿಯಂ ಅನ್ನು ಹೊಂದಿರುತ್ತದೆ. ಇವುಗಳನ್ನು ಬಿಯರ್ ಜೊತೆಗೆ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ.  ಅನೇಕ ಜನರು ಬಿಯರ್ ಜೊತೆಗೆ ಉಪ್ಪು ಕಡಲೆಕಾಯಿ ಮತ್ತು ಒಣ ಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇವುಗಳಲ್ಲಿರುವ ಉಪ್ಪು ನಿರ್ಜಲೀಕರಣದ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದು ಎಡಿಮಾ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ನೀವು ಉಪ್ಪು ಕಡಿಮೆ ಇರುವ ಆಹಾರವನ್ನು ತೆಗೆದುಕೊಳ್ಳಬೇಕು.  


ಡಾರ್ಕ್ ಚಾಕೊಲೇಟ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದನ್ನು ಬಿಯರ್ ಜೊತೆ ಸೇವಿಸಿದರೆ ಹಲವು ಸಮಸ್ಯೆಗಳು ಉಂಟಾಗಬಹುದು. ಇತರ ಆಮ್ಲೀಯ ಆಹಾರಗಳಂತೆ, ಚಾಕೊಲೇಟ್ ಹೆಚ್ಚಿನ ಪ್ರಮಾಣದ ಕೆಫೀನ್, ಕೋಕೋ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಇದನ್ನು ಬಿಯರ್‌ನೊಂದಿಗೆ ಸೇವಿಸುವುದರಿಂದ ಜೀರ್ಣಾಂಗವ್ಯೂಹದ ತೊಂದರೆಗಳು ಉಂಟಾಗಬಹುದು. 


ಬಿಯರ್ ಜೊತೆಗೆ ನಾನ್ ವೆಜ್ ಫುಡ್ ಅನ್ನು ಹೆಚ್ಚು ಸೇವಿಸುವುದರಿಂದ ಹೊಟ್ಟೆಯ ಕೊಬ್ಬು ಹೆಚ್ಚಾಗುತ್ತದೆ.. ಆದ್ದರಿಂದ ಮೊಟ್ಟೆಯ ಬಿಳಿಭಾಗ, ಮೀನು ಮತ್ತು ಹಣ್ಣುಗಳನ್ನು ಸೇರಿಸಿ ತಯಾರಿಸಿದ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಬೇಯಿಸಿದ ನೆಲಗಡಲೆ ಮತ್ತು ಮೊಳಕೆಯೊಡೆದ ಬೀಜಗಳನ್ನು ಸಹ ತೆಗೆದುಕೊಳ್ಳಬಹುದು. 


ಇದನ್ನೂ ಓದಿ-ಜನ ಸಾಮಾನ್ಯರ ಬಗ್ಗೆ ಸರ್ಕಾರದ ಕಾಳಜಿ! ಅಗ್ಗವಾದ ಮೊಬೈಲ್ ರೀಚಾರ್ಜ್ ಪ್ಲಾನ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.