Swapna Shastra: ಕೆಲವೊಮ್ಮೆ ನಾವು ಕಾಣುವ ಕನಸಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದೆನಿಸುತ್ತದೆ. ಆದರೆ, ಸ್ವಪ್ನ ಶಾಸ್ತ್ರದ ಪ್ರಕಾರ, ನಾವು ಕಾಣುವ ಕನಸಿಗೂ ನಮ್ಮ ಭವಿಷ್ಯಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಪ್ರತಿ ಕನಸಿಗೂ ಒಂದು ಅರ್ಥವಿದೆ. ಕನಸುಗಳು ನಮ್ಮ ಭವಿಷ್ಯದಲ್ಲಿ ಸಂಭವಿಸಬಹುದಾದ ಶುಭ-ಅಶುಭ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತವೆ ಎಂದು ನಂಬಲಾಗಿದೆ. ಅಂತೆಯೇ, ಕನಸಿನಲ್ಲಿ ಕೆಲವು ಪ್ರಾಣಿಗಳನ್ನು ಕಾಣುವುದನ್ನು ಅದೃಷ್ಟದ ಸಂಕೇತ ಎಂದು ಇದರಲ್ಲಿ ಬಣ್ಣಿಸಲಾಗಿದೆ. ಹಾಗಿದ್ದರೆ, ಕನಸಿನಲ್ಲಿ ಯಾವ ಪ್ರಾಣಿಗಳನ್ನು ಕಾಣುವುದು ಶುಭ ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಕನಸಿನಲ್ಲಿ ಈ ಪ್ರಾಣಿಗಳನ್ನು ಕಂಡರೆ ಖುಲಾಯಿಸಲಿದೆ ಅದೃಷ್ಟ:
ಹಸು:

ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಹಸುವನ್ನು ಕಾಣುವುದು ತುಂಬಾ ಅದೃಷ್ಟ. ಇದು ನಿಮ್ಮೆಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ ಎಂಬುದನ್ನು ಸೂಚಿಸುತ್ತದೆ.


ಆನೆ:
ಕನಸಿನಲ್ಲಿ ಆನೆಯನ್ನು ಕಾಣುವುದು ಶೀಘ್ರದಲ್ಲೇ ನಿಮಗೆ ಅದೃಷ್ಟ ಖುಲಾಯಿಸಲಿದೆ. ನಿಮ್ಮ ಜೀವನದಲ್ಲಿ ಹಠಾತ್ ಲಾಭವಾಗಲಿದ್ದು  ನಿಮ್ಮೆಲ್ಲಾ ಕಷ್ಟಗಳು ಕೊನೆಗೊಳ್ಳಲಿವೆ ಎಂಬುದರ ಸಂಕೇತವಾಗಿದೆ. 


ಇದನ್ನೂ ಓದಿ- ಕನಸಿನಲ್ಲಿ ಚಂದ್ರನನ್ನು ಯಾವ ರೀತಿ ಕಂಡರೆ ಏನು ಫಲ!


ಗೂಬೆ:
ಕನಸಿನಲ್ಲಿ ಗೂಬೆಯನ್ನು ಕಂಡರೆ ಶೀಘ್ರವೇ ಸಂಪತ್ತಿನ ದೇವತೆಯಾದ ಲಕ್ಷ್ಮಿಯ ಕೃಪಾಕಟಾಕ್ಷ ನಿಮಗೆ ದೊರೆಯಲಿದೆ. ನಿಮ್ಮ ಕನಸುಗಳು ಶೀಘ್ರದಲ್ಲೇ ನನಸಾಗಲಿವೆ ಎಂಬುದನ್ನು ಸೂಚಿಸುತ್ತದೆ.


ಕಪ್ಪು ಬಣ್ಣದ ಹಾವು:
ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಪ್ಪು ಬಣ್ಣದ ಹಾವನ್ನು ಕಾಣುವುದು ಕೂಡ ತುಂಬಾ ಅದೃಷ್ಟ. ಇದು, ಶೀಘ್ರದಲ್ಲೇ ನಿಮ್ಮ ಆಸೆ ಈಡೇರಲಿದೆ ಎಂಬುದನ್ನು ಬಿಂಬಿಸುತ್ತದೆ.


ಹಲ್ಲಿ:
ಕನಸಿನಲ್ಲಿ ಹಲ್ಲಿಯನ್ನು ಕಾಣುವುದು ಕೂಡ ಮಂಗಳಕರ. ಇದು ಶೀಘ್ರದಲ್ಲೇ ನಿಮಗೆ ಧನಲಾಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.


ಇದನ್ನೂ ಓದಿ- Amavasya Dream Meaning : ಅಮಾವಾಸ್ಯೆಯ ರಾತ್ರಿ ಕನಸಿನಲ್ಲಿ ಪೂರ್ವಜರನ್ನ ಕಂಡರೆ ಏನರ್ಥ ಗೊತ್ತಾ?


ಮೊಲ:
ಕನಸಿನಲ್ಲಿ ಮೂಲವನ್ನು ಕಂಡರೆ ನಿಮ್ಮ ಜೀವನದಲ್ಲಿ ಪ್ರೀತಿ-ಪ್ರಣಯದ ಸಮಯ ಸನಿಹದಲ್ಲಿದೆ ಎಂಬುದರ ಸಂಕೇತವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.