ರಾತ್ರೋರಾತ್ರಿ ಅದೃಷ್ಟ ಬದಲಾಗಲು ತುಳಸಿ ಕಟ್ಟೆಯ ಮೇಲಿರಲಿ ಈ ಶುಭ ಚಿಹ್ನೆಗಳು!
Tulsi Pot Tips: ತುಳಸಿ ಪಾತ್ರೆಯ ಮೇಲೆ ಕೆಲ ವಿಶೇಷ ರೀತಿಯ ಚಿಹ್ನಗಳನ್ನು ನಿರ್ಮಿಸಿದರೆ ಅದೃಷ್ಟದ ಬೆಂಬಲ ಸಿಗಲಾರಂಭಿಸುತ್ತದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಉಂಟಾಗಿ, ಮನೆಯ ವಾತಾವರಣ ಖುಷಿಯಿಂದ ತುಂಬುತ್ತದೆ.
Tulsi Pot Remedies: ಹಿಂದೂ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ಜನರು ಇದನ್ನು ಮನೆಯಲ್ಲಿ ನೆಡುವುದು ಶುಭವೆಂದು ಪರಿಗಣಿಸುತ್ತಾರೆ. ತುಳಸಿಯನ್ನು ಪ್ರತಿದಿನ ಪೂಜಿಸುವುದರಿಂದ ಅನೇಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ತುಳಸಿ ಗಿಡ ನೆಡುವುದರಿಂದ, ಮನೆಯಲ್ಲಿ ಧನಾತ್ಮಕ ಶಕ್ತಿಯು ಹರಡುತ್ತದೆ ಮತ್ತು ಮನೆಯಲ್ಲಿ ಸಂತೋಷವು ಬರಲು ಪ್ರಾರಂಭಿಸುತ್ತದೆ ಎನ್ನಲಾಗುತ್ತದೆ. ತುಳಸಿಯನ್ನು ಪೂಜಿಸುವ ಮೂಲಕ, ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಳಸಿಯ ಪಾತ್ರೆಯ ಮೇಲೆ ಕೆಲವು ವಿಶೇಷ ಚಿಹ್ನೆಗಳನ್ನು ಹಾಕಿದರೆ ಅದೃಷ್ಟದ ಬೆಂಬಲ ಸಿಗುತ್ತದೆ ಎನ್ನಲಾಗುತ್ತದೆ.
ಚಕ್ರ
ತುಳಸಿಯ ಕುಂಡದಲ್ಲಿ ಚಕ್ರದ ಗುರುತು ಅಥವಾ ಚಿಹ್ನೆಯನ್ನು ಬರೆದರೆ, ಅದು ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ. ಇದರಿಂದ ವ್ಯಕ್ತಿಯ ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳು ದೂರಾಗುತ್ತವೆ. ಧನಾತ್ಮಕ ಶಕ್ತಿಯು ಮನೆಯಲ್ಲಿ ಸಂಚರಿಸುತ್ತದೆ ಮತ್ತು ಮನಸ್ಸು ಶಾಂತವಾಗುತ್ತದೆ.
ಇದನ್ನೂ ಓದಿ-ಕೇಂದ್ರ ತ್ರಿಕೋನ ರಾಜಯೋಗ ನಿರ್ಮಾಣ, 3 ರಾಶಿಗಳ ಜನರ ಜೀವನಲ್ಲಿ ಹಣದ ಹೊಳೆಯೇ ಹರಿಯಲಿದೆ!
ಸ್ವಸ್ತಿಕ
ತುಳಸಿ ಕುಂಡದ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಮಾಡುವುದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ತುಳಸಿ ಮಡಿಕೆಯ ಮೇಲೆ ಸ್ವಸ್ತಿಕ್ ಗುರುತು ಮಾಡುವುದರಿಂದ, ತಾಯಿ ಲಕ್ಷ್ಮಿಯ ಜೊತೆಗೆ ಶ್ರೀವಿಷ್ಣು ಕೂಡ ಪ್ರಸನ್ನನಾಗುತ್ತಾನೆ ಮತ್ತು ವ್ಯಕ್ತಿಯ ಮನೆಯನ್ನು ಸಂತೋಷ ಮತ್ತು ಸಮೃದ್ಧಿಯನ್ನು ತುಂಬುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ.
ಇದನ್ನೂ ಓದಿ-50 ವರ್ಷಗಳ ಬಳಿಕ ಸಿಂಹ ರಾಶಿಯಲ್ಲಿ ಮೂರು ಗ್ರಹಗಳ ಅಪರೂಪದ ಮೈತ್ರಿ, ಈ ಜನರ ಮೇಲೆ ಅಪಾರ ಧನವೃಷ್ಟಿ!
ಶಂಖ
ಪೂಜೆಯಲ್ಲಿ ಶಂಖದ ಬಳಕೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಅಷ್ಟೇ ಅಲ್ಲ ಬೆಳಗ್ಗೆ ಮತ್ತು ಸಂಜೆ ಶಂಖದ ಶಬ್ದವು ಪ್ರತಿಧ್ವನಿಸುವ ಮನೆಯಲ್ಲಿ, ನಕಾರಾತ್ಮಕತೆ ಎಂದಿಗೂ ಆ ಮನೆಯಲ್ಲಿ ಉಳಿಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತುಳಸಿಯ ಕುಂಡದ ಮೇಲೆ ಶಂಖದ ಚಿತ್ರವನ್ನು ಬರೆಯುವುದರಿಂದ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಶ್ರೀ ವಿಷ್ಣುವಿನ ಆಶೀರ್ವಾದ ಪ್ರಾಪ್ತಿಯಾಗುತ್ತದೆ.
ಇದನ್ನೂ ಓದಿ-ನವೆಂಬರ್ 4ರವರೆಗೆ ಶನಿ ಕೃಪೆಯಿಂದ ಈ ಜನರಿಗೆ ಸಿಗಲಿದೆ ವೃತ್ತಿ-ವ್ಯಾಪಾರದಲ್ಲಿ ಅಪಾರ ಯಶಸ್ಸು!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.