ನವದೆಹಲಿ : Dream Interpretation: ಸ್ವಪ್ನ ಶಾಸ್ತ್ರದ (Swapna Shastra) ಪ್ರಕಾರ ಕನಸುಗಳು ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ. ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ. ಕನಸುಗಳು ಆರೋಗ್ಯ, ಹಣ, ವ್ಯಾಪಾರ ಇತ್ಯಾದಿಗಳೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಅತ್ಯಂತ ಕೆಟ್ಟ ಫಲವನ್ನು ನೀಡುವ 4 ಕನಸುಗಳು ಯಾವುವು ನೋಡೋಣ. 


COMMERCIAL BREAK
SCROLL TO CONTINUE READING

ಕನಸಿನಲ್ಲಿ ಬಟ್ಟೆಯ ಮೇಲಿನ ಕಲೆಗಳನ್ನು ನೋಡುವುದು :
ಸ್ವಪ್ನ ಶಾಸ್ತ್ರದ (Swapna Shastra)  ಪ್ರಕಾರ, ಕನಸಿನಲ್ಲಿ ಹಳದಿ ಬಣ್ಣದ ಬಟ್ಟೆಯ ಮೇಲೆ ಕಲೆ ಅಥವಾ ಮಚ್ಚೆಯನ್ನು ನೋಡಿದರೆ ಅದು ಅಶುಭ ಫಲದ ಸಂಕೇತ . ಯಾರಾದರೂ ಕನಸಿನಲ್ಲಿ ಹಳದಿ ಬಟ್ಟೆಯ ಮೇಲೆ ಕಲೆಗಳನ್ನು ನೋಡಿದರೆ, ಅದು ಮುಂದೆ ಸಂಭವಿಸಲಿರುವ ಹಣಕಾಸಿನ ನಷ್ಟದ ಬಗ್ಗೆ ಹೇಳುತ್ತದೆ.  ಹಾಗಾಗಿ, ಈ ಕನಸು ಬಿದ್ದು ಎಚ್ಚರವಾದ ಕೂಡಲೇ, ಲಕ್ಷ್ಮೀ ದೇವಿಗೆ (godess Lakshmi) ಕೆಂಪು ಬಣ್ಣದ ವಸ್ತ್ರವನ್ನು ಅರ್ಪಿಸಬೇಕು.


ಇದನ್ನೂ ಓದಿ : Shadgrahi Yoga : ಈ 6 ಗ್ರಹಗಳು ಕೂಡುವುದು ತುಂಬಾ ಅಪರೂಪ : ಇದರಿಂದ 3 ರಾಶಿಯವರಾಗುತ್ತಾರೆ ಶ್ರೀಮಂತರು!


ಒಂದಕ್ಕಿಂತ ಹೆಚ್ಚು ಪ್ರಾಣಿಗಳನ್ನು ನೋಡುವುದು :
ಕನಸಿನಲ್ಲಿ ಒಂದಕ್ಕಿಂತ ಹೆಚ್ಚು ಪ್ರಾಣಿಗಳನ್ನು ನೋಡುವುದು ಒಳ್ಳೆಯ ಶಕುನವಲ್ಲ. ಅಂತಹ ಕನಸು ಕ್ಷೀಣಿಸುತ್ತಿರುವ ಆರೋಗ್ಯವನ್ನು (Health Problem) ಸೂಚಿಸುತ್ತದೆ. ಈ ಕನಸಿನ ಅಶುಭ ಪರಿಣಾಮವನ್ನು ಹೋಗಲಾಡಿಸಲು, ಎದ್ದ ನಂತರ, ಕೆಂಪು ಬಟ್ಟೆಯನ್ನು ದಾನ ಮಾಡಬೇಕು. 


ಕಪ್ಪು ಬೆಕ್ಕು :
 ಶಾಸ್ತ್ರದ  ಪ್ರಕಾರ, ಕನಸಿನಲ್ಲಿ ಕಪ್ಪು ಬೆಕ್ಕನ್ನು ನೋಡುವುದು ಮುಂದೆ ಸಂಭವಿಸಬಹುದಾದ ದೊಡ್ಡ ಅಪಘಾತವನ್ನು ಸೂಚಿಸುತ್ತದೆ. ಈ ಕನಸು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಅಶುಭ ಕನಸಿನ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಶಿವನಿಗೆ (Lord Shiva) ನೀರನ್ನು ಅರ್ಪಿಸಬೇಕು. 


ಇದನ್ನೂ ಓದಿ : Astrology: ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರಾಗುತ್ತಾರೆ ಈ 5 ರಾಶಿಯ ಜನ


ಬಾಗಿಲಿನ ಬೀಗವನ್ನು  ಕಾಣುವುದು :
ಕನಸಿನಲ್ಲಿ ಬಾಗಿಲು ಮುಚ್ಚಿರುವುದನ್ನು ನೋಡುವುದು ಅಶುಭ ಸಂಕೇತವನ್ನು ಸೂಚಿಸುತ್ತದೆ.  ಗ್ರಂಥಗಳ ಪ್ರಕಾರ, ಅಂತಹ ಕನಸುಗಳನ್ನು ಕಾಣುವ ಜನರ ವೃತ್ತಿಜೀವನದಲ್ಲಿ ಕೆಲವು ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಮಂಗಳವಾರ ಹನುಮಂತನಿಗೆ (Hanuman)  ಕೆಂಪು ಸಿಂಧೂರವನ್ನು ಅರ್ಪಿಸಬೇಕು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.