ಬೆಂಗಳೂರು : ಮನೆಯಲ್ಲಿ ಸದಾ ಸಮೃದ್ಧಿ ಇರಬೇಕು ಯಾವುದೇ ರೀತಿಯ ಆರ್ಥಿಕ ತೊಂದರೆ ಎದುರಾಗಬಾರದು ಎಂದೇ ಬಯಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೆಲವು ಪ್ರಮುಖ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಜ್ಯೋತಿಷ್ಯ  ಶಾಸ್ತ್ರದ ಸಲಹೆಗಳ ಪ್ರಕಾರ , ಅಡುಗೆಮನೆಯಲ್ಲಿ ಇರಿಸಲಾಗಿರುವ ಕೆಲವು ವಸ್ತುಗಳು ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.  ಆ ವಸ್ತುಗಳನ್ನು ಸಾಲ ನೀಡುವುದರಿಂದ ನಿಮ್ಮ ಮನೆಯ ಸಮೃದ್ಧಿಯನ್ನು  ನಿಂತು ಬಿಡಬಹುದು. ಹಾಗಾಗಿ ತಪ್ಪಿಯೂ ಆ ವಸ್ತುಗಳನ್ನು ಸಾಲವಾಗಿ ನೀಡಬಾರದು. 


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ, ಕೆಲವೊಮ್ಮೆ ಅಡುಗೆಮನೆಯಲ್ಲಿ ಕೆಲವು ಸಣ್ಣ ವಸ್ತುಗಳು ಮುಗಿದು ಹೋಗುತ್ತವೆ. ಆ ಹೊತ್ತಿನಲ್ಲಿ ಅಂಗಡಿಗೆ ಹೋಗುವ ಬದಲು ನೆರೆಹೊರೆಯವರಿಂದ ಆ ವಸ್ತುವನ್ನು ಸಾಲ ತೆಗೆದುಕೊಳ್ಳುತ್ತೇವೆ. ಅಥವಾ ನೆರೆಹೊರೆಯವರು ಆ ವಸ್ತುಗಳನ್ನು ನಿಮ್ಮಿಂದ ಸಾಲ ಪಡೆಯಬಹುದು. ಆದರೆ ಆ ವಸ್ತುಗಳನ್ನು ಸಾಲ ನೀಡಿದ್ದೇ  ಆದರೆ ಅದು ನಿಮ್ಮ ಮನೆಯ ಸಮೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. 


ಇದನ್ನೂ ಓದಿ : Chanakya Niti : ನಿಮ್ಮ ಹೆಂಡತಿಯಲ್ಲಿ ಈ 4 ಗುಣಗಳಿದ್ರೆ ನಿಮ್ಮಷ್ಟು ಅದೃಷ್ಟವಂತ ಬೇರೊಬ್ಬನಿಲ್ಲ


ಅರಿಶಿನ :
ಅರಿಶಿನವನ್ನು ಹಿಂದೂ ಧರ್ಮದಲ್ಲಿ ಬಹಳ ಮಂಗಳಕರ ಎಂದು ಪರಿಗಣಿಸಲಾಗಿದೆ. ಅರಿಶಿನವನ್ನು ಹೆಚ್ಚಿನ ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ,  ಗುರು ಗ್ರಹದೊಂದಿಗೆ ಅರಿಶಿನದ ನೇರ ಸಂಬಂಧವಿದೆ. ಆದ್ದರಿಂದ, ತಪ್ಪಿಯೂ ಅರಿಶಿನವನ್ನು ಯಾರಿಗೂ ಸಾಲವಾಗಿ ನೀಡಬಾರದು.  ಒಂದೊಮ್ಮೆ ಅರಶಿನವನ್ನು ಸಾಲವಾಗಿ ನೀಡಿದರೆ ವೈವಾಹಿಕ ಮತ್ತು ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗಬಹುದು.


ಅಡಿಗೆ ಉಪ್ಪು :
ಉಪ್ಪು ಬೀಳುವುದು ಅಶುಭ ಎಂದು ಹೆಚ್ಚಿನ ಜನರಿಗೆ ತಿಳಿದಿರುತ್ತದೆ. ಉಪ್ಪನ್ನು ಎಂದಿಗೂ ಸಾಲ ಕೂಡಾ ನೀಡಬಾರದು.  ಉಪ್ಪು ಖಾಲಿಯಾಗಿದ್ದರೆ, ಸಾಲ ಕೇಳುವ ಬದಲು,  ಅಂಗಡಿಯಿಂದ ಖರೀದಿಸಿ ತನ್ನಿ. ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಉಪ್ಪು ಖಾಲಿಯಾಗಬಾರದು ಮತ್ತು ಯಾರಿಗೂ ಉಪ್ಪನ್ನು ಕೊಡಬಾರದು. 


ಹಾಲು : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಾಲು ಚಂದ್ರ ಗ್ರಹಕ್ಕೆ ನೇರವಾಗಿ ಸಂಬಂಧಿಸಿದಾಗಿದೆ. ಆದ್ದರಿಂದ ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಯಾರಿಗೂ ಸಾಲವಾಗಿ ನೀಡುವುದು ಮಂಗಳಕರವಲ್ಲ. ವಿಶೇಷವಾಗಿ ಸೂರ್ಯಾಸ್ತದ ನಂತರ ಯಾರಿಗೂ ಹಾಲು ಕೊಡಬಾರದು.


ಇದನ್ನೂ ಓದಿ : Grah Gochar 2022: ಮೂರು ದಿನಗಳ ಬಳಿಕ ಈ ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ ಹಾಗೂ ಸ್ಥಾನಮಾನ


ಬೆಳ್ಳುಳ್ಳಿ-ಈರುಳ್ಳಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಳ್ಳುಳ್ಳಿ ಈರುಳ್ಳಿಯು ಕೇತು ಗ್ರಹಕ್ಕೆ ಸಂಬಂಧಿಸಿದೆ. ಇದನ್ನೂ ಸಾಲವಾಗಿ ನೀಡಿದರೆ ಮನೆಯ ವ್ಯಾಪಾರ ವ್ಯವಹಾರ ಸ್ಥಗಿತಗೊಳ್ಳುತ್ತದೆ. ಸಂಜೆಯಾ ಹೊತ್ತು ಮರೆತು ಕೂಡಾ ಬೆಳ್ಳುಳ್ಳಿ, ಈರುಳ್ಳಿಯನ್ನು ಸಾಲವಾಗಿ ನೀಡಬಾರದು ಎಂದು ಹೇಳಲಾಗುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.